ಶನಿವಾರಸಂತೆ, ಡಿ. ೧೭: ಸಮೀಪದ ಗುಡುಗಳಲೆಯ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಿವೃತ್ತ ನೌಕರ ಎ.ಎಸ್. ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆ ನಡೆಯಿತು.

ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಎನ್.ಎಸ್. ಜಯರಾಮ್ ನೀರುಗುಂದ, ಉಪಾಧ್ಯಕ್ಷರಾಗಿ ಎಸ್.ಬಿ. ನಂಜಪ್ಪ ಶಿರಂಗಾಲ, ಕಾರ್ಯದರ್ಶಿಯಾಗಿ ಬಿ.ಬಿ. ನಾಗರಾಜ್, ಖಜಾಂಚಿಯಾಗಿ ಡಿ.ಬಿ. ಸೋಮಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಎನ್.ಎಸ್. ಜಯರಾಮ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಮುಖ್ಯವಾಗಿದ್ದು ಸಹಕಾರ ದೊರೆತಲ್ಲಿ ಸಂಘದ ಕಚೇರಿಗೆ ಜಾಗವನ್ನು ಶೀಘ್ರ ಗುರುತಿಸಲಾಗುವುದು ಎಂದರು.

ಶನಿವಾರಸAತೆ ಮತ್ತು ಕೊಡ್ಲಿಪೇಟೆ ಹೋಬಳಿಗಳ ನಿವೃತ್ತ ಸರ್ಕಾರಿ ನೌಕರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ನಾಗರಾಜ್ ವಂದಿಸಿದರು.