ಮಡಿಕೇರಿ, ಡಿ. ೧೮: ಶಾಪ ವಿಮೋಚಕ., ದೋಷ ನಿವಾರಕನೆಂದು ಪೂಜಿಸಲ್ಪಡುವ ಷಣ್ಮುಗನೆಂದು ಕರೆಯಲಾಗುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾದಿ ಕಾರ್ಯಗಳು ನೆರವೇರಿದವು. ಬೈರಂಬಾಡದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜೆ ನೆರವೇರಿದರೆ, ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ದೇವಾಲಯದಲ್ಲಿ ಉತ್ಸವದ ಅಂಗವಾಗಿ ವೈಭವೋಪೇತ ರಥೋತ್ಸವ ಜರುಗಿತು. ಹರಿಹರ ಶ್ರೀ ಸುಬ್ರಹ್ಮಣ್ಯ ದೇವಾಲಯ, ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯ, ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜಾದಿ ಕಾರ್ಯಗಳು ನೆರವೇರಿದವು. ಪೂಜಾ ಕಾರ್ಯಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಬೈರಂಬಾಡದಲ್ಲಿ ಭಕ್ತ ಸಾಗರ
ವೀರಾಜಪೇಟೆ: ಕೊಡಗಿನ ಸುಬ್ರಹ್ಮಣ್ಯ ದೇವರ ನೆಲೆಯೆಂದೇ ಹೆಸರು ವಾಸಿಯಾಗಿರುವ ಅಮ್ಮತ್ತಿ ಒಂಟಿ ಯಂಗಡಿ ಬಳಿಯ ಬೈರಂಬಾಡ ಗ್ರಾಮದ ಸುಬ್ರಹ್ಮಣ್ಯ ದೇಗುಲದಲ್ಲಿ ಷಷ್ಠಿ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮುಂಜಾನೆಯಿAದಲೇ ಭಕ್ತರು ಬೈರಂಬಾಡದ ಸನ್ನಿಧಿಗೆ ಆಗಮಿಸಿ ಹಣ್ಣು ಕಾಯಿ, ಹರಕೆಯನ್ನು ಸಮರ್ಪಿಸಿದರು.
ದೇವರ ಸನ್ನಿಧಿಗೆ ಬೆಳಗ್ಗೆಯಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ತೆರಳಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬAತು.
ದೇವಾಲಯದಲ್ಲಿ ಬೆಳಿಗ್ಗೆ ೪ ರಿಂದಲೇ ಪ್ರಧಾನ ಅರ್ಚಕರ ನೇತೃತ್ವ ದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊAಡವು. ದೇವರಿಗೆ ಪಂಚಾಮೃ ತಾಭಿಷೇಕ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕಗಳು ನಡೆದವು. ಉತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು.
ಜಿಲ್ಲೆಯ ನಾನಾ ಭಾಗಗಳಿಂದ ಅಧಿಕ ಭಕ್ತಾದಿಗಳು ದೇವರ ದರ್ಶನಕ್ಕೆ ತಂಡೋಪತAಡವಾಗಿ ಬಂದು ದರ್ಶನ ಪಡೆದರು. ಭಕ್ತಾದಿಗಳೊಂದಿಗೆ ಅಯ್ಯಪ್ಪಸ್ವಾಮಿ ವ್ರತಾಧಾರಿಗಳು ಪೂಜೆ ಸಲ್ಲಿಸಿದರು. ಜಾತ್ರಾ ಮಹೋ ತ್ಸವಕ್ಕಾಗಿ ಆಗಮಿಸಿದ ಭಕ್ತಾದಿಗಳಿಗೆ ಕೂರಲು ಸೂಕ್ತವಾದ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ದೇವರಿಗೆ ಮಹಾಮಂಗಳಾರತಿ ಸೇವೆ ನಡೆಯಿತು. ಇದೇ ಸಂದರ್ಭ ಭಕ್ತಾದಿಗಳಿಗೆ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
ಹರಕೆ ಹೊತ್ತ ಭಕ್ತರು ಸುಬ್ರಹ್ಮಣ್ಯ ದೇವರಿಗೆ ನಾಗನರೂಪ, ಆಳ್ರೂಪ ಮುಂತಾದ ಪ್ರತಿರೂಪಗಳನ್ನು ದೇಗುಲಕ್ಕೆ ಒಪ್ಪಿಸಿದರು. ದೇವಾಲಯದ ಹೊರಭಾಗದಲ್ಲಿ ಭಕ್ತಾದಿಗಳು ಕೇಶ ಮುಂಡನ ಮಾಡಿಸಿಕೊಂಡು ಹರಕೆ ಒಪ್ಪಿಸಿದರು. ಸೂಕ್ತ ರೀತಿಯಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಾಹನಗಳ ನಿಲುಗಡೆಗೆ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ನಿಯಂತ್ರಣದಲ್ಲಿ ತೊಡಗಿಕೊಂಡಿದ್ದರು. ದೇವಾಲಯದ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಮಳಿಗೆಗಳನ್ನು ಹಾಕಿಕೊಂಡು ಮಾರಾಟದಲ್ಲಿ ತೊಡಗಿದ್ದರು.
ದೇವಾಲಯಕ್ಕೆ ತೆರಳುವ ಹಾದಿಯುದ್ದಕ್ಕೂ ವಿವಿಧೆಡೆಗಳಿಂದ ಆಗಮಿ ಸಿದ್ದ ಭಿಕ್ಷÄಕರು ಭಿಕ್ಷಾಟನೆ ಮಾಡುತ್ತಿದ್ದರು. ಭಕ್ತರು ದೇವರ ಹೆಸರಿನಲ್ಲಿ ಅಕ್ಕಿ ಹಾಗೂ ಹಣವನ್ನು ಭಿಕ್ಷೆಯ ರೂಪದಲ್ಲಿ ನೀಡುತ್ತಿದ್ದರು.
ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಪ್ರಮುಖರು ಮಾತ ನಾಡಿ, ಹಿಂದಿನ ವರ್ಷಗಳಂತೆ ಈ ಬಾರಿಯೂ ಷಷ್ಠಿಯನ್ನು ವಿಜೃಂಭಣೆ ಯಿಂದ ಆಚರಿಸಲಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದ್ದಾರೆ ಎಂದರು.
ದೇವಾಲಯದ ಆಡಳಿತ ಮಂಡಳಿ ವತಿಯಿಂದ ಆಗಮಿಸಿದ ಭಕ್ತಾದಿಗಳಿಗೆ ಸೂಕ್ತವಾದ ವ್ಯವಸ್ಥೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸರ್ವರೂ ಹಾಜರಿದ್ದರು. ಮಡಿಕೇರಿ: ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದಲೇ ಪೂಜೆ, ಅಭಿಷೇಕಗಳೊಂದಿಗೆ ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಎಲ್ಲರಿಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿ ದೇವಾಲಯದ ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಡೆಯಿತು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಪಿ.ಎಲ್. ದೇವರಾಜು ಉಸ್ತುವಾರಿಯಲ್ಲಿ ಕಾರ್ಯಕ್ರಮಗಳು ನಡೆದವು.
ಮಡಿಕೇರಿ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ವತಿಯಿಂದ ಷಷ್ಠಿ ಮಹೋತ್ಸವ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕಗಳು, ಪುಷ್ಪಾರ್ಚನೆ, ಮಂಗಳಾರತಿ, ಮಹಾಪುಜೆ ನೆರವೇರಿದವು. ಇದರೊಂದಿಗೆ ವಿಶೇಷವಾಗಿ ಮುತ್ತಪ್ಪ ದೇವರ ವೆಳ್ಳಾಟಂ, ಗುಳಿಗ, ಪೋದಿ ದೇವರ ವೆಳ್ಳಾಟಂ, ಸುಬ್ರಹ್ಮಣ್ಯ ದೇವರ ಭೂತ ಬಲಿ ನೆರವೇರಿತು. ಮಧ್ಯಾಹ್ನ ಮಹಾ ಮಂಗಳಾರತಿ ಬಳಿಕ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಭಜನೆ ಹಾಗೂ ರಂಗಪೂಜೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಇನ್ನುಳಿದಂತೆ ನಗರದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜಾದಿ ಕಾರ್ಯಗಳು ನೆರವೇರಿದವು.
ಕೂಡಿಗೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಮೀಪದಲ್ಲಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ಮಹಾರಥೋತ್ಸವವು ನಡೆಯುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಸಚಿವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ರಾಜ್ಯ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯ ದರ್ಶಿ ಚಂದ್ರಮೌಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕೆ.ಪಿ.ಸಿ.ಸಿ. ಸದಸ್ಯರಾದ ಮಂಜುನಾಥ್ ಗುಂಡೂರಾವ್, ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಟಿ.ಪಿ. ಹಮೀದ್, ಕುಶಾಲನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರಾಜ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಸೇರಿದಂತೆ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಮುಳ್ಳೂರು: ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶನಿವಾರಸಂತೆ ವಿವಿದೆಢೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸೋಮವಾರ ಷಷ್ಠಿ ಹಬ್ಬವನ್ನು ಶನಿವಾರಸಂತೆ ವಿವಿಧೆಡೆಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಉಪವಾಸ ವ್ರತದೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಷಷ್ಠಿ ಹಬ್ಬದ ಪ್ರಯುಕ್ತ ತಮ್ಮ ಮನೆಗಳಲ್ಲಿ ಬೆಳಿಗ್ಗೆಯಿಂದ ಉಪವಾಸ ವ್ರತದಲ್ಲಿದ್ದ ಮಹಿಳೆಯರು ಮತ್ತು ಪುರುಷರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಹಬ್ಬದ ಅಡುಗೆ ತಯಾರಿಸಿ ಭೋಜನ ಮಾಡಿದರು. ಷಷ್ಠಿ ಹಬ್ಬದ ಪ್ರಯುಕ್ತ ಅಕ್ಕಪಕ್ಕದ ಮನೆಯವರಿಗೆ ವಿವಿಧ ತರಕಾರಿ, ಕಾಯಿಪಲ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಸೋಮವಾರ ಬೆಳಿಗ್ಗೆ ಹಬ್ಬದ ಪ್ರಯುಕ್ತ ಶನಿವಾರಸಂತೆ ವಿವಿಧೆಡೆಯಲ್ಲಿ ಚಿಕ್ಕ ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಬಂದು ತರಕಾರಿ ಕಾಯಿಪಲ್ಯ ಕೊಟ್ಟು ವಿನಿಮಯ ಮಾಡಿಕೊಂಡರು. ಈ ಮೂಲಕ ಷಷ್ಠಿ ಹಬ್ಬವನ್ನು ಆಚರಿಸಿದರು. ಷಷ್ಠಿ ಹಬ್ಬದ ಪ್ರಯುಕ್ತ ಕೆಲವು ಭಕ್ತಾದಿಗಳು ಪಕ್ಕದ ಹಾಸನ ಜಿಲ್ಲೆಯ ರಾಮನಾಥಪುರ ಮತ್ತೆ ಕೆಲವು ಭಕ್ತಾಧಿಗಳು ಕುಶಾಲನಗರದ ಕಣಿವೆ ಗ್ರಾಮದಲ್ಲಿ ನಡೆದ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು.ಗೋಣಿಕೊಪ್ಪಲು: ಮುಂಜಾನೆಯ ಚುಮು ಚುಮು ಚಳಿ, ಮಳೆಯ ಸಿಂಚನದ ನಡುವೆ ದೇವಾಲಯಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸಿ ಸುಬ್ರಹ್ಮಣ್ಯ ಸ್ವಾಮಿಗೆ ಹರಕೆಗಳನ್ನು ತೀರಿಸಿ ಪುನೀತರಾದರು.
ಗೋಣಿಕೊಪ್ಪಲುವಿನ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಪೂಜಾ ಕೈಂಕರ್ಯಗಳು ಮುಂಜಾನೆಯಿAದಲೇ ನಡೆದವು. ಚಳಿಯನ್ನು ಲೆಕ್ಕಿಸದೆ ಮಹಿಳೆಯರು ಮಕ್ಕಳಾದಿಯಾಗಿ ದೇವಾಲಯಕ್ಕೆ ಆಗಮಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಭಕ್ತರಿಗೆ ಅನುಕೂಲವಾಗುವಂತೆ ದೇವಾಲಯ ಸಮಿತಿ ವತಿಯಿಂದ ವ್ಯವಸ್ಥಿತ ರೀತಿಯಲ್ಲಿ ದೇವರ ದರ್ಶನ ಹಾಗೂ ಪೂಜೆ ನಡೆಸಲು ಅವಕಾಶ ಕಲ್ಪಿಸಿದ್ದರು. ದೇವಾಲಯ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ತುಲಾಭಾರ ಸೇರಿದಂತೆ ಹಲವು ರೀತಿಯ ಪೂಜಾ ಕಾರ್ಯಗಳು ಯಶಸ್ವಿಯಾಗಿ ನಡೆದವು. ಆಡಳಿತ ಮಂಡಳಿಯ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ, ಉಪಾಧ್ಯಕ್ಷರಾದ ಕೊಪ್ಪೀರ ಸನ್ನಿ ಸೋಮಯ್ಯ, ಕಾರ್ಯದರ್ಶಿ ಕುಲ್ಲಚಂಡ ಪ್ರಮೋದ್ ಗಣಪತಿ, ಖಜಾಂಜಿ ಜಪ್ಪೆಕೋಡಿ ಉತ್ತಪ್ಪ, ನಿರ್ದೇಶಕರಾದ ವಿ.ಟಿ. ವಾಸು, ಶೋಬಿತ್, ಸಿ.ಡಿ. ಮಾದಪ್ಪ, ಕೆ.ಎಂ. ತಿಮ್ಮಯ್ಯ, ಧ್ಯಾನ್ ಸುಬ್ಬಯ್ಯ, ಗಣೇಶ್, ಸುಬ್ರಮಣಿ, ಸಿ.ಡಿ. ಅರುಣ್, ಮಂಜು, ಅಯ್ಯಪ್ಪ, ವಿನೋದ್, ಸುರೇಶ್, ಧರ್ಮಸ್ಥಳದ ಪದಾಧಿಕಾರಿಗಳು ಪ್ರವೀಣ್ ಪೂಜಾರಿ, ಗುರುರಾಜ್ ಸೇರಿದಂತೆ ಮುಂತಾದವರು ಹಾಜರಿದ್ದರು.ಕೂಡಿಗೆ: ಪವಿತ್ರ ಕಾವೇರಿ-ಹಾರಂಗಿ ಸಂಗಮ ಕ್ಷೇತ್ರವಾದ ಕೂಡಿಗೆಯ ಟಾಟಾ ಕಾಫಿ ನಿಯಮಿತ, ಕುಶಾಲನಗರ ಕಾಫಿ ಸಂಸ್ಕರಣಾ ಕೇಂದ್ರದ ವ್ಯಾಪ್ತಿಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ೫೫ನೇ ವಾರ್ಷಿಕ ಮಹಾ ರಥೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆ ೭ ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ, ಮಹಾಪೂಜೆ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ನಂತರ ಮಹಾಮಂಗಳಾತಿ ತೀರ್ಥ ಪ್ರಸಾದ ವಿನಿಯೋಗ ನಡೆದು, ಮಧ್ಯಾಹ್ನ ೧೨ ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ಧಿಗ್ಬಲಿ, ರಥಬಲಿ, ನಂತರ ರಥಪೂಜೆ, ನಡೆಸಿ ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವವು ಹೊರಡುವ ಮುನ್ನ ಅಯ್ಯಪ್ಪ ವ್ರತದಾರಿಗಳು ದೇವರ ಕೀರ್ತನೆಗಳನ್ನು ಹಾಡಿ ಬೃಹತ್ ಪ್ರಮಾಣದ ಕರ್ಪೂರಗಳನ್ನು ಹಚ್ಚಿ ಭಕ್ತಿ ಮೆರೆದರು. ರಥೋತ್ಸವವು ಶ್ರೀ ಸ್ವಾಮಿಯ ಸನ್ನಿಧಿಯಿಂದ ಸಂಪ್ರದಾಯದAತೆ ಕೂಡಿಗೆ-ಕುಶಾಲನಗರ ಮುಖ್ಯ ರಸ್ತೆಯ ಮೂಲಕ ಕೂಡುಮಂಗಳೂರು ಗ್ರಾಮದವರೆಗೆ ದಾರಿ ಉದ್ದಕ್ಕೂ ರಥಕ್ಕೆ ಪೂಜೆ, ಭಕ್ತರ ಜಯ ಘೋಷ, ಮಂಗಳ ವಾದ್ಯದೊಂದಿಗೆ ಭಕ್ತರು ಎಳೆದುಕೊಂಡು ಸಾಗಿದರು.
ಈ ಬಾರಿ ಕೂಡಿಗೆ ಹನುಮ ಜಯಂತ್ಸೋತ್ಸವ ಸಮಿತಿಯ ವತಿಯಿಂದ ಡೊಳ್ಳು ಕುಣಿತ ವ್ಯವಸ್ಥೆ ಮಾಡಲಾಗಿತ್ತು. ರಥವು ಸನ್ನಿಧಿಯಿಂದ ಸಾಗಿದ ನಂತರ ರಥೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
ರಥೋತ್ಸವ ಕೂಡುಮಂಗಳೂರು ಗ್ರಾಮಕ್ಕೆ ತಲುಪಿದ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮಸ್ಥರು, ವಿವಿಧ ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ವಿಶೇಷ ಪೂಜೆ, ಅಯ್ಯಪ್ಪ ವ್ರತದಾರಿಗಳಿಂದ ಕರ್ಪೂರಗಳನ್ನು ಹಚ್ಚುವಿಕೆ, ಅಲ್ಲದೇ ಕೂಡುಮಂಗಳೂರು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ನವರ ನೇತೃತ್ವದಲ್ಲಿ ಮತ್ತು ಯುವಕ ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ಕೂಡುಮಂಗಳೂರು ಗ್ರಾಮದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ತಂಪುಪಾನಿಯ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಕೂಡುಮಂಗಳೂರು ಗ್ರಾಮದಲ್ಲಿ ರಥೋತ್ಸವಕ್ಕೆ ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ ಆದ ನಂತರ ಕೂಡುಮಂಗಳೂರು ಗ್ರಾಮದಿಂದ ಸ್ವಸ್ಥಳಕ್ಕೆ ರಥವನ್ನು ಎಳೆದುಕೊಂಡು ಬರಲಾಯಿತು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವಕ್ಕೆ ಜಿಲ್ಲೆಯ ಸಾವಿರಾರು ಭಕ್ತರು ಸೇರಿದಂತೆ ಹಾಸನ, ಮೈಸೂರು ಜಿಲ್ಲೆಗಳ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು. ಸ್ವಾಮಿಯ ಸನ್ನಿಧಿಯಲ್ಲಿ ಬೆಳಿಗ್ಗಿನಿಂದ ಸಂಜೆ ೭ ಗಂಟೆಯವರೆಗೆ ಸಂಪ್ರದಾಯದAತೆ ಪೂಜೆಗಳು ನಡೆದು ನಂತರ ರಾತ್ರಿ ೮ ಗಂಟೆಗೆ ವಿದ್ಯುತ್ನಿಂದ ಅಲಂಕೃತಗೊAಡ ಭವ್ಯ ಮಂಟಪದಲ್ಲಿ ಶ್ರೀ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಮಂಟಪೋತ್ಸವವನ್ನು ನಡೆಸಲಾಯಿತು.
ಕೂಡಿಗೆ, ಕೂಡುಮಂಗಳೂರು ಗ್ರಾಮದ ಮುಖ್ಯ ರಸ್ತೆಯು ಸೇರಿದಂತೆ ದೇವಾಲಯದ ಮುಖ್ಯ ರಸ್ತೆಯು ಕೇಸರಿ ಬಣ್ಣದ ಬಂಟಿAಗ್ಸ್ಗಳಿAದ ಮುಖ್ಯ ರಸ್ತೆಯು ಸಿಂಗಾರಗೊAಡಿತ್ತು. ತಳಿರು ತೋರಣಗಳಿಂದ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಇದೇ ಸಂದರ್ಭ ಭಕ್ತರು ಮುಡಿ ಹರಕೆ ಸಲ್ಲಿಸಿದರು. ರಥೋತ್ಸವದ ಅಂಗವಾಗಿ ಹೋಮ ಹವನಗಳು ನಡೆದು, ಪೂಜಾ ಕೈಂಕರ್ಯಗಳನ್ನು ಧರ್ಮಸ್ಥಳದ ರವಿ ಭಟ್ ನೇತೃತ್ವದ ತಂಡ ಮತ್ತು ದೇವಾಲಯದ ಪ್ರಧಾನ ಅರ್ಚಕ ನವೀನ ಭಟ್ ತಂಡ ನೆರವೇರಿಸಿತು.
ಈ ಸಂದರ್ಭದಲ್ಲಿ ಟಾಟಾ ಕಾಫಿ ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ರೋಷನ್ ಸೋಮಯ್ಯ, ದೇವಾಲಯ ಸಮಿತಿ ಸಹ ಗೌರವ ಕಾರ್ಯದರ್ಶಿ ಮಂದಣ್ಣ, ಕಾರ್ಯದರ್ಶಿ ಶಮಂತ್ ರೈ ಸೇರಿದಂತೆ ಸಮಿತಿಯ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.
ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾರ್ಗದರ್ಶನ ಗ್ರಾಮಾಂತರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.ಸಿದ್ದಾಪುರ
ಸಿದ್ದಾಪುರದ ಮಡಿ ಕೇರಿ ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲ ಯದಲ್ಲಿ ಷಷ್ಠಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಗಿನಿಂದಲೇ ವಿವಿಧ ಪೂಜಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತ ರ್ಪಣೆ ಏರ್ಪಡಿಸಲಾಗಿತ್ತು. ಸಿದ್ದಾಪುರ ಸುತ್ತಮುತ್ತದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ಪೊನ್ನಂಪೇಟೆ : ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಷಷ್ಠಿ ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ಇಲ್ಲಿನ ನಾಗ ಬನದಲ್ಲಿ ಪ್ರತಿಷ್ಟಾಪಿಸಲಾಗಿರುವ ನಾಗ ದೇವರಿಗೆ ವಿಶೇಷ ಪೂಜೆ ಹಾಗೂ ವಿವಿಧ ಅಭಿಷೇಕ ಮಾಡುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಸಲ್ಲಿಸಿದ್ದರು. ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಪೂಜೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಲಾಯಿತು. ನಂತರ ಭದ್ರಕಾಳಿ ದೇವಸ್ಥಾನದಲ್ಲಿ ಮಹಾಮಂಗಳಾರತಿಯ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಊರಿನವರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತರು ಷಷ್ಠಿ ಪೂಜೆಯಲ್ಲಿ ಪಾಲ್ಗೊಂಡರು.
ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರ ತಕ್ಕಾಮೆಯಲ್ಲಿ ನಡೆದ ಷಷ್ಠಿ ಪೂಜೆಯಲ್ಲಿ ಮೂಕಳೇರ, ಮಚ್ಚಿಯಂಡ, ಚೇಂದಿಮಾಡ, ಕೂಕಂಡ, ಮನೆಯಪಂಡ, ಸಣ್ಣುವಂಡ, ಕೊಳೇರ ಸೇರಿದಂತೆ ಊರಿನ ವಿವಿಧ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಿದ್ದರು. ಇಲ್ಲಿನ ಮುಖ್ಯ ಅರ್ಚಕರಾದ ಸುಬ್ರಮಣ್ಯ ಕೇಕುನ್ನಾಯ ನೇತೃತ್ವದಲ್ಲಿ ಪೂಜಾವಿಧಿ ವಿಧಾನಗಳು ನಡೆದವು.
ಪೊನ್ನಂಪೇಟೆ: ಪೊನ್ನಂಪೇಟೆಯ ವಿವಿಧ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಟಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು, ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಪೂಜೆ ಏರ್ಪಡಿಸಲಾಗಿತ್ತು. ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮುತ್ತಪ್ಪ ದೇವಸ್ಥಾನದ ಸಮೀಪ ಇರುವ ನಾಗಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಕುಶಾಲನಗರ : ಷಷ್ಠಿ ಉತ್ಸವದ ಅಂಗವಾಗಿ ಕುಶಾಲನಗರದ ಹೌಸಿಂಗ್ ಬೋರ್ಡ್ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಅರ್ಚಕರಾದ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಂತರ ಮಹಾಮಂಗಳಾರತಿ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ದೇವಸ್ಥಾನ ಸೇವಾ ಮತ್ತು ಕಲಾ ಟ್ರಸ್ಟ್ನ ಅಧ್ಯಕ್ಷ ಡಿ.ಆರ್. ಚಿಕ್ಕೆಗೌಡ, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಮಧುಸೂದನ್, ಹೆಚ್.ಡಿ. ಶಿವಾಜಿ ರಾವ್, ಎಂ.ಡಿ. ನಾಗೇಶ್, ಬಿ.ವಿ. ನಂಜುAಡಸ್ವಾಮಿ, ಬಿ.ಎ. ಗಂಗಾಧರ್ ಮತ್ತು ನಿರ್ದೇಶಕರುಗಳು ಇದ್ದರು.
ಸಂಜೆ ಅಲಂಕೃತ ಮಂಟಪದಲ್ಲಿ ಮಂಗಳವಾದ್ಯ ಮತ್ತು ಕಲಾ ತಂಡದೊAದಿಗೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಕಾಲೋನಿ, ಮುಳ್ಳುಸೋಗೆ, ರಥ ಬೀದಿ, ಬೈಚನಹಳ್ಳಿ ಮುಖಾಂತರ ಮೆರವಣಿಗೆ ಮೂಲಕ ಕೊಂಡಯ್ಯಲಾಯಿತು.ಕಣಿವೆ: ಕುಶಾಲನಗರದ ಮಾರುಕಟ್ಟೆ ರಸ್ತೆಯ ಕಾವೇರಿ ನದಿ ದಂಡೆಯಲ್ಲಿನ ನಾಗದೇವತಾ ಸನ್ನಿಧಿಯಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜಾದಿಗಳು ನೆರವೇರಿದವು. ಮುಖ್ಯ ರಸ್ತೆಯಿಂದ ದೇವಾಲಯದವರೆಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಹಾಗೆಯೇ ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ರಂಗೋಲಿಯನ್ನು ಹಚ್ಚಿ ಭಕ್ತಾದಿಗಳನ್ನು ಸ್ವಾಗತಿಸುವ ಕಾರ್ಯ ದೇವತಾ ಸಮಿತಿಯಿಂದ ಮಾಡಲಾಗಿತ್ತು.
ದೇವಾಲಯದ ಆವರಣದಲ್ಲಿ ಆಶ್ಲೇಷಾ ಬಲಿ ಪೂಜೆ ಬಳಿಕ ಅರಳಿಕಟ್ಟೆ ಯಲ್ಲಿನ ನಾಗದೇವತೆಯನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕಾರಗೊಳಿಸಿ ಪೂಜಿಸಲಾಯಿತು. ಮಧ್ಯಾಹ್ನದ ಮಹಾಮಂಗಳಾರತಿಯೊAದಿಗೆ ನೆರೆದ ಸಹಸ್ರ ಸಂಖ್ಯೆಯ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಷಷ್ಠಿ ಅಂಗವಾಗಿ ದೇವಾಲಯದ ಆವರಣದಲ್ಲಿನ ಹುತ್ತವನ್ನು ಪೂಜಿಸಿದ ಮಹಿಳೆಯರು ಹುತ್ತಕ್ಕೆ ಹಾಲೆರೆದು ಭಕ್ತಿ ಭಾವ ಮೆರೆದರು.
ಕಳೆದ ೧೬ ವರ್ಷಗಳಿಂದ ಇಲ್ಲಿನ ನಾಗದೇವತಾ ಯುವಕರ ಸಂಘ ಹಾಗೂ ಮಹಿಳಾ ಸಂಘದ ಭಕ್ತ ಸಮೂಹ ದೇವತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕುಶಾಲನಗರದ ಹೌಸಿಂಗ್ ಬೋರ್ಡ್ನಲ್ಲಿನ ಉದ್ಭವ ಸುಬ್ರಮಣ್ಯ ದೇವಾಲಯದ ಮಾದರಿಯಲ್ಲಿ ಅಪಾರ ಭಕ್ತ ಸ್ತೋಮ ಇಲ್ಲಿ ನೆರೆಯುವುದು ಒಂದು ವಿಶೇಷವಾಗಿದೆ.ವೀರಾಜಪೇಟೆ: ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವೀರಾಜಪೇಟೆ ನಗರ ವ್ಯಾಪ್ತಿಯ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣುಮೂರ್ತಿ ಹಾಗೂ ನಾಗ ದೇವರ ಮೂರ್ತಿಗೆ ಹಾಲಿನಲ್ಲಿ ಅಭಿಷÃಕ, ಕಳಸ ಅಭಿಷೇಕ ಬೆಳಿಗ್ಗೆಯಿಂದಲೆ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದು ಮದ್ಯಾಹ್ನ ಮಹಾಪೂಜೆ ಬಳಿಕ ಭಕ್ತಾದಿಗಳಿಗೆ ಅನ್ನ ಸಂಪರ್ಪಣೆ ಏರ್ಪಡಿಸಲಾಗಿತ್ತು.
ಚಿತ್ರ , ವರದಿ: ನಾಗರಾಜ ಶೆಟ್ಟಿ, ರಜಿತ, ಜಗದೀಶ್, ಚಂದ್ರಮೋಹನ್, ಚೆನ್ನನಾಯಕ, ಕೆ.ಎಸ್. ಮೂರ್ತಿ, ಭಾಸ್ಕರ್