ಕೊಡಗು ಪುಟ್ಟ ಜಿಲ್ಲೆ. ಎಲ್ಲೆಲ್ಲಿಯೂ ಎತ್ತರದ ಗುಡ್ಡಗಾಡು ಪ್ರದೇಶ. ಕಾಫಿ ತೋಟಗಳು, ಮಳೆಗಾಲ ದಲ್ಲಿ ಹರಿಯುವ ಸಣ್ಣ-ಸಣ್ಣ ತೊರೆಗಳು, ರಾಜ್ಯರ ಆಳ್ವಿಕೆಯನ್ನು ಕಂಡು, ಸ್ವತಂತ್ರ ರಾಜ್ಯವಾಗಿದ್ದ ಕೊಡಗು ಮುಂದೆ ಕರ್ನಾಟಕ ರಾಜ್ಯದ ಒಂದು ಭಾಗವಾಗಿ ವಿಲೀನಗೊಂಡಿತು. ಬ್ರಿಟಿಷರ ಕಾಲದಿಂದಲೂ ಭಾರತೀಯ ಸೇನೆಗೆ ತನ್ನದೇ ಕೊಡುಗೆ ನೀಡಿದ ಪುಣ್ಯಭೂಮಿಯಿದು. ಕ್ರೀಡಾಲೋಕಕ್ಕೆ ಕೊಡಗಿನವರ ಕಾಣಿಕೆ ಆಗಾದವಾಗಿದೆ.
ಸರಕಾರಿ ನೌಕರಿಯ ತಂದೆಯ ಮಗನಾಗಿ ಏಪ್ರಿಲ್ ೩೦-೧೯೩೨ ರಲ್ಲಿ ಜನ್ಮತಳೆದ ಕೋದಂಡ ಮಾದಪ್ಪ ಮುತ್ತಯ್ಯ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿ, ತಂದೆ ವರ್ಗಾವಣೆಗೊಂಡಾಗ ಶಿವಮೊಗ್ಗಕ್ಕೆ ಪ್ರಯಾಣ. ಇಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತಾರೆ. ಉತ್ತಮ ಹಾಕಿ ಆಟಗಾರ, ಬಾಸ್ಕೆಟ್ಬಾಲ್ ಮಾತ್ರವಲ್ಲದೆ ಅತ್ಯುತ್ತಮ ಕ್ರಿಕೆಟ್ ಆಟಗಾರನಾಗಿದ್ದ ಮುತ್ತಯ್ಯ ಕ್ರೀಡಾಂಗಣದಲ್ಲಿ ತರಬೇತಿಯ ವೇಳೆ ಅಕಸ್ಮಾತ್ ಎತ್ತರ ಜಿಗಿತವನ್ನು ಹಾರಿ ಅಲ್ಲಿದ್ದ ತರಬೇತುದಾರರಿಗೆ ಮಾತ್ರವಲ್ಲದೆ ಕ್ರೀಡಾಪಟುಗಳಿಗೆ ಆಶ್ಚರ್ಯ ವನ್ನುಂಟು ಮಾಡುತ್ತಾರೆ.
ಎನ್.ಸಿ.ಸಿ ಗೆ ಆಯ್ಕೆ : ಸಾಧಿಸಲು ಹಲವು ಮಾರ್ಗಗಳಿವೆ ಎಂಬುದಕ್ಕೆ ಇವರೇ ಸಾಕ್ಷಿ. ೧೯೫೪ ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್.ಸಿ.ಸಿ.ಗೆ ಆಯ್ಕೆಯಾದ ಮುತ್ತಯ್ಯ ಬೆಸ್ಟ್ ಕೆಡೆಟ್ಆಗಿ ರಾಷ್ಟçಮಟ್ಟದಲ್ಲಿ ಚಿನ್ನದ ಪದಕ ಪಡೆದು ಅಂದಿನ ಪ್ರಧಾನಿಗಳಾದ ಜವಾಹರ್ಲಾಲ್ ನೆಹರು ಅವರೊಡನೆ ಜೌತಣಕೂಟದಲ್ಲಿ ಭಾಗವಹಿಸಿದ್ದು ಹೆಮ್ಮೆ. ಮುಂದೆ ಕಾಲೇಜು ತಂಡದಲ್ಲಿ ಸ್ಥಾನ ಪಡೆದು ರಾಜ್ಯಮಟ್ಟದ ಎತ್ತರಜಿಗಿತ, ಉದ್ದಜಿಗಿತ, ಹರ್ಡಲ್ಸ್ ಓಟದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಾರೆ. ನಂತರದ ದಿನಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರ್ಪಡೆಗೊಂಡ ಮುತ್ತಯ್ಯ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅಂದಿನ ತರಬೇತುದಾರರಾದ ಚಿಕ್ಕ ಪಾಪಯ್ಯ ಅವರಿಂದ ಅಥ್ಲೆಟಿಕ್ಸ್ನಲ್ಲಿ ತರಬೇತಿ ಪಡೆಯುತ್ತಾರೆ.
ಹಂಗೇರಿಯ ಬುಡಾಪೇಸ್ಟö್ನಲ್ಲಿ ಜಾಗತಿಕಮಟ್ಟದ ವಿಶ್ವ ವಿದ್ಯಾಲಯ ಗಳಲ್ಲಿ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮೊದಲ, ಕೊಡವ, ಕೊಡಗಿನ ಅಥ್ಲೆಟಿಕ್ ಕ್ರೀಡಾಪಟು.
ಪದವಿ ಪೂರೈಸುವುದರ ಜೊತೆಗೆ ಹುಟ್ಟು ಪ್ರತಿಭಾವಂತರಾಗಿದ್ದ ಇವರು ೧೯೫೬ ರಲ್ಲಿ ದೇಶಿಯ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಯನ್ನು ಡೆಕಾತ್ಲಾನ್ ಸ್ಪರ್ಧೆಯಲ್ಲಿ ಸ್ಥಾಪಿಸುತ್ತಾರೆ. ಸತತವಾಗಿ ೧೯೫೬ ರಿಂದ ೧೯೬೦ ರವರೆಗೆ ಭಾರತದ ಚಾಂಪಿಯನ್ ಆಗುತ್ತಾರೆ. ರೈಲ್ವೇ ಇಲಾಖೆಯಲ್ಲಿ ಕ್ರೀಡಾ ಕೋಟಾದಲ್ಲಿ ಉದ್ಯೋಗಿಯಾಗು ತ್ತಾರೆ.
೧೯೫೮ರ ಜಪಾನಿನ ಟೋಕಿಯೋ ಏಷ್ಯನ್ ಗೇಮ್ಸ್ನ ಡೆಕಾತ್ಲಾನ್ ಸ್ಪರ್ಧೆಯಲ್ಲಿ ಕೇವಲ ೮೨ ಅಂಕಗಳಿAದ ಕಂಚಿನ ಪದಕ ಪಡೆಯಲು ವಿಫಲರಾಗುತ್ತಾರೆ. ಬೆಳ್ಳಿಪದಕ ಜಯಿಸುವಷ್ಟು ಸಾರ್ಮಥ್ಯ ಹೊಂದಿದ್ದರೂ ಅದೃಷ್ಟ ಇವರ ಪಾಲಿಗೆ ಇರಲಿಲ್ಲ. ಮುಂದೆ ೧೯೬೦ರ ರೋಮ್ ಒಲಂಪಿಕ್ಸ್ಗೂ ಇವರಿಗೆ ಅವಕಾಶ ಸಿಗದಿದ್ದು ನಿರಾಶೆಯನ್ನುಂಟು ಮಾಡುತ್ತದೆ.
ತರಬೇತುದಾರನ ಹುದ್ದೆಯಲ್ಲಿ ಮುನ್ನಡೆ : ನಿರಾಸೆಯಲ್ಲಿದ್ದ ಮುತ್ತಯ್ಯ ಪಂಜಾಬ್ನ ಪಾಟಿಯಾಲದ ರಾಷ್ಟಿçÃಯ ಕ್ರೀಡಾಪ್ರಾಧಿಕಾರದಲ್ಲಿ ಕ್ರೀಡಾ ತರಬೇತುದಾರನ ತರಬೇತಿಗಳಿಸಿ ಅಲ್ಲಿಯೇ ತರಬೇತುದಾರ ಹುದ್ದೆಯನ್ನು ಪಡೆಯುತ್ತಾರೆ. ಹಲವು ಕ್ರೀಡಾಪಟುಗಳನ್ನು ಬೆಳಕಿಗೆ ತರುವಲ್ಲಿ ಸಕ್ರಿಯರಾದ ಮುತ್ತಯ್ಯರವರು ಮುಖ್ಯ ತರಬೇತುದಾರರಾಗಿ ಆಯ್ಕೆಯಾಗುತ್ತಾರೆ. ಮುಂದೆ ಉನ್ನತ ಶಿಕ್ಷಣವನ್ನು ಕ್ರೀಡೆಯಲ್ಲಿ ಗಳಿಸಲು ಜರ್ಮನಿಗೆ ತೆರಳಿದರು. ೧೯೬೮ ರಲ್ಲಿ ನಡೆದ ಮೆಕ್ಸಿಕೊ ಒಲಂಪಿಕ್ಸ್ನಲ್ಲಿ ಜರ್ಮನ್ ತಂಡದೊಡನೆ ತೆರಳಿದ ಮುತ್ತಯ್ಯ ಅವರು ಅಂದು ಅಮೇರಿಕಾದ ಕ್ರೀಡಾಪಟು ಬಾಬ್ ಬೀಮನ್ ಉದ್ದಜಿಗಿತದಲ್ಲಿ ವಿಶ್ವದಾಖಲೆಯ ಜಿಗಿತವನ್ನು ಇವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಜಿಗಿತವು ಒಂದು ದಾಖಲೆಯಾಯಿತು. ಪ್ರತಿಭಾವಂತ ಮುತ್ತಯ್ಯ ಬಯೋಮೆಕಾನಿಕ್ಸ್ನಲ್ಲಿ ಚಿನ್ನದ ಪದಕ ಗಳಿಸಿದರು. ಮಾತ್ರವಲ್ಲದೇ ಜರ್ಮನಿಯ ಸಕ್ಸೋನಿಯ ಲಿಪಿಜಿಂಗ್ ವಿಶ್ವವಿದ್ಯಾಲಯದಲ್ಲಿ ಕಿನ್ಸೋಲಾಜಿಯಲ್ಲಿ ಪಿ.ಹೆಚ್.ಡಿ.ಯನ್ನು ಪಡೆದು ಮುತ್ತಯ್ಯ, ಡಾ|| ಮುತ್ತಯ್ಯ ಎಂದು ಪ್ರಖ್ಯಾತರಾಗು ತ್ತಾರೆ. ಇವರು ತರಬೇತಿ ನೀಡುತ್ತಿದ್ದ ಟಿ. ಸಿ. ಯೊಹಾನ್ನ, ಸುರೇಶ್ ಬಾಬು, ವಿ.ಆರ್ ಬೀಡು ೧೯೭೪ ರ ಟೆಹರಾನ್ ಏಷ್ಯನ್ ಗೇಮ್ಸ್ನಲ್ಲಿ ಟಿ.ಸಿ ಯೊಹಾನ್ನ ಹೊಸ ದಾಖಲೆಯನ್ನೇ ಬರೆದರು. ೮.೦೫ ಮೀಟರ್ ದೂರಕ್ಕೆ ಜಿಗಿದು ಚಿನ್ನದ ಪದಕವನ್ನು, ಸುರೇಶ್ ಬಾಬುಗೆ ಡೆಕತ್ಲಾನ್ನಲ್ಲಿಯೂ ಚಿನ್ನದ ಪದಕ ಲಭಿಸಿದ್ದು, ಮುತ್ತಯ್ಯರಿಗೆ ಶ್ರಮದ ಫಲಕ್ಕೆ ಫಲಿತಾಂಶ ಆನಂದವನ್ನುAಟುಮಾಡಿತು. ಕರ್ನಾಟಕ ಸರಕಾರ ಇವರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.
ಚಿನ್ನದ ಬೂಟು ಪಡೆದ ಮೊದಲ ಭಾರತೀಯ: ೧೯೭೭ ರಲ್ಲಿ ಇವರನ್ನು ಗುರುತಿಸಿದ ಏಷ್ಯನ್ ಅಥ್ಲೆಟಿಕ್ಸ್ ಫೆಡರೇಷನ್ ಮುಂದುವರೆಯುತ್ತಿರುವ ರಾಷ್ಟçಗಳ ಪ್ರಗತಿಯ ಹರಿಕಾರ ಎಂದು ಚಿನ್ನದ ಬೂಟು ನೀಡುವುದರ ಮೂಲಕ ಏಷ್ಯಾದ ಅತ್ಯುತ್ತಮ ಅಥ್ಲೆಟಿಕ್ಸ್ ತರಬೇತುದಾರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸತತ ಪರಿಶ್ರಮ ಮತ್ತು ತಾನು ಸಾಧಿಸಲು ತನ್ನ ಛಲ ಕೂಡ ಈ ಪ್ರಶಸ್ತಿಯಲ್ಲಿದೆ ಎಂಬುದನ್ನು ಸಾಬೀತುಪಡಿಸಿದರು ಮುತ್ತಯ್ಯ.
ಮುಖ್ಯ ತರಬೇತುದಾರರಾಗಿದ್ದ ಡಾ. ಮುತ್ತಯ್ಯ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಮುಂಬಡ್ತಿಯೊAದಿಗೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಮುನ್ನುಡಿ ಬರೆಯುತ್ತಾರೆ. ಶಿಸ್ತಿನ ಸಿಪಾಯಿ ಅಲ್ಲೂ ಯಶಸ್ಸಿನ ಗುರಿಮುಟ್ಟುವಲ್ಲಿ ಸಫಲರಾಗುತ್ತಾರೆ. ಅಂತರರಾಷ್ಟಿçÃಯ ಒಲಂಪಿಕ್ಸ್ ಸಂಸ್ಥೆಯಲ್ಲಿ ಗುರುತಿಸಿಕೊಂಡ ಇವರು, ಮುಂದೆ ಏಷ್ಯನ್ ಅಥ್ಲೆಟಿಕ್ಸ್ ಫೆಡರೇಷನ್ ಸಂಸ್ಥೆಯಲ್ಲೂ ಕ್ರೀಡಾಕೂಟದ ಸಲಹೆಗಾರರಾಗಿ ಆಯ್ಕೆ ಯಾಗಿದ್ದು, ಇವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
೧೯೮೨ ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ತಾಂತ್ರಿಕ ನಿರ್ದೇಶಕ ರಾಗಿ ನಿಯುಕ್ತಿಗೊಂಡು, ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ನಡೆಸಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಅಂದಿನ ಪ್ರಧಾನಿ ಇಂದಿರಾಗಾAಧಿ ಅವರಿಂದ ಪ್ರಶಂಸಿಸಲ್ಪಡುತ್ತಾರೆ. ಇವರನ್ನು ಗುರುತಿಸಿದ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಏಷ್ಯನ್ “ವಶಿಷ್ಟ ಜ್ಯೋತಿ' ಪ್ರಶಸ್ತಿಗೆ ಭಾಜನರಾಗುತ್ತಾರೆ. ಪಂಜಾಬ್ ರಾಜ್ಯ ಪಟಿಯಾಲದಲ್ಲಿರುವ ಭಾರತೀಯ ಕ್ರೀಡಾಪ್ರಾಧಿಕಾರದ ಕ್ರೀಡಾ ಸಂಕೀರ್ಣವನ್ನು ಉನ್ನತ ಮಟ್ಟಕ್ಕೆ ಏರಿಸಿದ್ದು, ಮುಂದೆ ಕರ್ನಾಟಕ ರಾಜ್ಯದ ಬೆಂಗಳೂರಿನ ವಿಶ್ವವಿದ್ಯಾಲಯದ ಸಮೀಪ ದಕ್ಷಿಣ ಭಾರತದ ಕ್ರೀಡಾ ಪ್ರಾಧಿಕಾರವನ್ನು ಸ್ಥಾಪಿಸಲು ಅದರ ಬೆಳವಣಿಗೆಗಾಗಿ ಶ್ರಮಿಸಿದ್ದು ಇವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ. ಮುಂದೆ ಬೆಂಗಳೂರಿಗೆ ಬಂದ ಡಾ. ಕೋದಂಡ ಮಾದಪ್ಪ ಮುತ್ತಯ್ಯ ಇಲಾಖೆಯಿಂದ ನಿವೃತ್ತಿಗೊಂಡು ತಮ್ಮ ಕುಟುಂಬದೊAದಿಗೆ ಬೆಂಗಳೂರಿನಲ್ಲಿ ನೆಲೆಸಿ ಡಿಸೆಂಬರ್ ೫ ೨೦೧೯ ರಂದು ಮರಳಿಬಾರದ ಲೋಕಕ್ಕೆ ತೆರಳುತ್ತಾರೆ. ಮಾನವ ತನಗಾಗಿ ಅಲ್ಲದಿದ್ದರೂ ಇತಿಹಾಸದ ಪುಟಗಳಲ್ಲಿ ಮುಂದಿನ ಪೀಳಿಗೆಗೆ, ಅದರಲ್ಲೂ ಅಥ್ಲೆಟಿಕ್ಸ್ನಲ್ಲಿ ತನ್ನ ಜೀವನವನ್ನೇ ಕೊನೆಯವರೆಗೂ ಮುಡಿಪಾಗಿಟ್ಟು, ಕ್ರೀಡಾಪಟು, ತರಬೇತುದಾರ, ಉತ್ತಮ ಆಡಳಿತಗಾರ ಎಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಶಸ್ತಿಗಳಿಸಿದ್ದು, ಕೊಡಗು ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದನ್ನು, ಸ್ಮರಿಸುತ್ತಾ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳ ಡೆಕತ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತದ ಮೊದಲ, ಕೊಡಗಿನ ಪ್ರಥಮ ಕೊಡವ ಚಾಂಪಿಯನ್ಗಾಗಿ ಜಿಲ್ಲೆಯಲ್ಲಿ ಯಾವುದಾದರೂ ಕ್ರೀಡಾಂಗಣಕ್ಕೆ, ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಯಾವುದಾದರೂ ರಸ್ತೆಗೆ ಇವರ ಹೆಸರನ್ನು ಇಟ್ಟು ಪ್ರಾಥಮಿಕ, ಪ್ರೌಢಶಾಲಾ ಮಟ್ಟದ ಪುಸ್ತಕದಲ್ಲಿ ಕ್ರೀಡಾ ಸಾಧಕರಾದ ಡಾ. ಸಿ. ಎಂ. ಮುತ್ತಯ್ಯ ಅವರ ಸಾಧನೆಯನ್ನು ಸ್ಮರಿಸಿದರೆ, ಮುಂದಿನ ಜನಾಂಗಕ್ಕೆ ನೆನಪು ಮಾಡುವ ಅವಕಾಶವನ್ನು ಕಲ್ಪಿಸಲು ಮುಂದಾಗಬೇಕಾಗಿದೆ ಎನ್ನುವುದು ಕ್ರೀಡಾಪ್ರೇಮಿಗಳ ಮನದಾಳದ ಅಳಲು.
-ಅಂತೋಣಿ ಡಿಸೋಜ,
ಅಥ್ಲೆಟಿಕ್ಸ್ ತರಬೇತುದಾರ
ಚೌಡ್ಲು. ಮೊ: ೯೪೪೮೪೪೮೬೦೩