ಲೋಕಸಭೆಯಲ್ಲಿ ಟೆಲಿಕಾಂ ಮಸೂದೆ ಮಂಡನೆ

ನವದೆಹಲಿ, ಡಿ. ೧೮: ದೂರಸಂಪರ್ಕ ವಲಯವನ್ನು ನಿಯಂತ್ರಿಸುವ ೧೩೮ ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸೋಮವಾರ ದೂರಸಂಪರ್ಕ ಮಸೂದೆ ೨೦೨೩ ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಟೆಲಿಕಾಂ ಮಸೂದೆಯನ್ನು ಮಂಡಿಸಿದರು. ಈ ಮಸೂದೆಗ ಕಳೆದ ಆಗಸ್ಟ್ನಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಪ್ರಸ್ತಾವಿತ ಮಸೂದೆಯು ರಾಷ್ಟಿçÃಯ ಭದ್ರತೆಯನ್ನು ಉಲ್ಲೇಖಿಸಿ, ಯಾವುದೇ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಬಹುದು, ನೆಟ್‌ವರ್ಕ್ಗಳು ಅಥವಾ ಅವುಗಳ ಘಟಕಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು, ನಿರ್ವಹಿಸಲು ಅಥವಾ ಅಮಾನತುಗೊಳಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಅದೇ ರೀತಿ, ಪ್ರಸ್ತಾವಿತ ಶಾಸನವು ನಿರ್ದಿಷ್ಟ ವ್ಯಕ್ತಿಗಳಿಂದ ಕಳುಹಿಸಲಾದ ಅಥವಾ ಸ್ವೀಕರಿಸಿದ ನಿರ್ದಿಷ್ಟ ದೂರಸಂಪರ್ಕ ಸಾಧನಗಳ ಮೂಲಕ ಅಥವಾ ನಿರ್ದಿಷ್ಟ ವಿಷಯಗಳಿಗೆ ಸಂಬAಧಿಸಿದ ಕೆಲವು ಸಂದೇಶಗಳನ್ನು ಭಾರತದ ಸಾರ್ವಭೌಮತೆ, ಸಮಗ್ರತೆ ಮತ್ತು ರಾಷ್ಟಿçÃಯ ಭದ್ರತೆಗೆ ಧಕ್ಕೆ ತರುವಂತೆ ಇರಬಾರದು ಎಂದು ಸೂಚನೆ ನೀಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ. ವಿಪತ್ತು ನಿರ್ವಹಣೆ ಸೇರಿದಂತೆ ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ವಿಶೇಷವಾಗಿ ಅಧಿಕಾರ ಪಡೆದ ಯಾವುದೇ ಅಧಿಕಾರಿ, ಅಧಿಸೂಚನೆಯ ಮೂಲಕ ಯಾವುದೇ ಅಧಿಕೃತ ಘಟಕದ ಯಾವುದೇ ದೂರಸಂಪರ್ಕ ಸೇವೆ ಅಥವಾ ದೂರಸಂಪರ್ಕ ಜಾಲವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಬಹುದು ಅಥವಾ ಸ್ಥಗಿತಗೊಳಿಸಬಹುದು ಕರಡು ಕಾಯಿದೆಯೂ ಹೇಳುತ್ತದೆ.

ಲೋಕಸಭೆ-ರಾಜ್ಯಸಭೆಯಿಂದ ದಾಖಲೆಯ ೯೨ ಸಂಸದರ ಅಮಾನತು!

ನವದೆಹಲಿ, ಡಿ. ೧೮: ಡಿಸೆಂಬರ್ ೧೩ರಂದು ಸಂಸತ್ ಭದ್ರತಾ ಲೋಪಕ್ಕೆ ಸಂಬAಧಿಸಿದAತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಕೋಲಾಹಲ ಸೃಷ್ಟಿಸಿದ್ದು, ಸದನದ ಕಲಾಪಕ್ಕೆ ನಿರಂತರವಾಗಿ ಅಡ್ಡಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಸಂಸದರನ್ನು ಅಮಾನತು ಮಾಡಲಾಗಿದೆ. ಇದುವರೆಗೆ ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ಒಟ್ಟು ೯೨ ವಿಪಕ್ಷ ಸಂಸದರನ್ನು ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಸಂಸತ್ತಿನ ಇತಿಹಾಸದಲ್ಲಿ ಇಷ್ಟೊಂದು ಸಂಸದರನ್ನು ಅಮಾನತುಗೊಳಿಸಿರುವುದು ಇದೇ ಮೊದಲು. ಡಿಸೆಂಬರ್ ೧೮ ರಂದು ಲೋಕಸಭೆಯ ಒಟ್ಟು ೩೩ ಮತ್ತು ರಾಜ್ಯಸಭೆಯ ೪೫ ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆ ಲೋಕಸಭೆ, ರಾಜ್ಯಸಭೆ ಸೇರಿ ಒಟ್ಟು ೧೪ ಸಂಸದರನ್ನು ಅಮಾನತು ಮಾಡಲಾಗಿತ್ತು. ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಸೋಮವಾರ ರಾಜ್ಯಸಭೆಯು ಪ್ರಸ್ತುತ ಸಂಸತ್ತಿನ ಅಧಿವೇಶನದ ಉಳಿದ ಅವಧಿಗೆ ವಿರೋಧ ಪಕ್ಷಗಳ ೩೪ ಸದಸ್ಯರನ್ನು ಮತ್ತು ವಿಶೇಷಾಧಿಕಾರ ಸಮಿತಿಯ ವರದಿಯವರೆಗೆ ೧೧ ಸದಸ್ಯರನ್ನು ಅಮಾನತುಗೊಳಿಸಿದೆ. ಸಭಾಪತಿ ಜಗದೀಪ್ ಧನಕರ್ ಅವರು ಸದನದಲ್ಲಿ ಗದ್ದಲದ ಬಗ್ಗೆ ವಿರೋಧ ಪಕ್ಷಗಳ ೩೪ ಸದಸ್ಯರ ಹೆಸರನ್ನು ತೆಗೆದುಕೊಂಡರು.

ಕಾಡು ಹಂದಿ ದಾಳಿಯಿಂದ ರೈತ ಸಾವು

ಹಾಸನ, ಡಿ. ೧೮: ಕಾಡು ಹಂದಿಯೊAದು ದಾಳಿ ನಡೆಸಿದ್ದರಿಂದ ೬೫ ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಇತರ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಬಳಿಕ ಕಾಡು ಹಂದಿಗೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ರಾಜೇಗೌಡ ಹಾಗೂ ಅವರ ಪತ್ನಿ ಹೊಲದಲ್ಲಿ ಇತರ ಇಬ್ಬರು ಮಹಿಳೆಯರೊಂದಿಗೆ ಕೆಲಸ ಮಾಡುತ್ತಿದ್ದಾಗ ಹಠಾತ್ ಕಾಡು ಹಂದಿ ದಾಳಿ ನಡೆಸಿದಾಗ ತೀವ್ರವಾಗಿ ಗಾಯಗೊಂಡು ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಿ ತೀವ್ರವಾಗಿ ಗಾಯಗೊಂಡ ಅವರ ಪತ್ನಿ ಶಾಂತಮ್ಮ ಹಾಗೂ ಮಹಿಳೆ ನಂಜಮ್ಮ ಅವರನ್ನು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ನಂತರ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿಗೆ ಇ.ಡಿ. ಸಮನ್ಸ್

ನವದೆಹಲಿ, ಡಿ. ೧೮: ರದ್ದಾದ ಅಬಕಾರಿ ನೀತಿ ಪ್ರಕರಣದ ತನಿಖೆಗೆ ಸಂಬAಧಿಸಿದAತೆ ಡಿಸೆಂಬರ್ ೨೧ ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬAಧಿಸಿದAತೆ ಜಾರಿ ನಿರ್ದೇಶನಾಲಯ ಇಂದು ಎರಡನೇ ಬಾರಿ ದೆಹಲಿ ಸಿಎಂಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ನವೆಂಬರ್ ೨ ರಂದು ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಆದರೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬAಧಿಸಿದ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಲು ದೆಹಲಿ ಸಿಎಂ ನಿರಾಕರಿಸಿದ್ದರು. ಈಗ ಮತ್ತೊಮ್ಮೆ ಎಎಪಿಯ ರಾಷ್ಟಿçÃಯ ಸಂಚಾಲಕ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿದ್ದು, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಶ್ನಿಸಲು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್ ನೀಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಿಂಗಾಪುರದಲ್ಲಿ ೫೬ ಸಾವಿರ ಸೋಂಕಿತರು ಪತ್ತೆ

ನವದೆಹಲಿ, ಡಿ. ೧೮: ವಿಶ್ವಾದ್ಯಂತ ಮಾರಕ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಜೆಎಸ್-೧ ವೈರಸ್ ಆತಂಕ ವ್ಯಾಪಕವಾಗುತ್ತಿದ್ದು, ಇದರ ಬೆನ್ನಲ್ಲೇ ಸಿಂಗಾಪುರದಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ ೫೬ ಸಾವಿರ ಹೊಸ ಪ್ರಕರಣಗಳು ವರದಿಯಾಗಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಇಡೀ ಜಗತ್ತನ್ನು ಕಾಡಿದ್ದ ಮಹಾಮಾರಿ ಕೊರೊನಾ ವೈರಸ್ ಇದೀಗ ಮತ್ತೊಂದು ರೂಪಾಂತರ ತಾಳಿದ್ದು, ತವರು ಚೀನಾ ಸೇರಿದಂತೆ ಭಾರತ, ಸಿಂಗಾಪುರ ಸೇರಿ ಜಗತ್ತಿನ ೪೦ ದೇಶಗಳಲ್ಲಿ ರೂಪಾಂತರಿ ವೈರಸ್ ಪತ್ತೆಯಾಗುವ ಮೂಲಕ ವ್ಯಾಪಕ ಭೀತಿ ಹುಟ್ಟಿಸಿದೆ. ಪ್ರಮುಖವಾಗಿ ಕೇರಳದಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು, ತಮಿಳುನಾಡಿನಲ್ಲಿ ರೂಪಾಂತರಿ ಸೋಂಕಿತರ ಸಂಖ್ಯೆ ೮ಕ್ಕೇರಿಕೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಚಳಿಯಿಂದಾಗಿ ಸಾವು ಆರೋಪ - ಹಕ್ಕು ಬಾಧ್ಯತಾ ಸಮಿತಿಗೆ ತನಿಖೆ ಹೊಣೆ

ನವದೆಹಲಿ, ಡಿ. ೧೮: ನಗರದಲ್ಲಿ ಚಳಿಯಿಂದಾಗಿ ೨೦೩ ಮಂದಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಮಾಡಿದ್ದ ಆರೋಪ ಕುರಿತ ತನಿಖೆಯ ಹೊಣೆಯನ್ನು ಹಕ್ಕು ಬಾಧ್ಯತಾ ಸಮಿತಿಗೆ ದೆಹಲಿ ವಿಧಾನಸಭೆಯು ಸೋಮವಾರ ವಹಿಸಿದೆ. ದೆಹಲಿ ಪೊಲೀಸರ ವರದಿಯನ್ನು ಉಲ್ಲೇಖಿಸಿ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ, ಚಳಿಯಿಂದಾಗಿ ಮೃತಪಟ್ಟವರ ಅಂಕಿ-ಅAಶಗಳನ್ನು ಹಂಚಿಕೊAಡಿದ್ದರು. ಇದಕ್ಕೆ ಸದನದಲ್ಲಿ ಉತ್ತರಿಸಿದ ಎಎಪಿ ಶಾಸಕ ಸಂಜೀವ್ ಝಾ, ಇದಕ್ಕೆ ಸಂಬAಧಿಸಿದAತೆ ಪೊಲೀಸ್ ವೈಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ. ಜೂನ್- ಡಿಸೆಂಬರ್ ೧೫ರವರೆಗೆ ನಾಲ್ಕು ತಿಂಗಳಲ್ಲಿ ಮೃತಪಟ್ಟ ನಿರಾಶ್ರಿತರ ಅಂಕಿ-ಅAಶವನ್ನು ನೀಡಲಾಗಿದೆ. ಅಪಘಾತ ಸೇರಿದಂತೆ ಇತರೆ ಅಂಶಗಳು ಸಾವಿಗೆ ಕಾರಣವಾಗಿದೆ ಎಂಬುದನ್ನು ಅಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಮುಂದುವರಿದು, ಬಿಜೆಪಿಯು ಸದನ ಮತ್ತು ನಗರದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. ಇದು ಸೂಕ್ಷö್ಮ ವಿಚಾರವಾಗಿದ್ದು, ತನಿಖೆಯನ್ನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸಬೇಕು ಎಂದು ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರನ್ನು ಒತ್ತಾಯಿಸಿದರು. ಬಳಿಕ ಗೋಯಲ್ ಅವರು ಈ ಪ್ರಸ್ತಾವನೆಯನ್ನು ಸದನದಿಂದ ಮುಂದಿಟ್ಟರು. ಅದಕ್ಕೆ ಒಪ್ಪಿಗೆ ಲಭಿಸಿತು.