ಕಣಿವೆ, ಡಿ. ೧೮: ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಹೂವುಗಳು ಅರಳಿ ಸುಗಂಧ ಪರಿಮಳ ಬೀರು ತ್ತಿರುವ ಚಿತ್ರಣ ಚಿಕ್ಲಿಹೊಳೆ ಆಸುಪಾಸಿನ ನಂಜರಾ ಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ ಗ್ರಾಮಗಳ ಕಾಫಿ ತೋಟಗಳಲ್ಲಿ ಕಂಡು ಬರುತ್ತಿವೆ.
ಈ ಬಗ್ಗೆ ಮಾತನಾಡಿದ ಕಾಫಿ ಬೆಳೆಗಾರ ನಂಜರಾ ಯಪಟ್ಟಣದ ಪಂಚಾಕ್ಷರಿ, ತೋಟದಲ್ಲಿ ಈಗಾಗಲೇ ಕಟಾವಿಗೆ ಬಂದಿರುವ ಕಾಫಿ ಹಣ್ಣುಗಳನ್ನು ಸಂಪೂರ್ಣವಾಗಿ ಬಿಡಿಸಿಲ್ಲ. ಆದರೆ, ಕಳೆದ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಹಣ್ಣು ಬಿಟ್ಟಿರುವ ಕಾಫಿ ಗಿಡಗಳಲ್ಲಿ ಮತ್ತೆ ಮುಂದಿನ ಫಸಲು ಬಿಡುವ ಹೂಗಳು ಅರಳಿರುವುದು ಫಸಲು ನಷ್ಟದ ಭೀತಿ ಮೂಡಿಸಿದೆೆ ಎಂದರು.