ಮಡಿಕೇರಿ, ಡಿ. ೧೭: ರೋಟರಿ ಸಂಸ್ಥೆಯ ವತಿಯಿಂದ ವಿಜ್ಞಾನ ಮೇಳ ಮತ್ತು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವೀರಾಜಪೇಟೆಯ ಹಲವು ಶಾಲೆಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಆರ್ಪಿ ವನಜಾಕ್ಷಿ, ಬಿ.ಆರ್. ಗೀತಾಂಜಲಿ, ಬಿಆರ್ಸಿ ವೆಂಕಟೇಶ್, ರೋಟರಿ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ಬನ್ಸಿ ಪೂವಣ್ಣ, ರೋಟರಿ ಸಂಸ್ಥೆಯ ಅಧ್ಯಕ್ಷ ಬಲ್ಯಮಾಡ ಮಾದಪ್ಪ, ಸದಸ್ಯರಾದ ಡಾ. ರಕ್ಷಾ ಭರತ್ ರೈ, ಅಮ್ಮಣಕುಟ್ಟಂಡ ಸರೋಜ್ ಕಾರ್ಯಪ್ಪ, ಕೇಳಪಂಡ ಮುತ್ತುರಾಜ್, ಆದಿತ್ಯ ಮುತ್ತುರಾಜ್, ನೆಲ್ಲಮಕ್ಕಡ ಅಯ್ಯಪ್ಪ ಅವರುಗಳು ಭೇಟಿ ನೀಡಿ ಮಕ್ಕಳು ತಯಾರಿಸಿದ ವಿಜ್ಞಾನ ಮಾದರಿಯನ್ನು ಪ್ರಶಂಸಿಸಿದರು. ವಿಜ್ಞಾನ ಮಾದರಿಯ ತೀರ್ಪುಗಾರರಾಗಿ ಮುಕ್ಕಾಟಿರ ಡೀನಾ ಪೂವಣ್ಣ ಹಾಗೂ ದೇವಣಗೇರಿ ಬಿ.ಸಿ. ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕಿ ಪ್ರಮೀಳ ನಿರ್ವಹಿಸಿದರು. ಶಾಲೆಯ ಮುಖ್ಯೋಪಾಧ್ಯಾಯರು, ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.