ಕಾರ್ತಿಕ ಮಾಸ ಮುಗಿದ ನಂತರ ಬರುವ ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿಯಂದು ಪ್ರತೀ ವರ್ಷ ಶ್ರೀ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಇಂಗ್ಲೀಷ್ ಕ್ಯಾಲೆಂಡರ್ ದಿನಾಂಕದAತೆ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಹಿಂದೂ ಪಂಚಾAಗದ ಕ್ಯಾಲೆಂಡರ್ ಪ್ರಕಾರವೇ ನಿರ್ಧರಿಸಲಾಗುತ್ತದೆ. ಸುಬ್ರಹ್ಮಣ್ಯ ಷಷ್ಠಿಯನ್ನು ಸ್ಕಂದ ಷಷ್ಠಿ, ಚಂಪಾ ಷಷ್ಠಿಯೆಂತಲೂ ಕರೆಯುತ್ತಾರೆ. ಆ ದಿನ ಭಗವಾನ್ ಶಿವ-ಪಾವರ್ತಿಯರ ಎರಡನೇ ಮಗನಾದ ಸುಬ್ರಹ್ಮಣ್ಯನನ್ನು ಪೂಜಿಸಲಾಗುತ್ತದೆ. ಶೂರ ಪದ್ಮನೆಂಬ ಮಹಾನ್ ರಾಕ್ಷಸನು ತನ್ನ ಸಹೋದರರಾದ ಸಿಂಹಮುಖ ಹಾಗೂ ತಾರಕಾಸುರರೊಡಗೂಡಿ ದೇವಾಧಿದೇವತೆಗಳು ಹಾಗೂ ಮಾನವರಿಗೆ ನಾನಾ ರೀತಿಯ ಕಿರುಕುಳ ನೀಡುತ್ತಿದ್ದಾಗ ಸುಬ್ರಹ್ಮಣ್ಯ ಸ್ವಾಮಿಯು ತಾರಕಾಸುರ ಮತ್ತಿತರ ದುಷ್ಟರನ್ನು ಸಂಹಾರ ಮಾಡಿ ಲೋಕಕ್ಕೆ ನೆಮ್ಮದಿಯನ್ನು ಕರುಣಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಸುಬ್ರಹ್ಮಣ್ಯ ಷಷ್ಠಿಯಂದು ಬಡವರು, ನಿರ್ಗತಿಕರಿಗೆ ಬಟ್ಟೆ ಹಾಗೂ ಅನ್ನದಾನ ಮಾಡಿದಲ್ಲಿ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ. ಅಂದು ಭಕ್ತರು ಈರುಳ್ಳಿ-ಬೆಳ್ಳುಳ್ಳಿ ಬೆರೆಸದ ಸಾತ್ವಿಕ ಆಹಾರ ಸೇವಿಸುವುದು ಅಥವಾ ಉಪವಾಸ ವ್ರತದೊಂದಿಗೆ ಪೂಜೆ, ಭಜನೆ, ಧ್ಯಾನ, ಶ್ರಿ ಸುಬ್ರಹ್ಮಣ್ಯ ನಾಮಜಪ ಕೈಗೊಂಡಾಗ ದೇವರ ಅನುಗ್ರಹ ಲಭಿಸುವುದೆಂಬ ನಂಬಿಕೆಯಿದೆ. ಸರ್ಪದೋಷ, ಕುಜದೋಷ, ಚರ್ಮವ್ಯಾದಿಗಳು ನಿವಾರಣೆ ಯಾಗಿರುವ ಉದಾಹರಣೆಗಳಿವೆ. ಷಷ್ಠಿಯಂದು ಸ್ಥಳೀಯ ದೇವಾ ಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿ ಹಾಗೂ ತಮಿಳುನಾಡಿನ ಪಳನಿ ದೇವಾಲ ಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಲಕ್ಷಾಂತರ ಭಕ್ತರು ಸನ್ನಿಧಿಯಲ್ಲಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಡಿಸೆಂಬರ್ ೧೭ ರ ಭಾನುವಾರ ಸಂಜೆ ೫.೩೩ ಗಂಟೆಯಿAದ ಮರುದಿನ ಅಂದರೆ ಸೋಮವಾರ ಮಧ್ಯಾಹ್ನ ೩:೧೪ ರ ತನಕ ಷಷ್ಠಿ ತಿಥಿಯ ಪುಣ್ಯಕಾಲವಾಗಿರುತ್ತದೆ. ಬಹುತೇಕ ಎಲ್ಲ ದೇವಾಲಯ ಗಳಲ್ಲಿ ಡಿ. ೧೮ ರ ಸೋಮ ವಾರದಂದೇ ಸುಬ್ರಹ್ಮಣ್ಯ ಷಷ್ಠಿ ಪೂಜೆ ನಡೆಯಲಿದೆ. - ಟಿ.ಎ. ಕುಮಾರ್