ವೀರಾಜಪೇಟೆ, ಡಿ. ೧೬: ಇಲ್ಲಿನ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘ, ಸಂತ ಅನ್ನಮ್ಮ ದೇವಾಲಯ ವತಿಯಿಂದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ೧೨ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಪುರುಷರ ೫+೨ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ದೊರೆಯಿತು. ಕಾಲ್ಚೆಂಡು ಒದೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ರೆ.ಫಾ. ದಯಾನಂದ ಪ್ರಭು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಹೆಚ್ಚು ಸಹಕಾರಿ ಎಂದರು.

ಮುಖ್ಯ ಅತಿಥಿಯಾಗಿದ್ದ ಅಂತರರಾಷ್ಟಿçÃಯ ರಗ್ಬಿ ಪಟು ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ಪಿ. ತಿಮ್ಮಯ್ಯ ಮಾತನಾಡಿ, ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟನಲ್ಲಿ ಪಂದ್ಯಾಟಗಳನ್ನು ಅಯೋಜಿಸಿ ಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಕೆದಮುಳ್ಳೂರು ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಬಾಬು ನರ‍್ಹೋನ, ಉದ್ಯಮಿ ಚೋಫಿ ಜೋಸೆಫ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪುರಸಭೆಯ ಸದಸ್ಯ ಬೆನ್ನಿ ಆಗಸ್ಟಿನ್, ಮೆಟ್ರೋ ಹಾರ್ಡವೇರ್ ಮಾಲೀಕ ಅಖೀಲ್, ದಿವ್ಯಜ್ಯೋತಿ ಸಹಕಾರ ಬ್ಯಾಂಕ್ ನಿರ್ದೇಶಕಿ ಅನಿತಾ ಲೋಬೋ, ಸಂತ ಅನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘದ ಅದ್ಯಕ್ಷರಾದ ಮರ್ವಿನ್ ಲೋಬೋ, ಸದಸ್ಯ ಜೋಕಿಂ ರೋಡ್ರಿಗಸ್, ವೀರಾಜಪೇಟೆ ನಗರ ಠಾಣಾಧಿಕಾರಿ ರವೀಂದ್ರ, ಉದ್ಯಮಿ ಜೀವನ್ ಬಾರ್ನಡ್, ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಅದ್ಯಕ್ಷ ಪ್ರಾನ್ಸಿಸ್ ಲೋಬೋ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಕಾರ್ಯದರ್ಶಿ ಜ್ಯೂಡಿ ವಾಜ್ ಸ್ವಾಗತಿಸಿ ನಿರೂಪಿಸಿದರು, ಡ್ಯಾನಿಯಲ್ ಸಲ್ಡಾನಾ ವಂದಿಸಿದರು.

ಕಾಲ್ಚೆAಡು ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು ೨೨ ತಂಡಗಳು ಭಾಗವಹಿಸುತ್ತಿದ್ದು, ಜಿ.ವಿ ಯುನೈ ಟೆಡ್ ಎಫ್.ಸಿ. ಒಂಟಿಯAಗಡಿ ಮತ್ತು ಜಿ.ಎಸ್. ಬ್ರಾರ‍್ಸ್ ಪೊನ್ನಂ ಪೇಟೆ ತಂಡಗಳ ನಡುವೆ ಉದ್ಘಾಟನಾ ಪಂದ್ಯಾಟ ನಡೆಯಿತು, ಯುನೈಟೆಡ್ ಎಫ್.ಸಿ. ಒಂಟಿಯAಗಡಿ ತಂಡವು ೨-೦ ಗೋಲುಗಳಿಂದ ಪೊನ್ನಂಪೇಟೆ ತಂಡವನ್ನು ಮಣಿಸಿತು. ತಾ. ೧೭ ರಂದು ಸಂಜೆ ೪ ಗಂಟೆU ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.