ಶನಿವಾರಸಂತೆ, ಡಿ. ೧೫: ಪಟ್ಟಣದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ೨ನೇ ವರ್ಷದ ಶ್ರೀ ಹನುಮ ಜಯಂತಿ ಹಾಗೂ ಅದ್ಧೂರಿ ಶೋಭಾಯಾತ್ರಾ ಕಾರ್ಯಕ್ರಮವನ್ನು ತಾ. ೧೭ ರಂದು ಸಂಜೆ ೪.೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ಸಂಜೆ ೪.೩೦ ರಿಂದ ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಸ್ಥಾನದಿಂದ ಮೆರವಣಿಗೆ ಮೂಲಕ ಹೊರಟು ಮುಖ್ಯರಸ್ತೆಯ ಮೂಲಕ ಗುಡುಗಳಲೆ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿ, ಪ್ರವಾಸಿ ಮಂದಿರ ರಸ್ತೆಯ ಮಾರ್ಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ಬನ್ನಿಮಂಟಪ ತಲುಪಿ ಶೋಭಾಯಾತ್ರೆ ಕಾರ್ಯಕ್ರಮ ಪೂರ್ಣಗೊಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ನಗರ ಅಲಂಕಾರದೊAದಿಗೆ ವಿದ್ಯುತ್ ದೀಪಾಲಂಕಾರ, ಬೆಳ್ಳಿರಥ, ನಾಸಿಕ್ ಬ್ಯಾಂಡ್, ಚಂಡೆ ವಾದ್ಯ, ಸಿಡಿಮದ್ದಿನ ಪ್ರದರ್ಶನ, ಡಿ.ಜೆ. ಸೌಂಡ್‌ಗಳನ್ನು ಆಯೋಜಿಸಲಾಗಿದೆ. ರಾತ್ರಿ ೮ ಗಂಟೆಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಆಯೋಜಕರು ತಿಳಿಸಿದ್ದಾರೆ.