ಮಡಿಕೇರಿ, ಡಿ. ೧೬ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ತಾ. ೧೮ ರಂದು ನಾಪೋಕ್ಲು ಕೊಳಕೇರಿಯ ನೂರಂಬಡ ನಾಡ್ನಲ್ಲಿ ನಡೆಯುವ ೧೪ನೇ ವರ್ಷದ “ಗನ್ ಕಾರ್ನಿವಲ್ ತೋಕ್ ನಮ್ಮೆ”ಯಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಮಾಜಿ ಸದಸ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯ, ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಳಕೇರಿಯ ನೂರಂಬಡ ನಾಡ್ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಅವರ ಕಾವೇರಿ ಎಸ್ಟೇಟ್ನ ಕಾವೇರಿ ನದಿ ದಂಡೆಯಲ್ಲಿ ನಮ್ಮೆ ನಡೆಯಲಿದೆ.
ಸಂಸತ್ತಿನಲ್ಲಿ ಕೊಡವ ಗನ್ ವಿನಾಯಿತಿ ಹಕ್ಕುಗಳ ಮುಂದುವರಿಕೆಯನ್ನು ಅವರು ಸಮರ್ಥಿಸಿದ್ದರು. ಅಧಿಕಾರದಲ್ಲಿರುವ ಸರ್ಕಾರ ಶಸ್ತಾçಸ್ತç ಮತ್ತು ಯುದ್ಧ ಸಾಮಾಗ್ರಿ ತಿದ್ದುಪಡಿ ಮಸೂದೆಯನ್ನು ತಂದಾಗ ಸಂಸತ್ತಿನಲ್ಲಿ ಚರ್ಚೆ ನಡೆಯಿತು. ಹರಿಪ್ರಸಾದ್ ಅವರು ಹಕ್ಕುಗಳನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.