ಚೆಟ್ಟಳ್ಳಿ, ಡಿ. ೧೫: ಅತ್ಯಧಿಕ ಇಳುವರಿ ನೀಡುವ ಉತ್ತಮ ತಳಿಯ ಕಾಫಿ ಗಿಡಗಳ ಬೀಜೋತ್ಪಾದನಾ ಕಾರ್ಯ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ ನಡೆಯುತ್ತಿದ್ದು ಬೆಳೆಗಾರರಿಗೆ ಬೇಡಿಕೆಗೆ ತಕ್ಕಂತೆ ವಿತರಣೆಗೆ ಸಿದ್ಧಗೊಳ್ಳುತ್ತಿದೆ.

ಮೊದಲ ಹಂತವಾಗಿ ನವೆಂಬರ್-ಡಿಸೆAಬರ್ ತಿಂಗಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಆಯ್ದ ಪ್ಲಾಟ್‌ಗಳ ಬಲಿತ ಕಾಫಿ ಹಣ್ಣನ್ನು ಕುಯ್ಯಲಾಗುತ್ತದೆ. ಪಲ್ಪಿಂಗ್ ಯಂತ್ರದ ಮೂಲಕ ಬೀಜವನ್ನು ಬೇರ್ಪಡಿಸಿ ತೊಳೆದು ಬೇಡದ ತ್ಯಾಜ್ಯವನ್ನು ಹೆಕ್ಕಲಾಗುತ್ತದೆ. ಬೂದಿ ಹಾಗೂ ಕೀಟನಾಶಕಗಳೊಂದಿಗೆ ಮಿಶ್ರಣ ಮಾಡಿ ತಟ್ಟಿಯಲ್ಲಿ ತಂಪಗಿನ ಕೋಣೆಯಲ್ಲಿ ಒಣಗಿಸಲಾಗುತ್ತÀದೆ.

ಚೆಟ್ಟಳ್ಳಿ ಕೇಂದ್ರದ ಬೀಜಕ್ಕೆ ಬೇಡಿಕೆ

೧೯೪೬ರಲ್ಲಿ ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿ ಕಾಫಿ ಸಂಶೋಧನಾ ಉಪ ಕೇಂದ್ರವನ್ನು ಪ್ರಾರಂಭಿಸಲಾಗಿ ಅರೆಬಿಕಾ ಹಾಗೂ ರೋಬಸ್ಟಾದ ವಿವಿಧ ತಳಿಗಳ ಅಭಿವೃದ್ಧಿ ಪಡಿಸಲಾಗುತ್ತಿದೆ.

ಉತ್ತಮ ಗುಣಮಟ್ಟ ಹೊಂದಿರುವ ಕಾಫಿ ಗಿಡಗಳ ಪ್ಲಾಟ್‌ಗಳನ್ನು ಆಯ್ಕೆ ಮಾಡಿ ಅದರ ಹಣ್ಣಿನ ಬೀಜಗಳಿಂದ ತಳಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ.

ಕಾಫಿ ಬೆಳೆಗಾರರು ತಮಗೆ ಬೇಕಾದ ಕಾಫಿ ಬೀಜಗಳ ಬೇಡಿಕೆಯನ್ನು ಸಮೀಪದ ಕಾಫಿ ಮಂಡಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ..., ಇದೀಗ ಈ ವರ್ಷದ ಬೇಡಿಕೆ ಸಲ್ಲಿಸುವ ಅವಕಾಶ ಕೊನೆಗೊಂಡಿದೆ. ಆಯಾಯ ಮಂಡಳಿಗಳು ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಕ್ಕೆ ಕಾಫಿ ಬೀಜಗಳ ಬೇಡಿಕೆಯ ಮಾಹಿತಿ ಪಡೆದು ಆಯಾಯ ಕೇಂದ್ರಗಳಿಗೆ ಬೇಡಿಕೆಯ ಕಾಫಿ ತಳಿಗಳ ಬೀಜಗಳನ್ನು ವಿತರಿಸಲು ಆದೇಶಿಸಲಾಗುತ್ತದೆ.

ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದ ಮುಖ್ಯ ಕಚೇರಿ ಬಿಟ್ಟರೆ ಮಡಿಕೇರಿ ಸಮೀಪದ ಚೆಟ್ಟಳ್ಳಿ ಉಪ ಸಂಶೋಧನಾ ಕೇಂದ್ರ ಕಾಫಿ ತಳಿಗಳ ಅಭಿವೃದ್ಧಿಯಲ್ಲಿ ಉತ್ತಮ ಸ್ಥಾನಗಳಿಸಿದೆ. ಪ್ರಸ್ತುತ ವರ್ಷದಲ್ಲಿ ಬೆಳೆಗಾರರಿಂದ ಅರೆಬಿಕಾ ಚಂದ್ರಗಿರಿ ೧೦೦೦ ಕೆಜಿ ಹಾಗೂ - ಅ*ಖ ರೊಬಸ್ಟಾ ೨೫೬ ಕೆ.ಜಿ ಬೇಡಿಕೆಯಂತೆ ಈಗಾಗಲೇ ಕೇಂದ್ರದ ಸಂಶೋಧಿತ ಉತ್ತಮ ತಳಿಯ ಕಾಫಿ ಗಿಡಗಳ ಬೀಜೋತ್ಪಾದನಾ ಕಾರ್ಯ ನಡೆಯುತ್ತಿದೆ.

ಕೆ.ಜಿ.ಗೆ ರೂ.೪೦೦

ಉತ್ತಮ ತಳಿಯ ಕಾಫಿ ಗಿಡಗಳ ಬೀಜೋತ್ಪಾದನೆಯಲ್ಲಿ ೫೦೦ ಗ್ರಾಂನಿAದ ಹಿಡಿದು ಒಂದು ಕೆ.ಜಿ., ನಾಲ್ಕು ಕೆಜಿಯ ಬೀಜಗಳನ್ನು ಪ್ಯಾಕ್ ಮಾಡಲಾಗುತ್ತಿದೆ. ಪ್ರತಿ ಕೆ.ಜಿ.ಗೆ ರೂ. ೪೦೦ರಂತೆ ನೀಡಲಾಗುತ್ತಿದೆ.

- ಪುತ್ತರಿರ ಕರುಣ್ ಕಾಳಯ್ಯ