*ಗೋಣಿಕೊಪ್ಪ, ಡಿ. ೧೫: ಪಡಿತರ ಫಲಾನುಭವಿಗಳಿಗೆ ನೀಡುವ ಅಕ್ಕಿ ಪೂರ್ಣ ಹಾಳಾಗಿದ್ದು, ತಿನ್ನಲು ಯೋಗ್ಯವಲ್ಲದ ಅಕ್ಕಿ ದೇವರಪುರ ಗ್ರಾ.ಪಂ. ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಿAದ ವಿತರಣೆಯಾಗಿದೆ.

ಸಾಕಷ್ಟು ಅಕ್ಕಿಯ ಮೂಟೆಗಳು ಇದೇ ರೀತಿಯಲ್ಲಿ ಬಂದಿದ್ದು, ಫಲಾನುಭವಿಗಳು ಈ ಬಗ್ಗೆ ನ್ಯಾಯಬೆಲೆಯ ವಿತರಕರಲ್ಲಿ ವಿಚಾರಿಸಿದಾಗ ಮಾಹಿತಿ ನೀಡಿದ್ದಾರೆ. ಅಂಗಡಿಯಿAದ ಪೂರೈಕೆಯಾದ ಅಕ್ಕಿಯಲ್ಲಿ ಕೆಲವರಿಗೆ ಹುಳು ಕಂಡುಬAದಿದೆ. ತಕ್ಷಣ ಸಂಬAಧಿಸಿದರಿಗೆ ವಿಷಯ ತಿಳಿಸಿದ್ದಾರೆ.

ಈ ಭಾಗದಲ್ಲಿ ಬುಡಕಟ್ಟು ಸಮುದಾಯ, ಕಾಲೋನಿ ನಿವಾಸಿಗಳು, ಕೂಲಿ ಕಾರ್ಮಿಕರೆ ಹೆಚ್ಚಿದ್ದಾರೆ. ಊಟಕ್ಕೆ ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಅಕ್ಕಿಯನ್ನೇ ಆಶ್ರಯಿಸಿದ್ದಾರೆ. ಅಕ್ಕಿ ಹುಳು ತಿಂದಿರುವುದರಿAದ ತಿನ್ನಲು ಯೋಗ್ಯವಾಗಿಲ್ಲ. ಈ ಬಗ್ಗೆ ಪಡಿತರ ಫಲಾನುಭವಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸೂಕ್ತ ಮತ್ತು ಉತ್ತಮವಾದ ಅಕ್ಕಿಯನ್ನು ವಿತರಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ತಹಶೀಲ್ದಾರ್ ಕಚೇರಿ, ಆಹಾರ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.