ಸುದ್ದಿ - ವಿಶ್ಲೇಷಣೆ - ಅನಿಲ್ ಎಚ್.ಟಿ. ೯೮೪೪೦೬೦೧೭೪
ಮಡಿಕೇರಿ, ಡಿ. ೧೪: ಭಾರತದ ಇತಿಹಾಸದಲ್ಲಿಯೇ ಅತೀ ದೊಡ್ಡ ಭದ್ರತಾ ಲೋಪ ಎನ್ನಲಾಗಿರುವ ಸಂಸತ್ನಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಸಂಸತ್ನ ಭದ್ರತಾ ಉಸ್ತುವಾರಿಯಲ್ಲಿದ್ದ ೮ ಮಂದಿಯನ್ನು ಅಮಾನತ್ತುಗೊಳಿಸಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿಪಕ್ಷ ಸದಸ್ಯರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಲೋಕಸಭೆಯ ೧೪ ಮತ್ತು ರಾಜ್ಯಸಭೆಯ ಓರ್ವ ಸದಸ್ಯ ಸೇರಿದಂತೆ ೧೫ ಸದಸ್ಯರನ್ನು ಸದನ ಅಂತ್ಯಗೊಳ್ಳುವವರೆಗೂ ಸದನದ ಕಲಾಪಕ್ಕೆ ಬಾರದಂತೆ ಅಮಾನತ್ತುಗೊಳಿಸಿದ ಬೆಳವಣಿಗೆಯೂ ನಡೆದಿದೆ. ಲೋಕಸಭೆಯ ಚಳಿಗಾಲದ ಅಧಿವೇಶನ ದೇಶವ್ಯಾಪಿ ತಲ್ಲಣದ ಬಿಸಿಗೆ ಕಾರಣವಾಗಿದೆ.
ಬುಧವಾರ ಲೋಕಸಭೆಗೆ ಇಬ್ಬರು ಯುವಕರು ಏಕಾಏಕಿ ಧಾಳಿ ನಡೆಸಿ ಸದನದ ಕಲಾಪವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಘಟನೆ ಗುರುವಾರ ಕೂಡ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. ಕೊಡಗು - ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ನೀಡಲಾಗಿದ್ದ ಪಾಸ್ ಬಳಸಿ ದುಷ್ಕರ್ಮಿಗಳು ಸದನ ಪ್ರವೇಶಿಸಿ ಗದ್ದಲ ಉಂಟು ಮಾಡಿರುವ ಕಾರಣದಿಂದ ಪ್ರಕರಣಕ್ಕೆ ಪ್ರತಾಪ್ ಸಿಂಹ ನೇರ ಕಾರಣರಾಗಿದ್ದಾರೆ ಎಂದು ಬಿಜೆಪಿಯೇತರ ಪಕ್ಷಗಳ ಮುಖಂಡರು ದೇಶವ್ಯಾಪಿ ಪ್ರತಿಭಟನೆ ನಡೆಸಿದರಲ್ಲದೆ ಪ್ರತಾಪ್ ಸಿಂಹ ಅವರನ್ನು ಸದಸ್ಯ ಸ್ಥಾನದಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು.
ಲೋಕಸಭೆಯ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರಿಗೆ ಸಂಸದ ಪ್ರತಾಪ್ ಸಿಂಹ ಪಾಸ್ ಸಂಬAಧಿತ ತನ್ನ ಕಚೇರಿಯಲ್ಲಿ ನಡೆದ ವಿದ್ಯಮಾನದ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದು, ಕ್ಷೇತ್ರದ ಮತದಾರರಾಗಿರುವ ದೇವರಾಜೇಗೌಡ ತನಗೆ ಪರಿಚಿತರಾಗಿದ್ದಾರೆಯೇ ವಿನಾ ಆರೋಪಿಯಾಗಿರುವ ಅವರ ಮಗ ಮನೋರಂಜನ್ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾಮಾನ್ಯವಾಗಿ ಸದಾ ಟ್ವೀಟರ್ ಮೂಲಕ ಮಾಹಿತಿ ನೀಡುತ್ತಿದ್ದ ಪ್ರತಾಪ್ ಸಿಂಹ ಈ ಪ್ರಕರಣಕ್ಕೆ ಸಂಬAಧಿಸಿದAತೆ ಟ್ವೀಟರ್ನಿಂದ ದೂರವೇ ಉಳಿದಿದ್ದಾರೆ.
ಪ್ರಕರಣದ ಮುಖ್ಯ ಆರೋಪಿಗಳಾದ ಮೈಸೂರಿನ ಡಿ. ಮನೋರಂಜನ್ (೩೪), ಲಕ್ನೋ ಬಳಿಯ ಆಲಂಭಾಗ್ ನಿವಾಸಿ ಸಾಗರ್ ಶರ್ಮಾ (೨೭), ಹರಿಯಾಣದ ಫಾನೋ ಖರ್ದ್ ಗ್ರಾಮದ ನೀಲಂ ಆಜಾದ್ (೪೨), ಲಾತೂರ್ ಗ್ರಾಮದ ಅಮೋಲ್ ಶಿಂಧೆ (೨೫) ಇವರಿಗೆ ಆಶ್ರಯ ನೀಡಿದ ದೆಹಲಿ ಬಳಿಯ ಗುರುಗ್ರಾಮ ನಿವಾಸಿ ವಿಶಾಲ್ ಮತ್ತು ರಾಖಿ ದಂಪತಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಪ್ರಮುಖ ಆರೋಪಿಗಳಾದ ಮನೋರಂಜನ್, ಸಾಗರ್ ಶರ್ಮಾ, ನೀಲಂ, ಅಮೋಲ್ ಶಿಂಧೆ ನಿರುದ್ಯೋಗಿಗಳಾಗಿದ್ದು, ಹತಾಶೆಯಿಂದ ಇಂಥ ಕೃತ್ಯಕ್ಕೆ ಮುಂದಾಗಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರಿನ ನಿವಾಸಿಯಾಗಿರುವ ಆರೋಪಿ ಡಿ.ಮನೋರಂಜನ್ ಮನೆಗೆ ಮತ್ತೋರ್ವ ಆರೋಪಿ ಸಾಗರ್ ಶರ್ಮಾ
(ಮೊದಲ ಪುಟದಿಂದ) ಕಳೆದ ೧ ವರ್ಷಗಳಲ್ಲಿ ಎರಡು ಬಾರಿ ಬಂದಿದ್ದ. ಮನೋರಂಜನ್ ಮನೆಯಲ್ಲಿ ಊಟವನ್ನೂ ಮಾಡಿದ್ದ. ಕೆಲಹೊತ್ತು ಇವರೀರ್ವರು ಗಂಭೀರ ಚರ್ಚೆ ನಡೆಸಿದ್ದರು ಎಂದೂ ಪ್ರಾಥಮಿಕ ತನಿಖೆ ಸಂದರ್ಭ ತಿಳಿದುಬಂದಿದೆ.
ಸಾಗರ್ ಶರ್ಮಾ ಅವರ ತಂದೆ ರೋಷನ್ ಶರ್ಮಾ ಲಕ್ನೋದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗ ಭಗತ್ ಸಿಂಗ್ ಅವರ ಬೆಂಬಲಿಗನಾಗಿದ್ದು ಮಹಾನ್ ದೇಶಭಕ್ತನಾಗಿದ್ದಾನೆ. ಆದರೆ, ಮೈಸೂರಿನ ಮನೋರಂಜನ್ ಇಡೀ ಘಟನೆಯ ಮಾಸ್ಟರ್ ಮೈಂಡ್ ಆಗಿದ್ದಾನೆ. ಬೆಂಗಳೂರಿನಲ್ಲಿ ರಿಕ್ಷಾ ಚಾಲಕನಾಗಿದ್ದ ನನ್ನ ಮಗ ಸಾಗರ್ ಶರ್ಮಾ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮನೋರಂಜನ್ ಜತೆ ಸ್ನೇಹಾಚಾರ ಹೊಂದಿದ್ದ. ಹೀಗಾಗಿಯೇ ಸಾಗರ್ ಘಟನೆಯಲ್ಲಿ ಸಿಲುಕಿಕೊಳ್ಳುವಂತಾಯಿತು ಎಂದು ಹೇಳಿದ್ದಾರೆ. ಮಗನ ತಲೆಕೆಡಿಸಿದ್ದು ಮೈಸೂರಿನ ಮನೋರಂಜನ್ ಎಂದು ಮರಕೆಲಸದ ಕಾರ್ಮಿಕನಾಗಿರುವ ರೋಷನ್ ಶರ್ಮಾ ಅನುಮಾನಪಟ್ಟಿದ್ದಾರೆ.
ಪ್ರಕರಣದ ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್, ನೀಲಿಮಾ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ವೈದ್ಯಕೀಯ ತಪಾಸಣೆ ಬಳಿಕ ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ೭ ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲಾಗಿದೆ.
ಸಂಸತ್ ಕಲಾಪಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಲೋಕಸಭೆಯ ಭದ್ರತಾ ಸಚಿವಾಲಯ ಪ್ರೇಕ್ಷಕರ ಗ್ಯಾಲರಿ ಮುಂಬದಿ ಗಾಜಿನ ತಡೆಗೋಡೆ ನಿರ್ಮಿಸಲು ಮುಂದಾಗಿದ್ದು, ಮತ್ತಷ್ಟು ಸರ್ಪಗಾವಲಿನ ತಪಾಸಣೆಯನ್ನು ಸಂಸತ್ ವ್ಯಾಪ್ತಿಯಲ್ಲಿ ಹಾಕಲಾಗಿದೆ. ಸಂಸದರ ಕಾರ್ಯದರ್ಶಿಗಳಿಗೂ ಸದ್ಯಕ್ಕೆ ಲೋಕಸಭೆ ಪ್ರವೇಶ ನಿರ್ಬಂಧಿಸಲಾಗಿದೆ.
ಆರೋಪಿಗಳ ತನಿಖೆ ಕೈಗೊಂಡ ಸಂದರ್ಭ ಪಟಿಯಾಲ ಠಾಣೆಯ ಪೊಲೀಸರಿಗೆ ಕೆಲವೊಂದು ಮಹತ್ವದ ಸುಳಿವು ದೊರಕಿದೆ. ಆರೋಪಿಗಳು ಬೇರೆ ಬೇರೆ ರಾಜ್ಯದಲ್ಲಿದ್ದರೂ, ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಫೇಸ್ ಬುಕ್ ಗ್ರೂಪ್ ಮತ್ತು ಸಿಗ್ನಲ್ ಆ್ಯಪ್ ಮೂಲಕ ಪರಸ್ಪರ ಸಂದೇಶ ರವಾನಿಸಿಕೊಳ್ಳುತ್ತಿದ್ದರಂತೆ. ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಯೋಜನೆಯನ್ನು ಒಂದೂವರೆ ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಆದರೆ ಕಾರಣಾಂತರಗಳಿAದ ಯೋಜನೆ ಜಾರಿ ತಡವಾಗುತ್ತಾ, ಇದೀಗ ಡಿ.೬ ರಿಂದ ೧೦ ನೇ ದಿನಾಂಕದೊಳಗೆ ಎಲ್ಲಾ ಆರೋಪಿಗಳು ದೆಹಲಿ ತಲುಪಿಕೊಂಡಿದ್ದಾರೆ. ಡಿ.೧೧ ರಂದು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಪೂರ್ವಯೋಜನೆ ರೂಪಿಸಲ್ಪಟ್ಟಿದ್ದರೂ, ಕೊನೆಗೆ ೧೩ ರ ದಿನಾಂಕವನ್ನು ಆಯ್ಕೆ ಮಾಡಲಾಗಿತ್ತು.
ಸಂಚಿನAತೆ ಆರೋಪಿ ಅಮೋಲ್, ತಲಾ ೧೨೦೦ ರೂ. ನೀಡಿ ಕಲರ್ ಅನಿಲಗಳ ೫ ಕಿರು ಸಿಲಿಂಡರ್ ಖರೀದಿಸಿದ್ದ. ಅದನ್ನು ಶೂನೊಳಗೆ ಸಲೀಸಾಗಿ ತುರುಕಲು ಸಾಧ್ಯವಿದ್ದುದ್ದರಿಂದಾಗಿ ಆ ಸಿಂಪಡಣೆಯನ್ನೇ ಖರೀದಿಸಲಾಗಿತ್ತು. ಅದನ್ನು ಬಳಸಲು ಇತರ ಮೂವರಿಗೆ ಹಂಚಿದೆ. ಸಂಸತ್ ಕಲಾಪದಲ್ಲಿ ಗದ್ದಲ ಉಂಟು ಮಾಡಿ ಜಗತ್ತಿನ ಗಮನವನ್ನು ಭಾರತದ ನಿರುದ್ಯೋಗ, ರೈತರ ಸಂಕಷ್ಟ, ಮಣಿಪುರ ಪ್ರಕರಣ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸೆಳೆಯುವುದೇ ತಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ವಿಚಾರಣೆ ಸಂದರ್ಭ ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ.
ಸಂಸತ್ ಪಾಸು - ಭದ್ರತೆ ಫೇಲು
ಭಾರತದ ಪರಮ ಪವಿತ್ರ ಪ್ರಜಾಪ್ರಭುತ್ವದ ನೆಲೆಯಾದ ಲೋಕಸಭೆಗೆ ಅತ್ಯಂತ ಹೆಚ್ಚಿನ ಭದ್ರತೆ ಇರುತ್ತದೆ. ಈ ಭದ್ರತೆಯನ್ನು ಭೇದಿಸಿ ಒಳನುಗ್ಗುವುದು ಖಂಡಿತಾ ಅಸಾಧ್ಯ. ಆದರೆ ಇಂಥ ನಂಬಿಕೆಯನ್ನು ಬುಧವಾರದ ಘಟನೆ ನುಚ್ಚು ನೂರು ಮಾಡಿದೆ. ಲೋಕಸಭೆಗೆ ಪ್ರವೇಶಿಸುವುದು ಸುಲಭಸಾಧ್ಯ ಮಾತ್ರವಲ್ಲ, ಸದನ ಕಲಾಪ ನಡೆಯುವ ಸ್ಥಳಕ್ಕೂ ಸಲೀಸಾಗಿ ನುಗ್ಗಿ ಸಂಸದರ ಬಳಿ ತೆರಳಬಹುದು ಎಂಬ ನಂಬಿಕೆಗೂ ಡಿ.೧೩ ರ ಘಟನೆ ಕಾರಣವಾಗಿದೆ.
ಇಂಥ ನಂಬಿಕೆಗೆ ಕಾರಣವಾದದ್ದು ಅದೊಂದು ಪಾಸ್. ಹೌದು. ಸಂಸತ್ ಸದಸ್ಯರು ನೀಡುವ ಪಾಸ್ ಮೂಲಕವೇ ಲೋಕಸಭೆಯನ್ನು ಪ್ರವೇಶಿಸಬಹುದು. ಅಂದರೆ ಲೋಕಸಭೆಯ ಸದಸ್ಯರಾಗಿರುವ ಸಂಸತ್ತಿನ ಸದಸ್ಯರು ಪಾಸ್ ನೀಡಿದರೆ ಸಾಕು ಬಹುಪಾಲು ಅಂಥವರು ಸಲೀಸಾಗಿ ಲೋಕಸಭೆಯ ಕಟ್ಟಡ ಪ್ರವೇಶಿಸಲು ಸಾಧ್ಯವಿದೆ. ಲೋಕಸಭೆ ಕಟ್ಟಡವನ್ನು ಕಣ್ತುಂಬಿಸಿಕೊಳ್ಳಲು ಬಯಸುವವರು, ಲೋಕಸಭೆಯ ಕಲಾಪದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯುಳ್ಳವರು, ರಾಜಕೀಯದ ಬಗ್ಗೆ ಆಸಕ್ತಿಯುಳ್ಳವರು, ರಾಜಕೀಯ ತಜ್ಞರು, ರಾಜಕೀಯ ವಿಚಾರಗಳ ಸಂಶೋಧಕರು, ಸಂಸತ್ ಸದಸ್ಯರ ಕ್ಷೇತ್ರದ ಜನರು, ದೆಹಲಿಗೆ ಭೇಟಿ ನೀಡುವ ಸಂಸತ್ ಸದಸ್ಯರ ಕ್ಷೇತ್ರದ ಮತದಾರರು... ಹೀಗೆ ಅನೇಕ ಜನರು ಲೋಕಸಭೆಗೆ ಪ್ರವೇಶ ಪಡೆಯಲು ಇಚ್ಚಿಸುತ್ತಾರೆ.
ಇಂಥವರಿಗೆ ಸಂಸತ್ ಸದಸ್ಯರ ಕಚೇರಿಯಿಂದ ಸಂಸದರ ಸಹಿ ಅಥವಾ ಗೆಜೆಟೆಡ್ ಅಧಿಕಾರಿಯ ಸಹಿ ಇರುವ ಪಾಸ್ ವಿತರಿಸಲಾಗುತ್ತದೆ. ಪ್ರತೀ ಪಾಸನ್ನು ಸಂಸದರು ಗಮನಿಸಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಸಂಸದರ ಕಚೇರಿ ಕಾರ್ಯದರ್ಶಿಯೇ ಈ ಎಲ್ಲಾ ವ್ಯವಹಾರಗಳನ್ನೂ ಗಮನಿಸುತ್ತಿರುತ್ತಾರೆ. ಪ್ರತೀ ಸಂಸದನೂ ತನ್ನ ಪರಿಚಿತರಿಗೆ ಅಥವಾ ತನ್ನ ಕ್ಷೇತ್ರದ ಮತದಾರರಿಗೆ ಪಾಸ್ ನೀಡುವಂತೆ ಕಚೇರಿ ಕಾರ್ಯದರ್ಶಿಗೆ ಸೂಚನೆ ನೀಡಿರುತ್ತಾರೆ.
ಇದೇ ರೀತಿ ದೆಹಲಿಯಲ್ಲಿರುವ ಪ್ರತಾಪ್ ಸಿಂಹ ಅವರ ಕಚೇರಿ ಕಾರ್ಯದರ್ಶಿ ಸಾಗರ್ ಎಂಬವರು, ತನ್ನನ್ನು ಪಾಸ್ಗಾಗಿ ೩ ತಿಂಗಳಿನಿAದ ಪೀಡಿಸತೊಡಗಿದ್ದ ಡಿ. ಮನೋರಂಜನ್ಗೆ ಪಾಸ್ ನೀಡಿದ್ದಾರೆ. ಒಂದು ಪಾಸ್ನಲ್ಲಿ ಇಬ್ಬರು ಲೋಕಸಭೆ ಪ್ರವೇಶಿಸಲು ಸಾಧ್ಯವಿದೆ. ಇದೇ ಪಾಸ್ನ್ನು ಬಳಸಿಕೊಂಡು ಮನೋರಂಜನ್ ತನ್ನೊಂದಿಗೆ ಸಾಗರ್ ಶರ್ಮಾನನ್ನು ಕರೆದೊಯ್ದು ಸದನಕ್ಕೆ ಜಿಗಿದು ಅನಾಹುತಕ್ಕೆ ಕಾರಣನಾಗಿದ್ದಾನೆ. ನಿಯಮ ಪ್ರಕಾರ ಸಂಸದರಿಗೆ ಪರಿಚಿತರಾಗಿರುವವರಿಗೇ ಇಂಥ ಪಾಸ್ ನೀಡಬೇಕು. ತಾನು ಪಾಸ್ ನೀಡಿದಾತ ತನಗೆ ಪರಿಚಿತನಾಗಿದ್ದಾನೆ. ಅವನ ಸಂಪೂರ್ಣ ಮಾಹಿತಿ ನನಗೆ ತಿಳಿದಿದೆ. ಇವರಿಗೆ ಪಾಸ್ ನೀಡಲು ನಾನು ಬದ್ಧನಾಗಿದ್ದೇನೆ ಎಂದು ಖಚಿತಪಡಿಸಿಯೇ ಪಾಸ್ಗೆ ಸಹಿ ಹಾಕಬೇಕೆಂದು ನಿಯಮ ಇದೆ.
ಆದರೆ ಎಲ್ಲಾ ಸಂದರ್ಭದಲ್ಲಿಯೂ ಸಂಸದರು ಪ್ರತೀಯೋರ್ವನನ್ನೂ ಗಮನಿಸಲು ಸಾಧ್ಯ ಇಲ್ಲದಿರುವುದರಿಂದಾಗಿ ಸಂಸದ ಅಥವಾ ಗೆಜೆಟೆಡ್ ಅಧಿಕಾರಿ ಮೊದಲೇ ಸಹಿ ಮಾಡಿರುವ ಪಾಸ್ಗಳನ್ನು ಕಚೇರಿ ಕಾರ್ಯದರ್ಶಿಯೇ ನೀಡುವುದು, ಜನಪ್ರತಿನಿಧಿಗಳ ವಿಚಾರದಲ್ಲಿ ಸಾಮಾನ್ಯವಾಗಿದೆ. ಆದರೆ ಇದೀಗ ಅಪರಿಚಿತನಿಗೆ ಪಾಸ್ ನೀಡಿದ್ದೇ ಕೊಡಗು - ಮೈಸೂರು ಸಂಸದರಾದ ಪ್ರತಾಪ್ ಸಿಂಹ ವರ್ಚಸ್ಸಿಗೆ ಮುಳುವಾಗಿದೆ.
ಈ ರೀತಿ ಪಾಸ್ ಪಡೆದವರು ಸುಲಭವಾಗಿ ಲೋಕಸಭೆಗೆ ಹೆಜ್ಜೆ ಹಾಕಬಹುದೇ? ಖಂಡಿತಾ ಸಾಧ್ಯವಿಲ್ಲ. ಸಂಸದರ ಕಚೇರಿಯಿಂದ ನೀಡಲಾಗಿರುವ ಪಾಸ್ನ್ನು ತನ್ನ ಆಧಾರ್ ಕಾರ್ಡ್ನೊಂದಿಗೆ ಲೋಕಸಭೆಯ ಪ್ರವೇಶದಲ್ಲಿರುವ ಭದ್ರತಾ ಸಿಬ್ಬಂದಿಗೆ ತೋರಿಸಬೇಕು. ಅಲ್ಲಿರುವ ಲಾಕರ್ನಲ್ಲಿ ಮೊಬೈಲ್, ಹಣವಿರುವ ಪರ್ಸ್, ಬ್ಯಾಗ್, ಪೆನ್, ನೀರಿನ ಬಾಟಲ್ಗಳು, ಇತ್ಯಾದಿ ವಸ್ತುಗಳೆಲ್ಲವನ್ನೂ ಇರಿಸಬೇಕು. ತರುವಾಯ, ೩ ಹಂತದಲ್ಲಿ ದೆಹಲಿ ಪೊಲೀಸರು, ಕೇಂದ್ರ ಮೀಸಲು ಪೊಲೀಸ್ ಪಡೆಯ ಜವಾನರಿಂದ ಭದ್ರತಾ ತಪಾಸಣೆಯಿರುವ ಚಕ್ರವ್ಯೂಹದಂತೆ ಇರುವ ತಪಾಸಣೆಯ ಸಿಬ್ಬಂದಿ ಪರಿಶೀಲನೆಗೊಳಪಡಬೇಕು. ಇಷ್ಟೆಲ್ಲಾ ಆದ ಬಳಿಕ ಪ್ರೇಕ್ಷಕರ ಗ್ಯಾಲರಿಗೆ ತೆರಳಿದ ಬಳಿಕವೂ ಅಲ್ಲಿಯೂ ಬಿಗಿಯಾದ ಭದ್ರತಾ ಸಿಬ್ಬಂದಿಯ ಹದ್ದಿನಗಣ್ಣಿರುತ್ತದೆ. ಮಾತ್ರವಲ್ಲ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕೇವಲ ೪೫ ನಿಮಿಷ ಮಾತ್ರ ಕಲಾಪ ವೀಕ್ಷಣೆಗೆ ಆಸೀನರಾಗಲು ಅವಕಾಶ ನೀಡಲಾಗಿರುತ್ತದೆ.
ಹೀಗಿದ್ದರೂ ಸಲೀಸಾಗಿ ಡಿ. ಮನೋರಂಜನ್ ಮತ್ತು ಸಾಗರ್ ಶರ್ಮಾ ಕಲಾಪ ನಡೆಯುವ ಸ್ಥಳಕ್ಕೆ ನುಗ್ಗಿದ್ದಾರೆ ಎಂದರೆ ಭದ್ರತಾ ತಪಾಸಣೆಯಲ್ಲಿಯೇ ಲೋಪ ಇದೆ ಎಂದು ಗೊತ್ತಾಗುತ್ತದೆ. ಇಲ್ಲೊಂದು ಗಮನಾರ್ಹ ಅಂಶವಿದೆ.
ಸಾಮಾನ್ಯವಾಗಿ ಬಾಡಿ ಸ್ಕಾö್ಯನರ್ ಮಾಡುವಾಗ ಕಾಲಬಳಿ ತಪಾಸಣೆ ತಪ್ಪಿಹೋಗುತ್ತದೆ. ಶೂ ಹಾಕಿರುವ ಜಾಗವನ್ನು ಅಷ್ಟಾಗಿ ತಪಾಸಣೆ ಮಾಡುವುದಿಲ್ಲ. ವಿಮಾನ ನಿಲ್ದಾಣದ ಉದಾಹರಣೆ ತೆಗೆದುಕೊಳ್ಳುವುದಾದಲ್ಲಿ, ಇಲ್ಲಿರುವ ಲೋಹ ತಪಾಸಣೆಯ ಯಂತ್ರದಲ್ಲಿ ಕಾಲು ಅಥವಾ ಶೂ ತಪಾಸಣೆಗೊಳಪಡುವುದಿಲ್ಲ, ಬೆಲ್ಟ್ ಬಿಚ್ಚಿ, ವಾಚ್ ಬಿಚ್ಚಿ, ಸರ ಬಿಚ್ಚಿ ಎನ್ನಲಾಗುತ್ತದೆಯೇ ವಿನಾ ಶೂ ಬಿಚ್ಚಿ, ಸಾಕ್ಸ್ ಬಿಚ್ಚಿ ತಪಾಸಣೆ ಮಾಡಲಾಗುವುದಿಲ್ಲ. ಭದ್ರತಾ ವಲಯದ ತಜ್ಞರ ಪ್ರಕಾರ ಇದೇ ಅಂಶವನ್ನು ಗಮನಿಸಿರುವ ಧಾಳಿಕೋರರು, ಶೂನಲ್ಲಿಯೇ ಕಲರ್ ಸಿಂಪಡಣೆಯ ಪುಟ್ಟ ಸಿಲಿಂಡರ್ ಇರಿಸಿಕೊಂಡು ಬಂದಿದ್ದಾರೆ. ಇಂಜಿನಿಯರಿAಗ್ ಪದವೀಧರರಾಗಿರುವ ದುಷ್ಕರ್ಮಿಗಳಿಗೆ ಇಂಥ ಸಿಲಿಂಡರ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದಿದೆ. ಲೋಹ ತಪಾಸಣೆ ಯಂತ್ರದಲ್ಲಿ ಶೂ ತಪಾಸಣೆ ಅಥವಾ ಸ್ಕಾö್ಯನ್ಗೆ ಒಳಪಡುವುದಿಲ್ಲ, ಅಂತೆಯೇ ಶೂ ಒಳಗಿನ ವಸ್ತುವನ್ನು ಗುರುತು ಮಾಡುವಲ್ಲಿ ಸ್ಕಾö್ಯನರ್ಗಳು ವಿಫಲವಾಗುತ್ತದೆ ಎಂದು ತಿಳಿದಿದೆ. ಇದೇ ಅಂಶದ ಆಧಾರದಲ್ಲಿ ಕಿಡಿಗೇಡಿಗಳು ಸಲೀಸಾಗಿ ಸಂಸತ್ ಪ್ರವೇಶಿಸಿದ್ದಾರೆ.
ಈ ಕೃತ್ಯದಿಂದಾಗಿ ಮುಂದಿನ ದಿನಗಳಲ್ಲಿ ಲೋಕಸಭೆ ಮಾತ್ರವಲ್ಲ, ವಿಮಾನ ನಿಲ್ದಾಣ ಸೇರಿದಂತೆ ದೇಶದ ಸೂಕ್ಷö್ಮ ಪ್ರದೇಶಗಳಲ್ಲಿ ಲೋಹ ಯಂತ್ರ ತಪಾಸಣೆ ಸಂದರ್ಭ ಶೂ ಕೂಡ ಬಿಚ್ಚಿ ಪರಿಶೀಲನೆಗೊಳಪಡಬೇಕು ಎಂಬ ನಿಯಮ ಜಾರಿಗೆ ಬರಬಹುದು.
ವಿ ಸ್ಡಾಂಡ್ ವಿತ್ ಯು.. ಪ್ರತಾಪ್ ಸಿಂಹ (ನಾವು ನಿಮ್ಮೊಂದಿಗಿದ್ದೇವೆ.. ಪ್ರತಾಪ್ ಸಿಂಹ) ಎಂಬ ಅಭಿಯಾನವನ್ನು ಬೆಂಬಲಿಗರು ಪ್ರಾರಂಭಿಸಿದ್ದಾರೆ.
ಬುಧವಾರ ಭಾರತವೇ ಬೆಚ್ಚಿಬೀಳಲು ಕಾರಣವಾದ ಘಟನೆಯಲ್ಲಿ ಸಂಸದರ ಕಚೆೆÃರಿಯಿಂದ ನೀಡಲಾದ ಸಂಸತ್ ಪಾಸು - ಭದ್ರತೆ ಫೇಲಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ದೇಶಪ್ರೇಮಿ ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಹೆಸರಿನಲ್ಲಿ ಫೇಸ್ ಬುಕ್.
ಸಂಸತ್ ಮೇಲಿನ ಧಾಳಿ ಪ್ರಕರಣದಲ್ಲಿನ ಆರೋಪಿಗಳಾದ ಮೈಸೂರಿನ ಡಿ. ಮನೋರಂಜನ್ (೩೪), ಲಕ್ನೋ ಬಳಿಯ ಆಲಂಭಾಗ್ ನಿವಾಸಿ ಸಾಗರ್ ಶರ್ಮಾ (೨೭), ಹರಿಯಾಣದ ಫಾನೋ ಖರ್ದ್ ಗ್ರಾಮದ ನೀಲಂ (೪೨), ಲಾತೂರ್ ಗ್ರಾಮದ ಅಮೋಲ್ ಶಿಂಧೆ (೨೫) ಕಳೆದ ಮೂರು ವರ್ಷಗಳಿಂದ ಗೆಳೆಯರಾಗಿದ್ದರು. ಬೇರೆ ಬೇರೆ ಊರಿನವರಾಗಿದ್ದರೂ ಫೇಸ್ ಬುಕ್ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ತಮ್ಮದೇ ಬಳಗದ ಫೇಸ್ ಬುಕ್ಗೆ ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎಂದು ಹೆಸರನ್ನಿಟ್ಟಿದ್ದರು.
ಇವರೆಲ್ಲರೂ ದೆಹಲಿ ಬಳಿಯ ಗುರುಗ್ರಾಮ್ನಲ್ಲಿರುವ ವಿಶಾಲ್ ಮತ್ತು ರಾಖಿ ಎಂಬ ದಂಪತಿ ಮನೆಯಲ್ಲಿ ಸೇರಿ ಸಂಸತ್ ಪ್ರವೇಶದ ಅಂತಿಮ ರೂಪುರೇಷೆ ಸಿದ್ದಪಡಿಸಿದ್ದರು. ಈ ನಾಲ್ವರಿಗೆ ಆಶ್ರಯ ನೀಡಿದ ತಪ್ಪಿಗಾಗಿ ವಿಶಾಲ್ - ರಾಖಿ ದಂಪತಿಯೂ ಈಗ ಪೊಲೀಸ್ ಬಂಧನಕ್ಕೊಳಗಾಗಿದ್ದಾರೆ.
ಸAಸತ್ ಒಳನುಗ್ಗಿ ದಾಂಧಲೆ ಎಬ್ಬಿಸಿ ದೇಶದ ಗಮನ ಸೆಳೆಯಬೇಕು ಎಂಬ ತೀರ್ಮಾನವಾಗಿದ್ದು ಮೈಸೂರಿನಲ್ಲಿ ಸಾಗರ್ ಶರ್ಮಾ ಕಳೆದ ೫ ತಿಂಗಳ ಹಿಂದೆ ಮೈಸೂರಿನಲ್ಲಿದ್ದ ಮನೋರಂಜನ್ ಮನೆಗೆ ಬಂದಿದ್ದ ಸಂದರ್ಭ. ನಂತರ ಬಜೆಟ್ ಅಧಿವೇಶನ ವೀಕ್ಷಿಸಲು ಸಾಗರ್ ಶರ್ಮಾ ದೆಹಲಿಗೆ ತೆರಳಿ ಲೋಕಸಭೆಯ ಹಳೇ ಕಟ್ಟಡದಲ್ಲಿ ನಡೆದ ಕಲಾಪ ವೀಕ್ಷಿಸಿದ್ದ. ಆಗಲೇ ಸದನದ ಕಲಾಪ ಹೇಗೆ ನಡೆಯುತ್ತದೆ, ವೀಕ್ಷಕರ ಗ್ಯಾಲರಿ ಹೇಗಿರುತ್ತದೆ ಎಂದೆಲ್ಲಾ ಗಮನಿಸಿದ್ದ.
ಮೈಸೂರಿನ ಡಿ.ಮನೋರಂಜನ್ ಕಂಪ್ಯೂಟರ್ ಸೈನ್ಸ್ ಪದವೀಧರನಾಗಿ ೧೦ ವರ್ಷಗಳೇ ಆಗಿದ್ದರೂ ದಶಕದ ಕಾಲ ಯಾವುದೇ ಉದ್ಯೋಗಕ್ಕೆ ತೆರಳದೇ ಮನೆಯಲ್ಲಿನ ತನ್ನ ಕೋಣೆಯಲ್ಲಿಯೇ ಪುಸ್ತಕ ಓದಿಕೊಂಡು ಕಾಲ ಕಳೆಯುತ್ತಿದ್ದ. ಮೈಸೂರಿನ ವಿಜಯನಗರದಲ್ಲಿನ ಮನೋರಂಜನ್ ಮನೆಗೆ ಬುಧವಾರ ಸಂಜೆ ಧಾಳಿ ನಡೆಸಿದ ಪೊಲೀಸ್ ಅಧಿಕಾರಿಗಳೇ ಅಚ್ಚರಿ ಪಡುವಂತೆ ಇಲ್ಲಿ ಸಹಸ್ರಾರು ಪುಸ್ತಕಗಳ ಸಂಗ್ರಹ ಇತ್ತು.
ಬಹುತೇಕ ಪುಸ್ತಕಗಳು ಕ್ರಾಂತಿಗೆ ಸಂಬAಧಿಸಿದ್ದು ಆಗಿದ್ದವು. ಕ್ರಾಂತಿಕಾರಿ ಚಿಗುವೆರಾ, ಭೂಗತ ಖದೀಮ ದಾವೂದ್ ಇಬ್ರಾಹಿಂ, ವಾಟರ್ ವಾರ್ಸ್ ಸೇರಿದಂತೆ ವಿಶ್ವದ ಕ್ರಾಂತಿಗೆ ಸಂಬAಧಿಸಿದAತೆ ವಿವಿಧ ಲೇಖಕರ ಪುಸ್ತಕಗಳನ್ನು ಮನೋರಂಜನ್ ತನ್ನ ಕೋಣೆಯಲ್ಲಿ ಹೊಂದಿದ್ದ. ಟೈಗರ್ ಅಶೋಕ್ ಕುಮಾರ್ ಬರೆದಿರುವ ಹುಲಿಯ ನೆನಪುಗಳು ಕೃತಿ ಕೂಡ ಇಲ್ಲಿತ್ತು. ಯಾರೊಂದಿಗೂ ಬೆರೆಯದ ಮನೋರಂಜನ್ ಓದಿನಿಂದಾಗಿ ಜ್ಞಾನವರ್ದನೆಯಾಗುತ್ತದೆ. ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ನಂಬಿದ್ದ. ನಕ್ಸಲ್ ಶೈಲಿಯ ಹೋರಾಟಕ್ಕೆ ಮನೋರಂಜನ್ ಮನಸೋತಿದ್ದ ಎನ್ನಲಾಗಿದೆ.
ಎಲ್ಲರ ಗಮನ ಸೆಳೆದಿರುವ ಸ್ನಾತಕೋತ್ತರ ಪದವೀಧರೆ ನೀಲಂ ರೈತಪರ ಚಳುವಳಿ ಸೇರಿದಂತೆ ದೇಶದ ಪ್ರಮುಖ ಕ್ರಾಂತಿಕಾರಿ ಚಳವಳಿಗಳಲ್ಲಿ ಭಾಗಿಯಾಗಿದ್ದಳು. ಕೇಂದ್ರ ಸರ್ಕಾರ ಭಾರತೀಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ, ಹಕ್ಕುಗಳ ಬಗ್ಗೆ ಮಾತನಾಡಿದರೆ ಲಾಠಿ ಚಾರ್ಜ್ ಮಾಡುತ್ತಾರೆ. ನಾವು ಯಾವುದೇ ಸಂಘಟನೆಗೆ ಸೇರಿಲ್ಲ, ದೇಶದಲ್ಲಿನ ರೈತರು, ಸಣ್ಣ ವ್ಯಾಪಾರಿಗಳು, ಕೂಲಿಕಾರ್ಮಿಕರ ಸಂಕಷ್ಟಕ್ಕೆ ಧ್ವನಿಯಾಗಿ ಎಲ್ಲರ ಗಮನ ಸೆಳೆಯಲು ಈ ಕೃತ್ಯ ಮಾಡಿದ್ದೇವೆ ಎಂದು ನೀಲಂ ಪೊಲೀಸರಿಗೆ ತಿಳಿಸಿದ್ದಾಳೆ. ಕೇಂದ್ರ ಸರ್ಕಾರ ಅಥವಾ ಮೋದಿಯ ಸರ್ವಾಧಿಕಾರಿ ಧೋರಣೆ ವಿರುದ್ಧ ಈ ನಾಲ್ವರೂ ಸದನ ಪ್ರವೇಶದ ಮೂಲಕ ಜಗತ್ತಿನ ಗಮನ ಸೆಳೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿದೆ.
ಕ್ಷೇತ್ರದವರು ಎಂದು ಪ್ರತಾಪ್ ಪಾಸ್ ನೀಡಿದ್ದಾರೆ - ಪ್ರಹ್ಲಾದ್ ಜೋಷಿ
ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸತ್ ಸ್ಥಾನದಿಂದ ಅಮಾನತ್ತು ಗೊಳಿಸುವಂತೆ ಬಿಜೆಪಿಯೇತರ ಪ್ರತಿಪಕ್ಷಗಳು ಪಟ್ಟು ಹಿಡಿದಿರುವಂತೆಯೇ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವÀ ಪ್ರಹ್ಲಾದ್ ಜೋಷಿ ಸ್ಪಷ್ಟನೆ ನೀಡಿದ್ದು, ಪ್ರತಾಪ್ ಸಿಂಹ ತನ್ನ ಕ್ಷೇತ್ರದವರು ಎಂದೇ ಮನೋರಂಜನ್ಗೆ ಪಾಸ್ ನೀಡಿದ್ದಾರೆ. ಅದನ್ನು ಆರೋಪಿಗಳು ಬೇರೆ ಉದ್ದೇಶಕ್ಕೆ ಬಳಸಿದ್ದಾರೆ. ಈ ಮೊದಲು ಮೂರು ಬಾರಿ ಮನೋರಂಜನ್ಗೆ ಪ್ರತಾಪ್ ಪಾಸ್ ನೀಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಪ್ರತಾಪ್ ಸಿಂಹ ಅವರನ್ನು ಅಮಾನತ್ತುಗೊಳಿಸಬೇಕೆ ಎಂಬುದು ಮುಂದಿನ ತನಿಖಾ ಹಂತ ಆಧರಿಸಿ ತೀರ್ಮಾನವಾಗಲಿದೆ. ಇದನ್ನು ಸ್ಪೀಕರ್ ನಿರ್ಧರಿಸಲಿದ್ದಾರೆ ಎಂದಿದ್ದಾರೆ. ಪ್ರಕರಣ ನಡೆದ ಬಳಿಕ ಕೇಂದ್ರದ ಸಚಿವರೋರ್ವರ ಪ್ರಥಮ ಪ್ರತಿಕ್ರಿಯೆ ಇದಾಗಿದೆ.
ಶೂ ಪರಿಶೀಲಿಸುವುದಿಲ್ಲ ಎಂಬ ಬಗ್ಗೆ ಖಾತ್ರಿ ಇತ್ತು !!
ಸಂಸತ್ ಭವನದ ಬಿಗಿ ಭದ್ರತೆ ದಾಟಿ ಲೋಕಸಭೆಯೊಳಗೆ ಪ್ರವೇಶಿಸಿ, ‘ಕಲರ್ ಸ್ಮೋಕ್’ ದಾಳಿ ನಡೆಸಿದ್ದವರಲ್ಲಿ ಒಬ್ಬನಾಗಿರುವ ಮೈಸೂರು ನಿವಾಸಿ ಮನೋರಂಜನ್, ಸಂಸತ್ತಿನಲ್ಲಿ ‘ಶೂ’ ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮೊದಲೇ ಗುರುತಿಸಿದ್ದ ಎಂದು ತಿಳಿದುಬಂದಿದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಂದ ಪ್ರವೇಶ ಪಾಸ್ ಪಡೆದು ಬುಧವಾರ ಲೋಕಸಭೆ ಪ್ರವೇಶಿಸಿದ ಮೈಸೂರಿನ ಮನೋರಂಜನ್, ಸಂಸತ್ತಿನ ಪ್ರವೇಶದ ಸಮಯದಲ್ಲಿ ಶೂಗಳನ್ನು ಪರಿಶೀಲಿಸುವುದಿಲ್ಲ ಎಂಬುದನ್ನು ಕಳೆದ ಜುಲೈನಲ್ಲೇ ಕಂಡುಕೊAಡಿದ್ದ ಎನ್ನಲಾಗಿದೆ.
ಜುಲೈನಲ್ಲಿ ದೆಹಲಿಗೆ ಬಂದಿದ್ದ ಮನೋರಂಜನ್, ಸಂಸದರ ಹೆಸರಿನಲ್ಲಿ ನೀಡಲಾದ ವಿಸಿಟರ್ ಪಾಸ್ನಲ್ಲಿ ಸಂಸತ್ ಪ್ರವೇಶಿಸಿದ್ದ ಎನ್ನಲಾಗಿದೆ. ಪರಿಶೀಲನೆ ವೇಳೆ ಬೂಟುಗಳನ್ನು ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮನೋರಂಜನ್ ತಿಳಿದುಕೊಂಡಿದ್ದ.
ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಮನೋರಂಜನ್ ಕಂಡ ಭದ್ರತಾ ತಪಾಸಣೆ ಉಲ್ಲಂಘನೆಯ ವಿಚಾರವೂ ಬುಧವಾರದ ಘಟನೆ ಸಂಬAಧಿತ ಉಪಯುಕ್ತ ಮಾಹಿತಿಯಾಗಿರುವುದು ಕಂಡುಬAದಿದೆ. ಹೀಗಾಗಿಯೇ ಮನೋರಂಜನ್ ಹಾಗೂ ಸಾಗರ್ ಶರ್ಮಾ ತಮ್ಮ ಶೂನೊಳಗೆ ಕಲರ್ ಸ್ಮೋಕ್ ಇರಿಸಿಕೊಂಡು ಕಲಾಪ ಪ್ರವೇಶಿಸಿದ್ದರು.
ಮನೋರಂಜನ್ ಮನೆಗೆ ಕೇಂದ್ರ ತಂಡ ಭೇಟಿ
ಸಂಸತ್ ಭವನದ ಮೇಲೆ ದಾಳಿ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರದ