ಮುಳ್ಳೂರು, ಡಿ. ೧೫: ಶನಿವಾರಸಂತೆ ಮತ್ತು ಸೋಮವಾರಪೇಟೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೧೭ ರಂದು ಹನುಮ ಜಯಂತಿ ಮತ್ತು ೨ನೇ ವರ್ಷದ ಅದ್ದೂರಿ ಶೋಭಾಯಾತ್ರಾ ಕಾರ್ಯಕ್ರಮ ನಡೆಯಲಿದೆ. ತಾ. ೧೭ರಂದು ಸಂಜೆ ೪.೩೦ ರಿಂದ ಹನುಮ ಜಯಂತಿ ಪ್ರಯುಕ್ತ ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಹೊರಟು ಮುಖ್ಯರಸ್ತೆ ಮಾರ್ಗವಾಗಿ ಗುಡುಗಳಲೆ ಶ್ರೀ ಬಸವೇಶ್ವರ ದೇವಾಲಯ ತಲುಪಿದ ಬಳಿಕ ಪಟ್ಟಣದ ಬೈಪಾಸ್ ರಸ್ತೆ ಮಾರ್ಗವಾಗಿ ಕೆಆರ್ಸಿ ವೃತ್ತದಲ್ಲಿರುವ ಬನ್ನಿ ಮಂಟಪವನ್ನು ತಲುಪಿ ಶೋಭಯಾತ್ರೆ ಮುಕ್ತಾಯಗೊಳ್ಳಲಿದೆ. ಹನುಮ ಜಯಂತಿ ಪ್ರಯುಕ್ತ ಪಟ್ಟಣದ ಕೆಆರ್ಸಿ ವೃತ್ತದಲ್ಲಿ ರಾತ್ರಿ ೮ ಗಂಟೆಯಿAದ ಅನ್ನದಾಸೋಹ ನಡೆಸಲಾಗುವುದು ಎಂದು ಹಿಂದೂ ಜಾಗರಣಾ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂ ಜಾಗಾರಣ ವೇದಿಕೆ ವತಿಯಿಂದ ಈಗಾಗಲೇ ಹನುಮ ಜಯಂತಿ ಪ್ರಯುಕ್ತ ಪಟ್ಟಣದ ಕೆಆರ್ಸಿ ವೃತ್ತದ ಉದ್ದಗಲಕ್ಕೂ ಕೇಸರಿ ತೋರಣದಿಂದ ಅಲಂಕರಿಸಿರುವ ಮೂಲಕ ಅದ್ದೂರಿ ಶೋಭಯಾತ್ರೆಗೆ ಸಿದ್ಧತೆ ನಡೆಸಲಾಗಿದೆ. ಹನುಮ ಜಯಂತಿ ಹಿನ್ನೆಲೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.