ಮಡಿಕೇರಿ, ಡಿ. ೧೫: ಜಿಲ್ಲೆಯ ಪ್ರಗತಿಪರ ರೈತ ದಲಿತ ಕಾರ್ಮಿಕ ಮಹಿಳೆ, ವಿದ್ಯಾರ್ಥಿ-ಯುವಜನ ಸಂಘಟನೆಗಳು ಮತ್ತು ಮಾನವ ಬಂಧುತ್ವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ‘ಕಲ್ಯಾಣ ರಾಜ್ಯದ ಪರಿಕಲ್ಪನೆ ಸತ್ಯ ಮತ್ತು ಮಿಥ್ಯೆಗಳು’ ವಿಷಯದಡಿ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ಕುಮಾರ್, ಎಲ್ಲರಿಗೂ ಸಾಮಾಜಿಕ, ಆರ್ಥಿಕ ಭದ್ರತೆ ನೀಡುವದೇ ಕಲ್ಯಾಣ ರಾಜ್ಯದ ಪರಿಕಲ್ಪನೆಯಾಗಿದೆ. ಆದರೆ, ಇದೀಗ ತೆರಿಗೆ, ಬೆಲೆ ಏರಿಕೆ ಮುಂತಾದ ಹೊರೆಯಿಂದ ಸಾಮಾನ್ಯ ಜನರು ತೊಂದರೆಗೀಡಾಗುವAತೆ ಆಗಿದೆ. ಈ ನಿಟ್ಟಿನಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬ ತತ್ವದ ಮೇಲೆ ಸಂವಿಧಾನದಲ್ಲಿ ಪ್ರತಿಪಾದಿಸ ಲಾಗಿರುವ ಕಲ್ಯಾಣ ರಾಜ್ಯ ಪರಿಕಲ್ಪನೆ ನಮ್ಮ ರಾಜ್ಯದಲ್ಲಿ ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಿದೆ ಎಂಬ ಕುರಿತಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ತಾ. ೧೮ರಂದು ಮಡಿಕೇರಿಯ ಕೂರ್ಗ್ ಕಮ್ಯುನಿಟಿ ಹಾಲ್ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ವಕೀಲ ಕೆ.ಆರ್. ವಿದ್ಯಾಧರ ಉದ್ಘಾಟನೆ ಮಾಡಲಿದ್ದಾರೆ. ಕಲ್ಯಾಣ ರಾಜ್ಯ ಪರಿಕಲ್ಪನೆ ಮತ್ತು ಕಾರ್ಪೋರೇಟ್ ಶಕ್ತಿಗಳ ಹುನ್ನಾರಗಳು ಎಂಬ ವಿಷಯದ ಕುರಿತು ಕರ್ನಾಟಕ ಕಾರ್ಮಿಕ ಚಳವಳಿಯ ನಾಯಕ, ಬೆಂಗಳೂರಿನ ಡಾ.ಪ್ರಕಾಶ್ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಹೊರೆ-ಜನ ತಿಳಿಯದ ಮಾಯಾಜಾಲ ವಿಷಯದ ಕುರಿತು ಬೆಂಗಳೂರಿನ ಲೇಖಕ ಬಿ.ಶ್ರೀಪಾದ ಭಟ್ ವಿಷಯ ಮಂಡನೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಾನವ ಬಂಧುತ್ವ ವೇದಿಕೆ ನಿಕಟ ಪೂರ್ವ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಭಾಗವಹಿಸುವರು. ಲೇಖಕಿ ಮೈಸೂರಿನ ಡಾ. ಶ್ವೇತಾ ಮಡಪ್ಪಾಡಿ, ಸಾಮಾಜಿಕ ಹೋರಾಟಗಾರ ನೆರವಂಡ ಉಮೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಡಾ. ಹೆಚ್.ಎಂ. ಕಾವೇರಿ ಸಾಮಾಜಿಕ ಹೋರಾಟಗಾರ ಟಿ.ಈ. ಸುರೇಶ್ ಪ್ರತಿಕ್ರಿಯೆ ಮಂಡನೆ ಮಾಡುವರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರ ಅಧ್ಯಕ್ಷತೆ ವಹಿಸುವರೆಂದು ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್. ಜನಾರ್ಧನ್, ರಮಾನಾಥ್ ಬೇಕಲ್, ನೆರವಂಡ ಉಮೇಶ್, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ವೀರೇಂದ್ರ, ಹನೀಫ್ ಸಂಪಾಜೆ ಇದ್ದರು.