*ಗೋಣಿಕೊಪ್ಪ, ಡಿ. ೧೫: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಲ್ಲಹಳ್ಳ ವನ್ಯಜೀವಿ ವಲಯದಲ್ಲಿ ಗಂಡು ಚಿರತೆಯೊಂದು ಮೃತಪಟ್ಟಿದೆ.

೧೦ ವರ್ಷ ಪ್ರಾಯದ ಚಿರತೆಯ ಕಳೇಬರ ಅರಣ್ಯಾಧಿಕಾರಿಗಳು ಗಸ್ತು ತಿರುಗುವ ಸಂದರ್ಭ ಪತ್ತೆಯಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಅವರ ಸಮಕ್ಷಮದಲ್ಲಿ ಪಶು ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಚಿರತೆ ಮೃತಪಡಲು ಚಿರತೆಯು ಹುಲಿಯೊಂದಿಗೆ ಕಾದಾಟ ನಡೆಸಿರುವುದೇ ಕಾರಣವೆಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.

ಬಾಳೆಲೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಭವಿಷ್ಯ ಕುಮಾರ್, ರಾಷ್ಟಿçÃಯ ಹುಲಿ ಸಂರಕ್ಷಿತ ಪ್ರಾಧಿಕಾರ ನಾಮ ನಿರ್ದೇಶಕ ಕೆ.ಎನ್. ಮಾದಪ್ಪ, ಮುಖ್ಯ ವನ್ಯಜೀವಿ ಪರಿಪಾಲಕರ ನಾಮನಿರ್ದೇಶಕ ಡಾ. ಸಿ.ಕೆ. ತಮ್ಮಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಅನುಷ, ಕಲ್ಲಹಳ್ಳ ವನ್ಯಜೀವಿ ವಲಯ ಅರಣ್ಯಾಧಿಕಾರಿ ಮುಹಮ್ಮದ್ ಜೀಷಾನ್, ಇವರುಗಳನ್ನೊಳ ಗೊಂಡAತೆ ಸಮಿತಿಯನ್ನು ರಚಿಸಿ ಮರಣೋತ್ತರ ಪರೀಕ್ಷೆ ನಡೆಸಿ. ಚಿರತೆಯ ಅಂತ್ಯಕ್ರಿಯೆ ನಡೆಸಲಾಗಿದೆ. ಮೃತಪಟ್ಟ ಚಿರತೆಯ ಅಂಗಾAಗಗಳ ಮಾದರಿಯನ್ನು ಮೈಸೂರಿನ ಪಶು ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.