(ಸುದ್ದಿ - ವಿಶ್ಲೇಷಣೆ : ಅನಿಲ್ ಎಚ್.ಟಿ.)

ಮಡಿಕೇರಿ, ಡಿ.೧೫ : ಲೋಕಸಭೆಯ ಕಲಾಪಕ್ಕೆ ಅಡ್ಡಿ ಪಡಿಸಿದ ದುಷ್ಕರ್ಮಿಗಳ ಪ್ರಕರಣ ಚಳಿಗಾಲದ ಅಧಿವೇಶನದಲ್ಲಿ ಆಕ್ರೋಶದ ಪ್ರತಿಭಟನೆಯ ಬಿಸಿಗೆ ಕಾರಣವಾಗಿದ್ದು, ಅಧಿನೇಶನದ ೧೨ ನೇ ದಿನವಾದ ಶುಕ್ರವಾರ ಕೂಡ ಪ್ರತಿಪಕ್ಷಗಳು ಸಂಸತ್ತಿನ ಕಲಾಪ ನಡೆಯಲು ಬಿಡದೇ ಪ್ರತಿಭಟನೆ ಮೂಲಕ ಅಡ್ಡಿಪಡಿಸಿದವು.

ಗುರುವಾರದಂದು ಗದ್ದಲ ಎಬ್ಬಿಸಿದ ೧೪ ಸದಸ್ಯರನ್ನು ಲೋಕಸಭೆಯ ಸಭಾಧ್ಯಕ್ಷರಾದ ಓಂಪ್ರಕಾಶ್ ಬಿರ್ಲಾ ಕಲಾಪ ಮುಕ್ತಾಯಗೊಳ್ಳುವವರೆಗೆ ಅಮಾನತ್ತುಗೊಳಿಸಿದ್ದರು. ಶುಕ್ರವಾರ ಕಲಾಪ ಪ್ರಾರಂಭವಾಗುತ್ತಿರುವAತೆಯೇ ಸಂಸದರ ಅಮಾನತ್ತು ಖಂಡಿಸಿ ಕಾಂಗ್ರೆಸ್ , ಡಿಎಂ.ಕೆ, ಟಿಎಂ.ಸಿ. ಸೇರಿದಂತೆ ಪ್ರತಿಪಕ್ಷಗಳ ಸಂಸದರು ಲೋಕಸಭೆಯ ಮುಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡವು. ಪ್ರತಿಪಕ್ಷಗಳ ಎಲ್ಲಾ ಸದಸ್ಯರನ್ನೂ ಅಮಾನತ್ತುಗೊಳಿಸುವಂತೆ ಪ್ರತಿಭಟನಾತ್ಮಕ ಬೇಡಿಕೆಯ ಧ್ವನಿಯೂ ಕೇಳಿಬಂದಿತ್ತು.

ಕಲಾಪ ನಡೆಯಲು ಬಿಡದ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸಭಾಧ್ಯಕ್ಷರು, ಮಧ್ಯಾಹ್ನಕ್ಕೆ ಕಲಾಪ ಮುಂದೂಡಿದರು. ಮಧ್ಯಾಹ್ನವೂ ಕಲಾಪ ನಡೆಯಲು ಪ್ರತಿಪಕ್ಷಗಳ ಸಂಸದರು ಅವಕಾಶ ನೀಡದ ಹಿನ್ನೆಲೆಯಲ್ಲಿ ಮತ್ತೆ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಸೋಮವಾರದವರೆಗೆ ಮುಂದೂಡಲಾಯಿತು.

ತಾ.೧೩ ರಂದು ಬುಧವಾರ ಸದನಕ್ಕೆ ಯುವಕರು ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ಕೈಗೊಂಡಿರುವ ದೆಹಲಿ ಪೊಲೀಸರು ಮತ್ತು ಸರ್ಕಾರದ ಉನ್ನತ ತನಿಖಾ ಸಂಸ್ಥೆಗಳು ಶನಿವಾರ ಮತ್ತು ಭಾನುವಾರ ಘಟನೆ ನಡೆದ ಸ್ಥಳವಾದ ಲೋಕಸಭೆಯಲ್ಲಿಯೇ ಘಟನೆಯ ಮರುಸೃಷ್ಟಿ ಪ್ರಕ್ರಿಯೆ ಕೈಗೊಳ್ಳಲಿದೆ. ಪ್ರಕರಣದ ಬಗ್ಗೆ ಈವರೆಗೂ ಮೌನ ತಾಳಿದ್ದ ಬಿಜೆಪಿ ಮುಖಂಡರು, ಇಂಥ ಘಟನೆ ದೇಶಕ್ಕೆ ಸಂಬAಧಪಟ್ಟದ್ದಾಗಿದ್ದು, ಯಾರೂ ಕೂಡ ರಾಷ್ಟçದ ರಕ್ಷಣೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಮತ್ತೊಂದೆಡೆ, ಯುವಕರಿಗೆ ಪಾಸ್ ನೀಡಿದ್ದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ದೆಹಲಿ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ನಡೆಸಿದೆ.

ರಾಷ್ಟಿçÃಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಪ್ರತಾಪ್‌ಸಿಂಹ ಅವರು ಕೊಡವ ಸಾಂಪ್ರದಾಯಿಕ ಧಿರಿಸು ಹಾಕಿರುವ ಫೋಟೋವನ್ನು ಪೋಸ್ಟ್ ಮಾಡಿ, ಇನ್ನೊಸೆಂಟ್ (ಮುಗ್ಧ) ಎಂದು ವ್ಯಂಗ್ಯವಾಡಿದೆ. ದೆಹಲಿಯ ಮಹದೇವ ರಸ್ತೆಯಲ್ಲಿರುವ ಪ್ರತಾಪ್ ಸಿಂಹ ಅವರ ನಂ. ೧೮ ನಿವಾಸದಲ್ಲಿ ಮೌನ ಆವರಿಸಿದೆ. ಮಾಧ್ಯಮ ಪ್ರತಿನಿಧಿಗಳು ನಿವಾಸಕ್ಕೆ ತೆರಳಿದರಾದರೂ ಪ್ರತಿಕ್ರಿಯೆ ದೊರಕಲಿಲ್ಲ.

ಅದೇ ರೀತಿ ಘಟನೆಗೆ ಕಾರಣರಾದ ದುಷ್ಕರ್ಮಿ ಯುವಕರಿಗೆ ಪಾಸ್ ವಿತರಿಸಿದ ಪ್ರತಾಪ್ ಸಿಂಹ ಅವರ ಸದಸ್ಯ ಸ್ಥಾನವನ್ನು ಕೂಡ ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸದನದಲ್ಲಿ ಸರ್ಕಾರದ ನಿಲವು ಪ್ರಕಟಿಸುವಂತೆಯೂ ಪ್ರತಿಪಕ್ಷಗಳ ಪ್ರಮುಖ ನಾಯಕರು ಒತ್ತಾಯಿಸಿದರು. ಗುರುವಾರ ಮಧ್ಯರಾತ್ರಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರಕರಣದ ಪ್ರಮುಖ ಆರೋಪಿ ಲಲಿತ್ ಝಾ ಎಂಬಾತನನ್ನು ಶುಕ್ರವಾರ ಪೊಲೀಸರು ತೀವ್ರ ತನಿಖೆಗೊಳಪಡಿಸಿದರು. ಈತನನ್ನೂ ಪಾಟಿಯಾಲ ನ್ಯಾಯಾಲಯ ಇತರ ಐವರು ಆರೋಪಿಗಳಂತೆಯೇ ೭ ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಸದನ ನುಗ್ಗಿ ದಾಂಧಲೆ ಎಬ್ಬಿಸಿದ ಪ್ರಕರಣದ ‘ಮಾಸ್ಟರ್ ಮೈಂಡ್’ ಎಂದು ಶಂಕಿಸಲಾಗಿರುವ ಲಲಿತ್ ಝಾ, ಘಟನೆ ದಿನವಾದ ಬುಧವಾರ ಲೋಕಸಭೆಯ ಹೊರಗಡೆ ಇದ್ದ. ಯಾವಾಗ ನೀಲಂ ಕೌರ್ ಮತ್ತು ಅಮೋಲ್ ಹಳದಿ ವರ್ಣದ ಅನಿಲ ಸಿಡಿಸಿದರೊ ಆ ಸಂದರ್ಭ ಈವರೀರ್ವರು ಇದ್ದಲ್ಲಿಗೆ ಬಂದಿದ್ದ ಲಲಿತ್ ಝಾ, ಆ ಕ್ಷಣದ ಘಟನೆಯನ್ನು ಫೇಸ್‌ಬುಕ್ ಲೈವ್ ಮಾಡಿದ್ದಾನೆ. ನಂತರ ಅವರ ಮೊಬೈಲ್‌ಗಳನ್ನು ಪಡೆದುಕೊಂಡು ಸ್ಥಳದಿಂದ ಮತ್ತೋರ್ವ ಸ್ನೇಹಿತ ಮಹೇಶ್ ಜೊತೆ ಪರಾರಿಯಾದ. ದೆಹಲಿಯಿಂದ ರಾಜಸ್ಥಾನಕ್ಕೆ ತೆರಳಿದ ಲಲಿತ್ ಝಾ ತಾ.೧೪ ರಂದು ಶುಕ್ರವಾರ ಬೆಳಿಗ್ಗೆ ರಾಜಸ್ಥಾನದ ತನ್ನ ಸ್ವಗ್ರಾಮದಲ್ಲಿ ನಾಲ್ವರು ಸಹಚರರ ಮೊಬೈಲ್ ಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆ. ಈ ಕೃತ್ಯದಲ್ಲಿ ಪಾಲ್ಗೊಂಡ ಲಲಿತ್‌ನ ಗೆಳೆಯರಾದ ಮಹೇಶ್ ಮತ್ತು ಕೈಲಾಶ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ಖಚಿತ ಸುಳಿವಿನ ಮೇರೆಗೆ ಲಲಿತ್‌ನನ್ನು ಬಂಧಿಸಿ ತನಿಖೆ ಪ್ರಾರಂಭಿಸಿದ್ದು, ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಅನಿಲ ಸಿಲಿಂಡರ್‌ಗಳನ್ನು ಇರಿಸಿಕೊಂಡಿದ್ದ ಶೂಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ ೫ ಸಿಲಿಂಡರ್‌ಗಳ ಪೈಕಿ ೪ ಸಿಲಿಂಡರ್‌ಗಳನ್ನು ಬಳಕೆ ಮಾಡಲಾಗಿದ್ದು ಬಳಕೆಯಾಗದ ೧ ಸಿಲಿಂಡರ್‌ನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅಂತೆಯೇ ಸದನದ ಹೊರಬದಿ ನೀಲಂ ಕೌರ್ ಎಸೆದಿದ್ದ ಎರಡು ಪಾಂಪ್ಲೆಟ್‌ಗಳಲ್ಲಿ ಒಂದರಲ್ಲಿ ಜೈ ಹಿಂದ್ ಎಂಬ ಘೋಷಣೆ ಮುದ್ರಿಸಲ್ಪಟ್ಟಿದ್ದರೆ ಮತ್ತೊಂದು ಕರಪತ್ರದಲ್ಲಿ ಮಣಿಪುರದಲ್ಲಿ ಮಾನವ ದೌರ್ಜನ್ಯವಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳ ವಾಕ್ಯಗಳು ಇವೆ.

ಪ್ರಾಥಮಿಕ ತನಿಖೆ ಸಂದರ್ಭ ಪೊಲೀಸರಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ದೊರೆತ ಮಾಹಿತಿ ಅನ್ವಯ, ಕೇವಲ ಪ್ರಚಾರಕ್ಕಾಗಿ ಈ ಪ್ರಕರಣದಲ್ಲಿ ಯುವಕರು ಮತ್ತು ಯುವತಿ ಪಾಲ್ಗೊಂಡಿಲ್ಲ. ಬದಲಿಗೆ ಇವರ ಹಿಂದೆ ಮತ್ತಷ್ಟು ಜನರು ಇರುವ ಎಲ್ಲಾ ಸಾಧ್ಯತೆ ಇದೆ. ಈ ಘಟನೆ ಪೂರ್ವಯೋಜಿತ ಭಾರೀ ಷಡ್ಯಂತ್ರವಾಗಿದೆ. ಸಂಸತ್ ಕಲಾಪದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ ಎಂದೇ ಭಾವಿಸಿ ಇವರು ಸದನಕ್ಕೆ ನುಗ್ಗಿರುವ ಸಾಧ್ಯತೆಯಿದೆ.