ನಾಪೋಕ್ಲು ಪಂಚಾಯಿತಿಯಿAದ ಕ್ರಮ
ನಾಪೋಕ್ಲು, ಡಿ. ೧೫: ಗ್ರಾಮ ಪಂಚಾಯಿತಿಗೆ ಒಳಪಟ್ಟ ಹೊಟೇಲ್, ಬೇಕರಿ, ಅಂಗಡಿ, ಕ್ಯಾಂಟೀನ್ಗಳ ಒಣ ಮತ್ತು ದ್ರವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡಬೇಕು. ತಪ್ಪಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ತಿಳಿಸಿದ್ದಾರೆ.
ಪಂಚಾಯಿತಿಯಿAದ ಹಲವಾರು ಬಾರಿ ಈ ನೋಟೀಸ್ ನೀಡಲಾಗಿದ್ದರೂ ಪದೇ ಪದೇ ತ್ಯಾಜಗಳನ್ನು ರಸ್ತೆ ಬದಿಗೆ ಹಾಗೂ ಪಂಚಾಯಿತಿಯ ಮುಂಭಾಗದಲ್ಲಿ ರಾತ್ರಿ ವೇಳೆ ತಂದು ಸುರಿಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ತಕ್ಷಣದಿಂದಲೇ ಒಣ ಮತ್ತು ದ್ರವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಪಂಚಾಯಿತಿಯ ಕಸದ ವಿಲೇವಾರಿ ವಾಹನಕ್ಕೆ ನೀಡುವಂತೆ ಈ ಮೂಲಕ ಅಂತಿಮವಾಗಿ ಪಂಚಾಯಿತಿ ಎಚ್ಚರಿಕೆಯನ್ನು ನೀಡಿದೆ.
ನಿಯಮವನ್ನು ಪಾಲಿಸದೆ ಎಲ್ಲೆಂದರಲ್ಲಿ ಕಸ ಎಸೆಯುವುದು ಕಂಡು ಬಂದರೆ ಯಾವುದೇ ಮುನ್ಸೂಚನೆ ನೀಡದೆ ಪಂಚಾಯಿತಿಯಿAದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹಸಿ ಕಸವನ್ನು ತಮ್ಮ ಮಟ್ಟದಲ್ಲಿಯೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಸ ವಿಲೇವಾರಿ ವಾಹನಕ್ಕೆ ನೀಡುವುದರ ಮೂಲಕ ಸಹಕರಿಸುವಂತೆ ತಿಳಿಸಿದೆ.
ತಕ್ಷಣ ಜಾರಿಗೆ ಬರುವಂತೆ ಮೂಲಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡದಿದ್ದಲ್ಲಿ ಪಂಚಾಯಿತಿಯಿAದ ಕಸವನ್ನು ಸ್ವೀಕರಿಸಲಾಗುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಪಂಚಾಯಿತಿ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಬಟ್ಟೆ ಬ್ಯಾಗ್ಗಳನ್ನು ಉಪಯೋಗಿಸುವುದರ ಮೂಲಕ ಪ್ಲಾಸ್ಟಿಕ್ ನಿಷೇಧಕ್ಕೆ ಪಂಚಾಯಿತಿಯೊAದಿಗೆ ಕೈಜೋಡಿಸಿ ಸಹಕರಿಸಬೇಕು. ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ಪಂಚಾಯಿತಿಯಿAದ ೧ ಸಾವಿರದಿಂದ ೨೫೦೦೦ದವರೆಗೆ ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -ದುಗ್ಗಳ