ಚೆಯ್ಯಂಡಾಣೆ, ಡಿ. ೧೩: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆಯ ಕೊಕೇರಿ ಗ್ರಾಮದಲ್ಲಿ ಕಾಡಾನೆ ಮರುಕಳಿಸಿದೆ.

ಗ್ರಾಮದ ಬೆಳಿಯಂಡ್ರ ಕಾರ್ಯಪ್ಪ, ಕೃಷ್ಣಪ್ಪ, ವಿಟ್ಟು ಉತ್ತಪ್ಪ, ನೆಲ್ಲಮಕ್ಕಡ ವಿವೇಕ್ ಹಾಗೂ ಮತಿತ್ತರರ ತೋಟಕ್ಕೆ ಲಗ್ಗೆ ಇಟ್ಟ ೩ ಕಾಡಾನೆ ಹಿಂಡು ಫÀಸಲು ಭರಿತ ಕಾಫಿ, ಅಡಿಕೆ, ಬಾಳೆ, ಒಳ್ಳೆಮೆಣಸು ಬಳ್ಳಿಗಳನ್ನು ತುಳಿದು ನಾಶಪಡಿಸಿದೆ ಹಾಗೂ ಕಣದಲ್ಲಿ ಕೊಯ್ಲು ಮಾಡಿಟ್ಟಿದ್ದ ಭತ್ತದ ತೆನೆಗಳನ್ನು ತುಳಿದು ನಾಶಪಡಿಸಿದೆ.

ಕೂಡಲೇ ಸಂಬAಧಪಟ್ಟ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಯನ್ನು ಸೆರೆ ಹಿಡಿಯಬೇಕು ಹಾಗೂ ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.