ಮಡಿಕೇರಿ, ಡಿ. ೧೩: ಅಮೇರಿಕಾದಲ್ಲಿ ಅಂತರಜಾತಿ ವಿವಾ ಹವೊಂದರ ಸಂದ ರ್ಭದಲ್ಲಿ ಕೊಡವ ಆಭರಣಗಳಾದ ಪತ್ತಾಕ್, ಕೊಕ್ಕೆತಾತಿ, ದೇವಮಾಲೆಯಂತಹ ಪಾವಿತ್ರö್ಯತೆಯ ಹಿನ್ನೆಲೆಯ ವಸ್ತುಗಳನ್ನು ಪಾದುಕೆಯೊಂದರ ಮೇಲೆ ಇರಿಸಿ ತೆಗೆದಿರುವ ಚಿತ್ರ ಸಾಮಾಜಿಕ ಜಾಲತಾ ಣದಲ್ಲಿ ಹರಿದಾಡುತ್ತಿವೆ. ಪವಿತ್ರವಾದ ಈ ಆಭರಣಕ್ಕೆ ಅವಮಾನ ಮಾಡಲಾ ಗಿದೆ ಎಂಬ ಬಗ್ಗೆ ಇದೀಗ ಭಾರೀ ಆಕ್ಷೇಪ-ಖಂಡನೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಗೊಳ್ಳುತ್ತಿವೆ. ಜನಾಂಗದ ಹಲವರು ಪ್ರಮುಖರು, ಸಂಘ-ಸAಸ್ಥೆಗಳ ಪ್ರಮುಖರು ಈ ವಿಚಾರದ ಬಗ್ಗೆ ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ಶಾಸಕ ಪೊನ್ನಣ್ಣ ಅವರು ಕೂಡ ಖಂಡನೆ ವ್ಯಕ್ತಪಡಿಸಿ ಸಂದೇಶ ನೀಡಿದ್ದಾರೆ. ಇಂತಹ ಹೇಯ ಕೃತ್ಯಗಳು ಇನ್ನು ಮುಂದೆ ಮರುಕಳಿಸಬಾ ರದು. ಭಾವನೆಗ ಳಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡಿರುವವರ ಬಗ್ಗೆ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂಬ ಒತ್ತಾಯಗಳೂ ಕೇಳಿ ಬರುತ್ತಿವೆ.