ಗೋಣಿಕೊಪ್ಪಲು, ಡಿ. ೧೩: ಹಲವು ವರ್ಷಗಳಿಂದ ನೂರಾರು ಎಕರೆಯಲ್ಲಿ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೇರಿ, ಕಳತ್ಮಾಡು ಹಾಗೂ ಹೊಸೂರು ಸುತ್ತಮುತ್ತಲಿನ ರೈತರ ಹಾಗೂ ಬೆಳೆಗಾರರ ಕಾಫಿ ತೋಟ ಸೇರಿದಂತೆ ಭತ್ತದ ಗದ್ದೆಗಳಿಗೆ ನಿರಂತರವಾಗಿ ಕಳೆದ ಹಲವು ದಿನಗಳಿಂದ ಕಾಡಾನೆ ಗಳು ಹಿಂಡಾಗಿ ಲಗ್ಗೆ ಇಡುತ್ತಿರುವು ದರಿಂದ ರೈತರು ಬೆಳೆದ ಭತ್ತದ ಫಸಲು ಬಹುತೇಕ ಹಾನಿಗೊಳಗಾ ಗಿದ್ದು ಈ ಭಾಗದ ಬೆಳೆಗಾರರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊಸೂರು ಗ್ರಾಮ ಪಂಚಾಯಿತಿಯ ಸಭಾಂಗಣ ದಲ್ಲಿ ವೀರಾಜಪೇಟೆ ತಾಲೂಕಿನ ಡಿಎಫ್ಒ ಶರಣಬಸಪ್ಪ ನೇತೃತ್ವದಲ್ಲಿ ಮೂರು ಗ್ರಾಮಗಳ ಕಾಫಿ ಬೆಳೆಗಾ ರರು ಸಭೆ ನಡೆಸಿ ವಿಚಾರ ವಿನಿಮಯ ನಡೆಸಿದರು. ಸಭೆಗೆ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಇತ್ತೀಚೆಗೆ ಕಾಡಾನೆಗಳಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರನ್ನು ಬರಮಾಡಿಕೊಂಡು ರೈತರು ಎದುರಿಸುತ್ತಿರುವ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸಲು ಒಮ್ಮತ್ತದ ನಿರ್ಧಾರ ಕೈಗೊಂಡರು.
ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ಶಾಸಕ ಎ.ಎಸ್. ಪೊನ್ನಣ್ಣನವರು ಆನೆ ಮಾನವ ಸಂಘರ್ಷವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕಾಡಾನೆಗಳ ಸ್ಥಳಾಂತರ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿಗಳ ಹಾಗೂ ಅರಣ್ಯ ಸಚಿವರ ಗಮನದಲ್ಲಿ ಈ ವಿಚಾರ ಇರುವುದರಿಂದ ಸಮಸ್ಯೆಗೆ ಪರಿಹಾರ ಸಿಗುವ ಆಶಾಭಾವನೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಿಂದ ಬೆಳಗಾವಿಯ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕ ಎ.ಎಸ್. ಪೊನ್ನಣ್ಣನವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಸಂಕೇತ್ ಪೂವಯ್ಯ ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸು ವಂತೆ ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕ ಪೊನ್ನಣ್ಣ ಕ್ಷೇತ್ರಕ್ಕೆ ಬರುತ್ತಿ ದ್ದಂತೆಯೇ ಸಮಸ್ಯೆ ಬಗ್ಗೆ ಅಧಿಕಾರಿ ಗಳ ಸಭೆ ನಡೆಸಲು ಕ್ರಮ ಕೈಗೊಳ್ಳು ವುದಾಗಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಗ್ರಾಮದ ಹಿರಿಯರಾದ ಕೊಲ್ಲೀರ ಉಮೇಶ್, ಧರ್ಮಜ, ಗೋಪಿ ಚಿಣ್ಣಪ್ಪ ಹಾಗೂ ಮತ್ತಿತರರು ಗ್ರಾಮದಲ್ಲಿ ೨೦೦ಕ್ಕೂ ಅಧಿಕ ಜಾನುವಾರುಗಳನ್ನು ಗ್ರಾಮ ಸ್ಥರು ಸಾಕುತ್ತಿದ್ದಾರೆ. ಇವುಗಳಿಗೆ ಬೇಕಾದ ಮೇವು ಇದೀಗ ಕಾಡಾನೆಯ ಉಪಟಳದಿಂದ ಭತ್ತದ ಗದ್ದೆಯಲ್ಲಿ ರುವ ಹುಲ್ಲುಗಳು ಇಲ್ಲದಂತಾಗಿವೆ. ಪ್ರತಿನಿತ್ಯ ೫೦೦ಕ್ಕೂ ಅಧಿಕ ಲೀಟರ್ ಹಾಲನ್ನು ಡೈರಿಗೆ ನೀಡುತ್ತಿದ್ದೇವು. ಇದೀಗ ಮೇವಿನ ಕೊರತೆಯಿಂದಾಗಿ ಹಾಲಿನ ಪ್ರಮಾಣ ಕಡಿಮೆಯಾಗಿದೆ. ಭತ್ತದ ಫಸಲು ಹಾಗೂ ತೋಟದಲ್ಲಿನ ಕಾಫಿ ಗಿಡಗಳು, ತೆಂಗು, ಅಡಿಕೆಗಳು ಕಾಡಾನೆ ದಾಳಿಗೆ ಧ್ವಂಸಗೊAಡಿವೆ. ಇದರ ನಷ್ಟ ಪರಿಹಾರವನ್ನು ಕೂಡಲೇ ನೀಡಬೇಕು. ಡಿಜಿಟಲೀಕರಣದಲ್ಲಿ ಸಕಲ ವ್ಯವಸ್ಥೆಗಳಿರುವುದರಿಂದ ನಷ್ಟ ಗೊಂಡ ಸ್ಥಳದಿಂದ ಮಾಹಿತಿ ಸಂಗ್ರಹಿ ಸುತ್ತಿದ್ದಂತೆಯೇ ಪರಿಹಾರ ಹಣವು ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಇಲಾ ಖೆಯು ಹೊಸ ಮಾನದಂಡ ರೂಪಿಸ ಬೇಕು ಎಂದರು. ಮುಂದುವರೆದು ಮಾತನಾಡಿದ ಗ್ರಾಮಸ್ಥರು ಬೆಟ್ಟಗೇರಿ, ಕಳತ್ಮಾಡು ಹಾಗೂ ಹೊಸೂರು ಗ್ರಾಮದ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭತ್ತ ಬೆಳೆಯುವ ರೈತನ ಭತ್ತದ ಗದ್ದೆಗಳಿಗೆ ಶೇ.೧೦೦ರ ರಿಯಾಯಿತಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಲಾರ್ ಬೇಲಿ ಗಳನ್ನು ಅಳವಡಿಸಬೇಕು. ಇದರಿಂದ ರೈತರು ಕಾಡಾನೆಗಳ ಉಪಟಳದಿಂದ ರಕ್ಷಣೆ ಪಡೆಯಬಹುದು. ಈ ನಿಟ್ಟಿನಲ್ಲಿ ಇಲಾಖೆಯು ಕ್ರಮ ಕೈಗೊಳ್ಳಬೇಕು ಅಲ್ಲದೆ ಪ್ರತಿಷ್ಠಿತ ಕಂಪೆನಿಗಳ ಕಾಫಿ ತೋಟಕ್ಕೆ ಸೋಲಾರ್ ಬೇಲಿ ಅಳವಡಿಸಿರುವುದರಿಂದ ಆನೆಗಳ ಸಂಚಾರದ ದಾರಿಗಳು ಮುಚ್ಚಿ ಹೋಗಿವೆ. ಇವುಗಳನ್ನು ತೆರೆಸಬೇಕು. ಇದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ವೀರಾಜಪೇಟೆ ಡಿಎಫ್ಒ ಶರಣಬಸಪ್ಪ ಗ್ರಾಮಸ್ಥರ ಹಲವು ಸಮಸ್ಯೆಗಳಿಗೆ ಉತ್ತರಿಸಿ ಇಲಾಖೆಯು ತಮ್ಮ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿ ಸುತ್ತಿದೆ. ರೈತರಿಗೆ ಸೇರಬೇಕಾದ ಪರಿಹಾರವನ್ನು ನಿಗದಿತ ಸಮಯ ದೊಳಗೆ ವಿತರಿಸಲು ಕ್ರಮ ಜರುಗಿಸ ಲಾಗಿದೆ. ಆನೆ ನಿಯಂತ್ರಣಕ್ಕೆ ಹಲವು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಾಗು ವುದು. ಮುಂದೆ ನಡೆಯುವ ಶಾಸಕರ ಅಧ್ಯಕ್ಷತೆಯ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಆನೆ ಮಾನವ ಸಂಘರ್ಷಕ್ಕೆ ಕಾರ್ಯಪ್ರವೃತ್ತರಾಗಲು ಗ್ರಾಮಸ್ಥರೊಡಗೂಡಿ ಕೆಲಸ ನಿರ್ವಹಿಸೋಣ ಎಂದರು.
ಸಭೆಯಲ್ಲಿ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಚಿಕಾಡು ಮಧು, ಉಪಾಧ್ಯಕ್ಷ ಪಂದ್ಯAಡ ಶಾಂತಿ ಸೋಮಯ್ಯ, ಸದಸ್ಯರಾದ ಕೊಲ್ಲಿರ ಧನು, ಪ್ರಕಾಶ್, ಮುರುವಂಡ ಸುರೇಶ್, ಗ್ರಾಮಸ್ಥರಾದ ಮುರುವಂಡ ಸೋಮಣ್ಣ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮೊಳ್ಳೆರ ಸುಭಾಶ್ ಭೀಮಯ್ಯ ಸ್ವಾಗತಿಸಿ, ವಂದಿಸಿದರು.
-ಹೆಚ್.ಕೆ.ಜಗದೀಶ್