ವೀರಾಜಪೇಟೆ, ಡಿ. ೧೨: ಕೊಡಗು ವೆಲ್ಫೆರ್ ಫೌಂಡೇಶನ್ ವೀರಾಜಪೇಟೆ ವತಿಯಿಂದ ಮುಂದಿನ ಜನವರಿ ತಿಂಗಳ ಮೊದಲ ವಾರದಲ್ಲಿ ಕೊಡಗು ಬಾಸ್ಕೆಟ್‌ಬಾಲ್ ಲೀಗ್ ನಗರದ ಪ್ರಗತಿ ಶಾಲಾ ಮೈದಾನದಲ್ಲಿ ಆಯೋಜನೆ ಗೊಳ್ಳಲಿದೆ.

ಲೀಗ್ ಪಂದ್ಯಾಟದ ಅಂಗವಾಗಿ ವೀರಾಜಪೇಟೆ ನಗರದ ಹೊರ ವಲಯ ಪೆರುಂಬಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿಯ ಹೊಟೇಲ್‌ನ ಸಭಾಂಗಣದಲ್ಲಿ ಬಾಸ್ಕೆಟ್‌ಬಾಲ್ ಆಟಗಾರ ಬಿಡ್ (ಹರಾಜು ಪ್ರಕ್ರಿಯೆ) ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅಂತರ ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಅವರು ಬಾಸ್ಕೆಟ್‌ಬಾಲ್ ಅಂತರರಾಷ್ಟಿçÃಯ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ. ಪ್ರಗತಿ ಹೊಂದುತ್ತಿರುವ ಆಟಗಾರರಿಗೆ ದೇಶಿಯ ಮತ್ತು ಅಂತರರಾಷ್ಟç ಮಟ್ಟದಲ್ಲಿ ವಿಪುಲ ಅವಕಾಶಗಳಿವೆ. ಕೊಡಗು ಜಿಲ್ಲೆಯಲ್ಲಿ ಬಾಸ್ಕೆಟ್‌ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾಗಿರುವ ಆಟಗಾರರು ಹಾಗೂ ಮೂಲ ಜಿಲ್ಲೆಯವರಾಗಿದ್ದು ಪರ ಊರುಗಳಲ್ಲಿ ನೆಲೆಸಿರುವ ಬಾಸ್ಕೆಟ್‌ಬಾಲ್ ಆಟಗಾರ ರನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಆಯೋಜಕರು ನಿಯಮಗಳನ್ನು ಮಾಡಿದ್ದಾರೆ. ಬಾಸ್ಕೆಟ್‌ಬಾಲ್ ಲೀಗ್ ಮೂಲಕ ಆಟಗಾರರನ್ನು ಹೆಕ್ಕಿ ಪ್ರತಿಭೆಗಳನ್ನು ಗುರುತಿಸುವುದಾಗಿದೆ ಎಂದರು.

ಪAದ್ಯಾಟದ ಆಯೋಜಕರು ಮತ್ತು ಬಾಸ್ಕೆಟ್‌ಬಾಲ್ ಕ್ರೀಡಾ ಪಟುವಾದ ಇರ್ಷಾದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಪಂದ್ಯಾಟವನ್ನು ವೀರಾಜಪೇಟೆ ಪ್ರಗತಿ ಶಾಲಾ ನೂತನ ಬಾಸ್ಕೆಟ್‌ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಪಂದ್ಯಾಟ ದಲ್ಲಿ ಒಟ್ಟು ೬೬ ಕ್ರೀಡಾಪಟುಗಳು ಭಾಗವಹಿಸಲಿದ್ದು, ಒಟ್ಟು ಆರು ತಂಡಗಳಾಗಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ಮ್ಯೇಡ್ ಎನ್ಸ್ ಮಡಿಕೇರಿ, ಬ್ಲ್ಯಾಕ್ ಕೋಬ್ರಸ್ ವೀರಾಜಪೇಟೆ, ಎವೇಂಜರ್ಸ್ ವೀರಾಜಪೇಟೆ, ರಾಯಲ್ ರಜಥಾದ್ರಿಸ್ ವೀರಾಜ ಪೇಟೆ, ಕಾವೇರಿಯನ್ಸ್ ಗೋಣಿ ಕೊಪ್ಪಲು, ಟೀಗಲ್ ಹೂಪರ್ಸ್ ಪೊನ್ನಂಪೇಟೆ ತಂಡಗಳು ಭಾಗವಹಿಸಲಿವೆ ಎಂದರು.

ಕಾರ್ಯಕ್ರಮ ನಿರೂಪಕ ಅಸೀಫ್ ಅಮ್ಮತ್ತಿ, ಚಿಮ್ಮಣಮಾಡ ಸೋಮಣ್ಣ, ಮಾದಂಡ ಶುಸ್ಮ ತಿಮ್ಮಯ್ಯ, ನೌಷಾದ್, ಆರು ತಂಡಗಳ ಮಾಲೀಕರು ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.