ಮಡಿಕೇರಿ, ಡಿ. ೧೨: ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಾರ್ಷಿಕೋತ್ಸವ ತಾ. ೧೪ ರಂದು ನಡೆಯಲಿದೆ.
ಸಂಸ್ಥೆಯ ಮೈದಾನದಲ್ಲಿ ಅಂದು ಬೆಳಿಗ್ಗೆ ೧೦.೧೫ ಗಂಟೆಗೆ ಆರಂಭ ವಾಗುವ ವಾರ್ಷಿಕೋತ್ಸವದಲ್ಲಿ ಪಾಂಡಿಚೇರಿ ಸರ್ಕಾರದ ಆರೋಗ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಕಾರ್ಯದರ್ಶಿಯಾಗಿದ್ದ, ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿ ಬಿ.ಆರ್. ಬಾಬು ಪಾಲ್ಗೊಳ್ಳಲಿದ್ದಾರೆ.
ಎನ್ಸಿಸಿ ತಂಡದ ಪಥಸಂಚಲನ, ವಿದ್ಯಾರ್ಥಿಗಳಿಂದ ಪಿರಮಿಡ್ ಪ್ರದರ್ಶನ, ನೃತ್ಯ ವೈವಿಧ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ.