ಮಡಿಕೇರಿ, ಡಿ. ೧೨: ಹಲವಾರು ವರ್ಷಗಳಿಂದ ಕನಸಾಗಿಯೇ ಉಳಿದಿರುವ ಆಧುನಿಕ ಮಾದರಿಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬAಧಿಸಿದAತೆ ಇದೀಗ ಸಿದ್ಧತೆಗಳು ಆರಂಭಗೊAಡಿವೆ. ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿನ ಸರ್ವೆ ನಂ. ೧೬೭/ ೧ಂ ಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಗೆ ಜಿಲ್ಲಾಡಳಿತದ ಮೂಲಕ ೧೧.೭೦ ಎಕರೆ ಜಾಗವನ್ನು ಈಗಾಗಲೇ ಹಸ್ತಾಂತರ ಮಾಡಲಾಗಿದೆ.

ಹಲವಾರು ಅಡೆ - ತಡೆಗಳ ಬಳಿಕ ನ್ಯಾಯಾಲಯದ ನಿರ್ದೇಶನದಂತೆ ಅಗತ್ಯ ದಾಖಲಾತಿಗಳನ್ನು ಜಿಲ್ಲಾಡಳಿತ ಅಧಿಕೃತವಾಗಿ ಕ್ರಿಕೆಟ್ ಸಂಸ್ಥೆಗೆ ಹಸ್ತಾಂತರಿಸಿದೆ. ಆದರೆ ಈ ತನಕ ಮಳೆಯ ಕಾರಣದಿಂದಾಗಿ ಕಾಮಗಾರಿಗೆ ಚಾಲನೆ ನೀಡಲಾಗಿರಲಿಲ್ಲ. ಕೇವಲ ತಡೆಗೋಡೆ ನಿರ್ಮಾಣ ಸೇರಿದಂತೆ ಆರಂಭಿಕ ಹಂತದ ಕೆಲಸಗಳನ್ನು ಮಾತ್ರ ನಿರ್ವಹಿಸಲಾಗಿತ್ತು. ಇದೀಗ ಮುಂದಿನ ೧೫ ದಿವಸಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಯ ಅಧ್ಯಕ್ಷರಾದ ರಘುರಾಮನ್ ಭಟ್, ಕ್ಯೂರೇಟರ್ ಪ್ರಶಾಂತ್ ಅವರುಗಳು ಕೆ.ಎಸ್.ಸಿ.ಎ. ಇಂಜಿನಿಯರ್‌ಗಳ ತಂಡದೊAದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ಸಿದ್ಧತೆ ಯೋಜನೆ ಕುರಿತಾಗಿ ಸಲಹೆ - ಸೂಚನೆಗಳನ್ನು ನೀಡಲಾಯಿತು. ೮೦ ಮೀಟರ್ ಸುತ್ತಳತೆಯಲ್ಲಿ ಸುಸಜ್ಜಿತ ಮೈದಾನ - ಸ್ಟೇಡಿಯಂ ನಿರ್ಮಾಣವಾಗಲಿದ್ದು, ಎಲ್ಲಾ ಅಗತ್ಯ ಸೌಲಭ್ಯಗಳು ಇಲ್ಲಿ ಬರಲಿವೆ.

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಯೋಜನೆ ಸಾಕಷ್ಟು ವರ್ಷಗಳ ಹಿಂದೆಯೇ ರೂಪಿತವಾಗಿತ್ತಾದರೂ ಕಾರಣಾಂತರಗಳಿAದ ಇದು ಭಾರೀ ವಿಳಂಬವಾಗಿತ್ತು. ಇದೀಗ ಮುಂದಿನ ೧೫ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ. ಕೆ.ಎಸ್.ಸಿ.ಎ ಪ್ರಮುಖರ ತಂಡದ ಭೇಟಿ ಸಂದರ್ಭ ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಅವರು ಹಾಜರಿದ್ದು, ಮಾಹಿತಿ ನೀಡಿದರು.