ಗೋಣಿಕೊಪ್ಪ ವರದಿ, ಡಿ. ೧೧: ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದಲ್ಲಿ ತಾ.೧೫ ರಿಂದ ತಾ.೨೦ ರವರೆಗೆ ಸುಬ್ರಹ್ಮಣ್ಯ ಷಷ್ಠಿ ಆಚರಣೆ ನಡೆಯಲಿದೆ.

ತಾ. ೧೫ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ತಾ. ೧೮ ರಂದು ಮುಂಜಾನೆ ೫ ಗಂಟೆಗೆ ಇರ್‌ಬೊಳಕ್, ಪ್ರದಕ್ಷಿಣೆ ಭಕ್ತಾದಿಗಳಿಂದ ಸೇವೆ, ಅನ್ನಸಂತರ್ಪಣೆ, ರಾತ್ರಿ ೭ ಗಂಟೆಗೆ ದೇವರ ನೃತ್ಯ, ಸಾಮೂಹಿಕ ಮಹಾಪೂಜೆ, ಮಹಾ ಮಂಗಳಾರತಿ, ಅನ್ನಸಂತರ್ಪಣೆ, ತಾ. ೧೯ ರಂದು ಬೆಳಿಗ್ಗೆ ೭ ಗಂಟೆಗೆ ಭಕ್ತಾದಿಗಳಿಗೆ ಸೇವೆ, ಮ. ೧ ಗಂಟೆಗೆ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ ೭ ಗಂಟೆಗೆ ದೇವಸ್ಥಾನದ ಕೆರೆಯಲ್ಲಿ ಅವಭೃತ ಸ್ನಾನ, ೮ ಗಂಟೆಗೆ ಪ್ರದಕ್ಷಿಣೆ, ೯ ಗಂಟೆಗೆ ಮಹಾ ಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ.