'ಮಡಿಕೇರಿ, ಡಿ. ೧೨: ದೇವಟ್ ಪರಂಬುವಿನಲ್ಲಿ ಕೊಡವರ ನರಮೇಧ ನಡೆದು ೨೩೮ ವರ್ಷಗಳು ತುಂಬಿದ ಹಿನ್ನೆಲೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹಿರಿಯರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿ ಸಿತು. ಸಮಾಧಿ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅವರು ೧೭೮೫ ಡಿ.೧೨ ರಂದು ಷಡ್ಯಂತ್ರದಿAದ ಸಾವಿರಾರು ಕೊಡವರ ಹತ್ಯೆಯಾಗಿದೆ ಎಂದರು.

ಈ ಸಂದರ್ಭ ಮುದಗೇರಿ ನಾಡಿನ ಪುಲ್ಲೇರ ಸ್ವಾತಿ ಕಾಳಪ್ಪ, ನೆಲ್ಲಿಯಪುದಿಕೇರಿ ನಾಡಿನ ನಂದೇಟಿರ ಕವಿತ, ನೂರುಕ್ಕನಾಡಿನ ಚೋಳಪಂಡ ಜ್ಯೋತಿ ನಾಣಯ್ಯ, ಬೇಂಗ್ ನಾಡಿನ ಅಲ್ಮಂಡ ಜೈ, ಪಟ್ಟಮಾಡ ಕುಶ, ಮಂದಪAಡ ಮನೋಜ್, ಪಟ್ಟಮಾಡ ಅಶೋಕ್, ಮಂದಪAಡ ವೇಣು ಅಯ್ಯಣ್ಣ, ಚೀಯಬೇರ ಸತೀಶ್, ಅಲ್ಮಂಡ ನೆಹರು, ಬಲ್ಲತ್ ನಾಡಿನ ಅಪ್ಪಚ್ಚಿರ ರಮ್ಮಿ ನಾಣಯ್ಯ, ನೂರಂಬಡ ನಾಡಿನ ಕಾಟುಮಣಿಯಂಡ ಉಮೇಶ್, ನೆಲಜಿನಾಡಿನ ಮಣವಟ್ಟೀರ ಜಗ ದೀಶ್, ಅರಕೇರಿ ನಾಡಿನ ಕಾಂಡೇರ ಸುರೇಶ್, ಪಾರ್ವಂ ಗಡ ನವೀನ್, ಎಡೆನಾಳ್ ನಾಡಿನ ಚಂಬAಡ ಜನತ್, ತೊಡನಾಡಿನ ಅಜ್ಜಿಕುಟ್ಟೀರ ಲೋಕೇಶ್, ಅಂಜಿಗೇರಿನಾಡಿನ ಕಿರಿಯಮಾಡ ಶೆರಿನ್, ಅಪ್ಪೆಂಗಡ ಮಾಲೆ, ಬೆಪ್ಪನಾಡಿನ ಪುಟ್ಟಿಚಂಡ ಡಾನ್ ದೇವಯ್ಯ, ಮಡಿಕೇರಿ ನಾಡ್ ನ ಮಣವಟ್ಟೀರ ಚಿಣ್ಣಪ್ಪ, ಮುದಗೇರಿ ನಾಡ್‌ನ ಪುಲ್ಲೇರ ಕಾಳಪ್ಪ, ನೆಲ್ಲಿಯ ಪುದಿಕೇರಿ ನಾಡ್‌ನ ನಂದೇಟಿರ ರವಿ ಸುಬ್ಬಯ್ಯ, ಕಾಣತ್ ಮೂನಾಡು ನಾಡಿನ ಪುದಿಯೊಕ್ಕಡ ಕಾಶಿ, ನೂರೊಕ್ಕನಾಡಿನ ಚೋಳಪಂಡ ನಾಣಯ್ಯ ಮತ್ತಿತರರು ಪಾಲ್ಗೊಂಡು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಶ್ರೀಮಂಗಲ: ಭಾಗಮಂಡಲ ಸಮೀಪ ದೇವಟ್ ಪರಂಬುವಿನಲ್ಲಿ ಟಿಪ್ಪು ಹಾಗೂ ಫ್ರೆಂಚ್ ಸೈನ್ಯದಿಂದ ಸಾಮೂಹಿಕವಾಗಿ ಕೊಡವರನ್ನು ನರಮೇಧ ಮಾಡಿದ ದಿನದ ಸ್ಮರಣೆಯಲ್ಲಿ ಮಡಿದ ಕೊಡವರ ಪೂರ್ವಿಕರಿಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೊಡವ ಸಮಾಜದ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.