ಮಡಿಕೇರಿ, ಡಿ. ೧೧: ಚಿರತೆಯನ್ನು ಹೋಲುವ ಅಪರೂಪದ ವನ್ಯಜೀವಿ ಪೆರ್ಪಣ (ಲೆಪರ್ಡ್ ಕ್ಯಾಟ್) ಅಪಘಾತದಲ್ಲಿ ಸಾವಿಗೀಡಾಗಿದೆ.
ಹಾಕತ್ತೂರು ಸಮೀಪದ ಮುತ್ತಾರಮುಡಿಯಲ್ಲಿ ಘಟನೆ ಸಂಭವಿಸಿದ್ದು, sಸುಮಾರು ೨೫ ಮೀಟರ್ ಉದ್ದದ ಪೆರ್ಪಣ ಅಸುನೀಗಿದೆ. ರಸ್ತೆ ದಾಟುವ ಸಂದರ್ಭ ವಾಹನವೊಂದು ಪ್ರಾಣಿಗೆ ಡಿಕ್ಕಿಪಡಿಸಿ ಹೋಗಿದೆ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತ ಪೆರ್ಪಣವನ್ನು ವಶಕ್ಕೆ ಪಡೆದುಕೊಂಡಿದ್ದು, ತಾ. ೧೨ ರಂದು (ಇಂದು) ವೈದ್ಯರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.