ಪೊನ್ನಂಪೇಟೆ, ಡಿ. ೧೧: ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ಗೋಣಿಕೊಪ್ಪ ಅಮ್ಮ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಪುತ್ತರಿ ನಮ್ಮೆ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು.
ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ತಂಡ ದುಡಿಕೊಟ್ ಪಾಟ್ ಮೂಲಕ ಅತಿಥಿಗಳನ್ನು ಬರಮಾಡಿಕೊಂಡಿತು. ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಬೆಂಗಳೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷರಾದ ಡಾ. ಸರಸ್ವತಿ ಸೋಮೇಶ್, ಹುಣಸೂರು ವಿಭಾಗದ ಡಿಎಫ್ಓ ಪುತ್ತಾಮನೆ ಸೀಮಾ ರಂಜನ್, ವಕೀಲರು ಹಾಗೂ ಮೈಸೂರು ಅಮ್ಮ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚಮ್ಮಣಮಾಡ ಬಿ. ಗಿರೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅತಿಥಿಗಳು ಅಮ್ಮ ಕೊಡವ ಜನಾಂಗದ ಸಂಸ್ಕೃತಿ ಆಚಾರ ವಿಚಾರಗಳ ಉಳಿವಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದರು.
ಅಮ್ಮಕೊಡವ ಸಮಾಜದ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ ವಿಶೇಷ ಸಂಸ್ಕೃತಿ ವಿಶಿಷ್ಟ ಪರಂಪರೆಯನ್ನು ಹೊಂದಿರುವ ಅಮ್ಮ ಕೊಡವ ಜನಾಂಗದ ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ ಯುವ ಜನತೆ ಹಬ್ಬ ಆಚರಣೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಹಿರಿಯರಾದ ಬಾನಂಡ ರಮೇಶ್, ನೆರೆಯಂಡಮ್ಮAಡ ಪ್ರಭು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ ನಮ್ಮ ಸಮಾಜವು ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಹತ್ತಾರು ಜನರ ಶ್ರಮದಿಂದ ಸಮಾಜ ಮುಂದುವರೆಯಲು ಸಾಧ್ಯ. ಅಮ್ಮಕೊಡವ ಸಮಾಜದ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಶಿಫಾರಸ್ಸಿನ ಮೇರೆಗೆ ಸರ್ಕಾರದಿಂದ ೫ ಲಕ್ಷ ರೂಪಾಯಿ ಅನುದಾನ ಸಿಕ್ಕಿರುವ ಬಗ್ಗೆ ಮಾಹಿತಿಯಿತ್ತರು. ಇದೇ ಸಂದರ್ಭ ಸಮಾಜದ ಅಭಿವೃದ್ಧಿಗಾಗಿ ಪುತ್ತಾಮನೆ ಪ್ರಸಾದ್ ಅವರು ೧ ಲಕ್ಷ ರೂಪಾಯಿ ಹಣವನ್ನು ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ಅಮ್ಮಕೊಡವ ತಂಡದ ಪುತ್ತಾಮನೆ ವಿದ್ಯಾ ಜಗದೀಶ್ ಮತ್ತು ನಾಳಿಯಮ್ಮಂಡ ವೀಣಾ ಅವರ ಹಾಡುಗಾರಿಕೆ ನಡೆಯಿತು.
ಬಲ್ಯಂಡ ದೀಪ್ತಿ, ಆಂಡಮಾಡ ಪವನ್, ಅಚ್ಚಿಯಂಡ ರಿಯಾ ಮತ್ತು ದಿಯಾ, ಪುತ್ತಾಮನೆ ಪ್ರೀತಿ ಮತ್ತು ಭವ್ಯ, ಬಾಚಮಾಡ ದಿವ್ಯ ಮತ್ತು ಶೈನಿ, ಹೆಮ್ಮಚ್ಚಿಮನೆ ಲಹರಿ, ಬಲ್ಯಂಡ ತವನ್ ಇವರುಗಳಿಂದ ಕಾರ್ಯಕ್ರಮ ನಡೆಯಿತು.
ಕರ್ತಂಗಡ ವಿಶ್ವನಾಥ್, ನಾಳಿಯಮ್ಮಂಡ ಪ್ರೇಮ, ಅಮ್ಮತೀರ ಧನ್ಯ ಸುನೀಲ್, ನೆರೆಯನಮ್ಮಂಡ ಗೀತಾ, ಬಲ್ಯಂಡ ನಿಶಾಂತ್, ಆಂಡಮಾಡ ಜಶಿಕ ಪವನ್, ಹೆಮ್ಮಚ್ಚಿಮನೆ ಲತಾ, ಬಲ್ಯಂಡ ಪ್ರತೀಕ್ಷ, ಅಚ್ಚಿಯಂಡ ದೃತಿ ಇವರುಗಳಿಂದ ಗಾಯನ ನಡೆಯಿತು.
ವಿಜೇತರು : ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಅಮ್ಮತೀರ ಡೀನಾ ಪ್ರಥಮ, ಪುತ್ತಾಮನೆ ಪೂಜಾ ದ್ವಿತೀಯ, ಆಂಡಮಾಡ ಚೈತ್ರ ತೃತೀಯ ಬಹುಮಾನ ಪಡೆದುಕೊಂಡರು.
ಪುರುಷರಿಗಾಗಿ ಏರ್ಪಡಿಸಲಾಗಿದ್ದ ಪ್ಲಾಸ್ಟಿಕ್ ಚೆಂಡಿಗೆ ಏರ್ ಗನ್ನಿಂದ ಶೂಟ್ ಮಾಡುವ ಸ್ಪರ್ಧೆಯಲ್ಲಿ ಅಮ್ಮತೀರ ಪ್ರಸಾದ್ ಪ್ರಥಮ, ಪುತ್ತಾಮನೆ ಅನಿಲ್ ದ್ವಿತೀಯ, ಅಮ್ಮತೀರ ಜೀವನ್ ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಜಂಟಿ ಕಾರ್ಯದರ್ಶಿ ಅಮ್ಮತೀರ ಸುರೇಶ್, ಖಜಾಂಚಿ ಅಮ್ಮತೀರ ಗಣೇಶ್, ನಿರ್ದೇಶಕರಾದ ನೆರೆಯಂಡಮ್ಮAಡ ಉಮಾ ಪ್ರಭು, ಬಾನಂಡ ಅಶೋಕ್, ನೆರೆಯಂಡಮ್ಮAಡ ಜನಾರ್ಧನ ಹಾಗೂ ಗುಂಭೀರ ವಿನಾಯಕ್, ಸಮಾಜದ ಪ್ರಮುಖರು ಇದ್ದರು. ಸಮಾಜದ ನಿರ್ದೇಶಕಿ ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಉಪಾಧ್ಯಕ್ಷ ಪಾಡಿಯಮಂಡ ಮುರುಳಿ ಸ್ವಾಗತಿಸಿ, ಹೆಮ್ಮಚ್ಚಿಮನೆ ಕಾವ್ಯ ಅಶ್ವತ್ ನಿರೂಪಿಸಿದರು. ನೆರಯಂಡಮ್ಮAಡ ಸುಬ್ರಮಣಿ ವಂದಿಸಿದರು. -ಚನ್ನನಾಯಕ