ಮಡಿಕೇರಿ, ಡಿ. ೧೨: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯಿಂದ ನಗರದ ಜಿಲ್ಲಾ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪಿಂಚಣಿ ಸೇರಿದಂತೆ ಸವಲತ್ತು ಒದಗಿಸಬೇಕು, ಸೇವಾ ಹಿರಿತನದ ಆಧಾರದ ಮೇಲೆ ಜಿಡಿಎಸ್ ನೌಕರರಿಗೆ ವೇತನ ಹೆಚ್ಚಿಸಬೇಕು, ಅವೈಜ್ಞಾನಿಕ ಗುರಿ ನೀಡಿ ಮೇಳ ನಡೆಸುತ್ತಿರುವುದನ್ನು ನಿಲ್ಲಿಸಬೇಕು, ಗುಂಪು ವಿಮೆ ರೂ. ೫ ಲಕ್ಷಕ್ಕೆ ಹೆಚ್ಚಿಸಬೇಕು, ಜಿಡಿಎಸ್ ಗ್ರಾö್ಯಜ್ಯುಟಿ ಹಣವನ್ನು ರೂ. ೫ ಲಕ್ಷಕ್ಕೆ ಹೆಚ್ಚಿಸ ಬೇಕು, ೧೦೮ ದಿನಗಳ ರಜೆ ಉಳಿಸಿ ಕೊಳ್ಳಲು ಅವಕಾಶ ನೀಡಬೇಕು, ಜಿಡಿಎಸ್ ನೌಕರರಿಗೆ ಮತ್ತು ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂಬ ಬೇಡಿಕೆ ಯನ್ನು ಪ್ರತಿಭಟನಾನಿರತರು ಮುಂದಿಟ್ಟರು. ಈ ಸಂದರ್ಭ ಸಮಿತಿ ಅಧ್ಯಕ್ಷ ಪಿ.ಎಸ್. ಕುರಿಯನ್, ಉಪಾಧ್ಯಕ್ಷ ಎ.ಯು. ಪೂಣಚ್ಚ, ಕಾರ್ಯದರ್ಶಿ ಬಿ.ಎಂ. ಮಂಜು ನಾಥ್, ಖಜಾಂಜಿ ಬಿ.ಪಿ. ಅಚ್ಚಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.