ವೀರಾಜಪೇಟೆ, ಡಿ. ೧೨: ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ದೀಪಾರಾಧನೆ ಹಾಗೂ ಮಹಾಪೂಜೆ ಸೇವೆಗಳು ಮೊದಲ ದಿವಸ ನಡೆಯಿತು. ಎರಡನೇ ದಿನ ಗಣಪತಿ ಹೋಮ, ಧ್ವಜಾರೋಹಣ, ಮಹಾಪೂಜೆ ನಡೆದು, ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಯಿತು. ಸಂಜೆ ದೀಪಾರಾಧನೆ ಹಾಗೂ ಎಡಮಕ್ಕಿ ಸಾರ್ವಜನಿಕ ಮೈದಾನದಿಂದ ತಾಲಪ್ಪೊಲಿ ಮೆರವಣಿಗೆ ನಡೆಯಿತು. ಹೆಚ್ಚಿನ ಭಕ್ತಾದಿಗಳು ಈ ಮೆರವಣಿಗೆಯಲ್ಲಿ ನೆರೆದಿದ್ದರು. ರಾತ್ರಿ ಮಾನಂದವಾಡಿಯ ಶ್ರೀ ಭಗವತಿ ಚಂಡೆ ವಾದ್ಯಂರಿAದ ತಾಯಂಭಗA ಸೇವೆ ಜರುಗಿತು. ಮಹಾಪೂಜೆ ಅನ್ನದಾನ ಕಾರ್ಯಕ್ರಮ ನಡೆದವು. ಮಾತ್ರವಲ್ಲದೆ ಸ್ಥಳೀಯ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು. ಮಹೇಶ್, ಮಹಿ ಕೂರ್ಗ್ ಇವರಿಂದ ಸಿಡಿಮದ್ದಿನ ಪ್ರದರ್ಶನ ನಡೆಯಿತು.
ವಾರ್ಷಿಕ ಮಹೋತ್ಸವದಲ್ಲಿ ಕೊಡಗು ಜಿಲ್ಲೆ, ಕೇರಳ, ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದ್ದರು. ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಮುಖ್ಯ ತಂತ್ರಿಗಳಾದ ಬ್ರಹ್ಮಶ್ರೀ ಮುಳ್ಳಪಲ್ಲಿ ಕೃಷ್ಣನ್ ನಂಬೂದಿರಿ, ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ವೇಣುಗೋಪಾಲ್ ಭಟ್ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಸಹಸ್ರಾರು ಭಕ್ತಾದಿಗಳು ಉಪಸ್ಥಿತರಿದ್ದರು.