ಕಣಿವೆ, ಡಿ. ೧೨: ಸರ್ಕಾರ ನೀಡುವ ಉಚಿತ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಭತ್ತ ಬೆಳೆಯುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಈ ಬಾರಿ ಭತ್ತದ ಫಸಲಿಗೆ ಮಾರುಕಟ್ಟೆಯಲ್ಲಿ ದರ ದುಪ್ಪಟ್ಟಾಗಿದೆ.

ಕಳೆದ ವರ್ಷ ಕ್ವಿಂಟಾಲ್ ಒಂದರ ರಾಜಮುಡಿ ಭತ್ತದ ಚೀಲಕ್ಕೆ ಈ ಬಾರಿ ರೂ. ೪,೫೦೦ ಆಗಿದೆ. ೧೯೦೦ರ ಆಸುಪಾಸಿನಲ್ಲಿದ್ದ ಸಣ್ಣ ಮಧು ಭತ್ತಕ್ಕೆ ಈ ಬಾರಿ ರೂ. ೩,೨೦೦ ಆಗಿದೆ.

ಕಳೆದ ವರ್ಷ ರೂ. ೧,೭೦೦ ಇದ್ದ ಬಾಂಗ್ಲಾ ರೈಸ್ ಎಂಬ ದಪ್ಪ ಅಕ್ಕಿಯ ಭತ್ತ ಈ ಬಾರಿ ರೂ. ೨,೫೦೦ ಆಗಿದೆ. ಅತಿರಾ ಎಂಬ ಕುಚಲಕ್ಕಿಯ ಭತ್ತವೂ ಕೂಡ ೧,೭೦೦ ರಿಂದ ೨,೫೦೦ ರೂ.ಗೆ ಏರಿಕೆಯಾಗಿದೆ. ಇನ್ನು ರಾಜಮುಡಿ, ರಾಜಭೋಗ ಮೊದಲಾದ ಭತ್ತದ ಫಸಲಿಗೂ ದರ ಏರಿಕೆಯಾಗಿದೆ.

ಭತ್ತ ಬೆಳೆಯಲು ನಿರಾಸಕ್ತಿ : ಗದ್ದೆಗಳಲ್ಲಿ ಭತ್ತದ ಫಸಲು ಕೈಗೊಳ್ಳಲು ದುಬಾರಿ ವೆಚ್ಚ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಾಡಿನ ಬಹಳಷ್ಟು ಕೃಷಿಕರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಅಂದರೆ ಹೇಗಿದ್ದರೂ ಸರ್ಕಾರ ಬಿಪಿಎಲ್ ಪಡಿತರ ಚೀಟಿಗಳಿಗೆ ಉಚಿತವಾದ ಅಕ್ಕಿಯನ್ನು ನೀಡುವ ಕಾರಣ ಭತ್ತದ ಬೆಳೆಯತ್ತ ಚಿತ್ತ ಹರಿಸುತ್ತಿಲ್ಲ.

ಈ ಬಾರಿ ಮಳೆಯೂ ಕಡಿಮೆ : ಈ ಬಾರಿ ವಾಡಿಕೆಯಂತೆ ಮಳೆ ಸುರಿಯದಿದ್ದರೂ ಕೂಡ ಭತ್ತದ ಕೃಷಿ ಕೈಗೊಂಡ ಕೃಷಿಕರಿಗೆ ಕಣಿವೆ, ಡಿ. ೧೨: ಸರ್ಕಾರ ನೀಡುವ ಉಚಿತ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಭತ್ತ ಬೆಳೆಯುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಈ ಬಾರಿ ಭತ್ತದ ಫಸಲಿಗೆ ಮಾರುಕಟ್ಟೆಯಲ್ಲಿ ದರ ದುಪ್ಪಟ್ಟಾಗಿದೆ.

ಕಳೆದ ವರ್ಷ ಕ್ವಿಂಟಾಲ್ ಒಂದರ ರಾಜಮುಡಿ ಭತ್ತದ ಚೀಲಕ್ಕೆ ಈ ಬಾರಿ ರೂ. ೪,೫೦೦ ಆಗಿದೆ. ೧೯೦೦ರ ಆಸುಪಾಸಿನಲ್ಲಿದ್ದ ಸಣ್ಣ ಮಧು ಭತ್ತಕ್ಕೆ ಈ ಬಾರಿ ರೂ. ೩,೨೦೦ ಆಗಿದೆ.

ಕಳೆದ ವರ್ಷ ರೂ. ೧,೭೦೦ ಇದ್ದ ಬಾಂಗ್ಲಾ ರೈಸ್ ಎಂಬ ದಪ್ಪ ಅಕ್ಕಿಯ ಭತ್ತ ಈ ಬಾರಿ ರೂ. ೨,೫೦೦ ಆಗಿದೆ. ಅತಿರಾ ಎಂಬ ಕುಚಲಕ್ಕಿಯ ಭತ್ತವೂ ಕೂಡ ೧,೭೦೦ ರಿಂದ ೨,೫೦೦ ರೂ.ಗೆ ಏರಿಕೆಯಾಗಿದೆ. ಇನ್ನು ರಾಜಮುಡಿ, ರಾಜಭೋಗ ಮೊದಲಾದ ಭತ್ತದ ಫಸಲಿಗೂ ದರ ಏರಿಕೆಯಾಗಿದೆ.

ಭತ್ತ ಬೆಳೆಯಲು ನಿರಾಸಕ್ತಿ : ಗದ್ದೆಗಳಲ್ಲಿ ಭತ್ತದ ಫಸಲು ಕೈಗೊಳ್ಳಲು ದುಬಾರಿ ವೆಚ್ಚ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಾಡಿನ ಬಹಳಷ್ಟು ಕೃಷಿಕರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಅಂದರೆ ಹೇಗಿದ್ದರೂ ಸರ್ಕಾರ ಬಿಪಿಎಲ್ ಪಡಿತರ ಚೀಟಿಗಳಿಗೆ ಉಚಿತವಾದ ಅಕ್ಕಿಯನ್ನು ನೀಡುವ ಕಾರಣ ಭತ್ತದ ಬೆಳೆಯತ್ತ ಚಿತ್ತ ಹರಿಸುತ್ತಿಲ್ಲ.

ಈ ಬಾರಿ ಮಳೆಯೂ ಕಡಿಮೆ : ಈ ಬಾರಿ ವಾಡಿಕೆಯಂತೆ ಮಳೆ ಸುರಿಯದಿದ್ದರೂ ಕೂಡ ಭತ್ತದ ಕೃಷಿ ಕೈಗೊಂಡ ಕೃಷಿಕರಿಗೆ ರೂ.೧೦೦ ದಾಟಿದರೂ ಅಚ್ಚರಿಪಡಬೇಕಿಲ್ಲ.

ಬಳಿಕ ತಿನ್ನುವ ಅನ್ನಕ್ಕೆ ಹಾಹಾಕಾರ ಪಡುವಂತಹ ಸ್ಥಿತಿ ನಿರ್ಮಾಣವಾಗುವುದನ್ನು ನಿರ್ನಾಮ ಮಾಡಲು ಈಗಿನಿಂದಲೇ ಭತ್ತದ ಬೆಳೆಯತ್ತ ಯುವ ಕೃಷಿಕರು ಚಿತ್ತ ಹರಿಸಬೇಕಿದೆ.

ಲಾಭದಾಯಕವಾಗುತ್ತಿರುವ ಭತ್ತದ ಕೃಷಿ : ಕಳೆದ ಕೆಲವು ವರ್ಷಗಳಿಂದ ಭತ್ತದ ಕೃಷಿ ಕೃಷಿಕರಿಗೆ ಲಾಭದಾಯಕವಾಗುತ್ತಿದೆ ಎನ್ನಲಾಗಿದ್ದು, ಭತ್ತದ ಹುಲ್ಲಿಗೆ ಶುಂಠಿ ಬಿತ್ತನೆ ಅವಧಿಯಲ್ಲಿ ಭಾರೀ ಬೇಡಿಕೆ ಇರುವ ಕಾರಣ ಒಂದು ಎಕರೆ ಭೂಮಿಯ ಭತ್ತದ ಹುಲ್ಲಿಗೆ ಕನಿಷ್ಟ ೨೦ ಸಾವಿರ ಸಿಗುವ ಬಗ್ಗೆ ಕೃಷಿಕರು ಹೇಳುತ್ತಿದ್ದಾರೆ.

ಇನ್ನು ಬೆಳೆವ ಭತ್ತ, ಮನೆ ಮಂದಿಗೆಲ್ಲಾ ವರ್ಷವಿಡೀ ಊಟ ಮಾಡಲೂ ಬರುತ್ತದೆ. ಈಗ ಇರುವ ಒಂದಷ್ಟು ಹೆಚ್ಚಿರುವ ದರದಿಂದಾಗಿ ಲಾಭವೂ ಸಿಗಲಿದೆ ಎಂದು ಕಣಿವೆ ಗ್ರಾಮದ ಕೃಷಿಕ ವಿಶುಕುಮಾರ್ ಹಾಗೂ ಧನಂಜಯ ಹೇಳುತ್ತಾರೆ.

- ಕೆ.ಎಸ್. ಮೂರ್ತಿ