ಕೂಡಿಗೆ, ಡಿ. ೧೨: ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಕಟಾವು ಮಾಡಿದ ಬೆಳೆ ಮತ್ತು ರೈತರ ಹೈಬ್ರೀಡ್ ತಳಿ ಉದ್ದದ ಭತ್ತದ ಬೆಳೆಯು ಕಟಾವು ಮಾಡುವುದಗಿಂತ ಮೊದಲೇ ಭಾರೀ ಮಳೆ ಗಾಳಿಯಿಂದಾಗಿ ಹಾರಂಗಿ ಅಚ್ಚುಕಟ್ಟು ಪ್ರದೇಶ ಕೊಡಗಿನ ಗಡಿಭಾಗಗಳಾದ ಶಿರಂಗಾಲ, ಹೆಬ್ಬಾಲೆ , ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೫ ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗುವ ಈ ಭಾಗದ ರೈತರು, ಹಸುಗಳಿಗೆ ಭತ್ತದ ಹುಲ್ಲಿನ ಅವಶ್ಯಕತೆ ಬಹು ಮುಖ್ಯ ವಾಗಿರುವ ಹಿನ್ನೆಲೆಯಲ್ಲಿ ಹೈಬ್ರೀಡ್ ಭತ್ತದ ತಳಿಗಳಾದ ರಾಜಮುಡಿ, ರಾಜಭೋಗ, ಭತ್ತದ ಬೆಳೆಯನ್ನು ಈ ಬಾರಿ ಬೆಳೆದಿದ್ದಾರೆ. ಭತ್ತದ ಕಾಳು ಕಟ್ಟುವಿಕೆಯ ಜೊತೆಗೆ ಹೆಚ್ಚಾಗಿ ಹುಲ್ಲು ಸಿಗುವುದರಿಂದಾಗಿ ಈ ಗ್ರಾಮೀಣ ಪ್ರದೇಶದ ರೈತರು ಈ ತಳಿಯನ್ನು ಬೆಳೆದಿರುತ್ತಾರೆ. ಆದರೆ ಗಾಳಿ ಮಳೆಯಿಂದಾಗಿ ಉದ್ದದ ಬೆಳೆಯು ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ನೆಲಕಚ್ಚಿರುವ ದೃಶ್ಯ ರೈತರ ಜಮೀನಿನಲ್ಲಿ ಕಂಡುಬರುತ್ತಿದೆ.

ನೀರು ನಿಂತಿರುವುದರಿAದಾಗಿ ಭತ್ತ ಮೊಳಕೆ ಬರುವಂತಹ ಪ್ರಸಂಗ ಎದುರಾಗುತ್ತದೆ, ಅಲ್ಲದೆ ಕಟಾವು ಮಾಡಿದ ಬೆಳೆಯು ಗದ್ದೆಗಳಲ್ಲಿ ಇರುವುದರಿಂದಾಗಿ ಅದನ್ನು ತೆಗೆಯಲು ಸಹ ಆಗುತ್ತಿಲ್ಲ, ನೀರು ನಿಂತಿರುವುದರಿAದ ತೇವಾಂಶಕ್ಕೆ ಭತ್ತ ಉದುರುವಿಕೆ ಆಗುತ್ತಿದೆ, ಅಲ್ಲದೆ ಸ್ಥಳದಲ್ಲೇ ಮೊಳಕೆ ಬರುವ ಹಂತಕ್ಕೆ ಬಂದಿದೆ, ಕೈಗೆ ಬಂದು ತುತ್ತು ಬಾಯಿಗೆ ಬಾರದಾಗಿದೆ ಎಂದು ಗ್ರಾಮದ ಪ್ರಗತಿಪರ ರೈತರಾದ ಶಿವಪ್ಪ, ಮಂಜುನಾಥ, ಮಹೇಶ್, ತೊರೆನೂರು ಗ್ರಾಮ ಕಿರಣ್, ಶಿವರುದ್ರಪ್ಪ, ಮಂಜಪ್ಪ, ಆರನೇ ಹೊಸಕೋಟೆ ಮೋಹನ ಸೇರಿದಂತೆ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.