ನವದೆಹಲಿ, ಡಿ. ೧೧: ಜಮ್ಮು ಮತ್ತು ಕಾಶ್ಮೀರಕ್ಕೆ ೩೭೦ನೇ ವಿಧಿಯಿಂದ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ಆಗಸ್ಟ್ ೫, ೨೦೧೯ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠವು ಸೋಮವಾರ ತೀರ್ಪು ಪ್ರಕಟಿಸಿತು. ಅವರು ೩೭೦ ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ ‘ದುರುದ್ದೇಶಪೂರಿತ' ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ೩೭೦ನೇ ವಿಧಿಯ ನಿಬಂಧನೆಗಳನ್ನು ಕೇಂದ್ರವು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ೨೩ ಅರ್ಜಿಗಳ ಮೇಲೆ ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ತನ್ನ ಮಹತ್ವದ ತೀರ್ಪನ್ನು ಇಂದು ಪ್ರಕಟಿಸಿತು.

ರಾಷ್ಟçಪತಿ ಆಳ್ವಿಕೆ ಸಮಯದಲ್ಲಿ ಕೇಂದ್ರದಿAದ ಯಾವುದೇ ಬದಲಾಯಿಸಲಾಗದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನೂ ಈ ಸಂದರ್ಭದಲ್ಲಿ ಸಿಜೆಐ ತಿರಸ್ಕರಿಸಿದರು. ‘ರಾಷ್ಟçಪತಿ ಆಳ್ವಿಕೆ ಸಂದರ್ಭದಲ್ಲಿ ರಾಜ್ಯದ ಪರವಾಗಿ ಕೇಂದ್ರವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ' ಎಂದು ಸಿಜೆಐ ಚಂದ್ರಚೂಡ್ ತಮ್ಮ ತೀರ್ಪನ್ನು ಓದುವಾಗ ಹೇಳಿದರು. ೩೭೦ನೇ ವಿಧಿಯು ತಾತ್ಕಾಲಿಕ ನಿಬಂಧನೆ ಯಾಗಿದೆ ಎಂದು ಬಣ್ಣಿಸಿದರು.

ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯ ವಿಸರ್ಜನೆಯ ನಂತರವೂ ಆರ್ಟಿಕಲ್ ೩೭೦ ಅಸ್ತಿತ್ವದಲ್ಲಿಲ್ಲ ಎಂದು ಅಧಿಸೂಚನೆಯನ್ನು ಹೊರಡಿಸಲು ಆರ್ಟಿಕಲ್ ೩೭೦ (೩) ರ ಅಡಿಯಲ್ಲಿ ರಾಷ್ಟçಪತಿಗಳ ಅಧಿಕಾರವು ಅಸ್ತಿತ್ವದಲ್ಲಿದೆ". ಸಂವಿಧಾನ ಸಭೆಯ ಶಿಫಾರಸು ರಾಷ್ಟçಪತಿಗಳ ಮೇಲೆ ಬದ್ಧವಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯು ತಾತ್ಕಾಲಿಕ ಸಂಸ್ಥೆಯಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯವನ್ನಾಗಿ ಆದಷ್ಟು ಬೇಗ ಮರುಸ್ಥಾಪನೆ ಮಾಡಬೇಕೆಂದು ಸೂಚಿಸಿದರು. ಜಮ್ಮು-ಕಾಶ್ಮೀರ ರಾಜ್ಯವು ಸಾರ್ವಭೌಮತ್ವದ ಯಾವುದೇ ಅಂಶವನ್ನು ಉಳಿಸಿಕೊಂಡಿಲ್ಲ. ಇದು ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. ೩೭೦ ನೇ ವಿಧಿ ಅಸಮ್ಮಿತ ಸಂಯುಕ್ತ ವ್ಯವಸ್ಥೆಯ ಲಕ್ಷಣವಾಗಿದೆ ಮತ್ತು ಸಾರ್ವಭೌಮತ್ವವಲ್ಲ ಎಂದರು.

ಆದಷ್ಟು ಬೇಗ ಚುನಾವಣೆ ನಡೆಸುವಂತೆ ಭಾರತದ ಚುನಾವಣಾ ಆಯೋಗಕ್ಕೆ ಇದೇ ಸಂದರ್ಭದಲ್ಲಿ ಸಿಜೆಐ ಆದೇಶಿಸಿದರು. ಸೆಪ್ಟೆಂಬರ್ ೩೦ ರೊಳಗೆ ಜಮ್ಮು-ಕಾಶ್ಮೀರ ಅಸೆಂಬ್ಲಿಗೆ ಚುನಾವಣೆಗಳನ್ನು ನಡೆಸಲು ಭಾರತದ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ರಾಜ್ಯತ್ವದ ಮರುಸ್ಥಾಪನೆಯು ಸಾಧ್ಯವಾದಷ್ಟು ಬೇಗ ನಡೆಯಬೇಕು ಎಂದರು.