ಸೋಮವಾರಪೇಟೆ, ಡಿ.೧೧: ಸಮೀಪದ ಅಡಿನಾಡೂರು ಗ್ರಾಮದ ರಸ್ತೆಯಲ್ಲಿ ಮಿತಿ ಮೀರಿದ ಭಾರದೊಂದಿಗೆ ಕಲ್ಲು ಗಣಿಗಾರಿಕೆ ಲಾರಿಗಳು ಸಂಚರಿ ಸುತ್ತಿರುವುದರಿಂದ, ಇತರ ವಾಹನಗಳ ಸಂಚಾರ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಾಡೂರು ಗ್ರಾಮದ ಮೂಲಕ ಹೆಬ್ಬಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿರುವುದರಿAದ ಅಲ್ಲಲ್ಲಿ ಗುಂಡಿ ಬಿದ್ದಿದೆ. ಹೆಚ್ಚಿನ ಸ್ಥಳಗಳಲ್ಲಿ ರಸ್ತೆ ಡಾಂಬರ್ ಕಿತ್ತು ಬರುತ್ತಿದೆ. ಇದೇ ರೀತಿಯಲ್ಲಿ ಒಂದೆರಡು ವಾರಗಳು ವಾಹನಗಳು ಸಂಚರಿಸಿದಲ್ಲಿ ರಸ್ತೆ ಸಂಪೂರ್ಣ ಹಾಳಾಗಲಿದ್ದು, ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಸಗೋಡು ಗ್ರಾಮದಿಂದ ಕಣಿವೆಗೆ ಸಂಪರ್ಕಿಸುವ ಮಾರ್ಗದ ಕಾಮಗಾರಿ ಮಾಡುತ್ತಿರುವುದರಿಂದ, ಆ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ, ಇಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಈ ಹಿಂದಿನಿAದಲೂ ಗಣಿಗಾರಿಕೆ ಲಾರಿಗಳು ಸಂಚರಿಸುತ್ತಿರುವುದರಿAದ ಸೋಮವಾರಪೇಟೆ ಮತ್ತು ಮಡಿಕೇರಿ ಲೋಕೋಪ ಯೋಗಿ ಇಲಾಖೆಗೆ ರಸ್ತೆ ಸರಿಪಡಿಸಲು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮದ ಎಸ್.ಈ. ಅಣ್ಣಯ್ಯ ದೂರಿದ್ದಾರೆ.

ಒಂದೆರಡು ದಿನಗಳಲ್ಲಿ ಗ್ರಾಮ ಪಂಚಾಯಿತಿ ಜನಸಂಪರ್ಕ ಸಭೆ ಇರುವುದರಿಂದ ಭಾರಿ ಗುಂಡಿಗಳನ್ನು ಗಣಿಗಾರಿಕೆಯವರೇ ಜಲ್ಲಿಪುಡಿ ತಂದು ಗುಂಡಿ ಮುಚ್ಚುತ್ತಿದ್ದಾರೆ. ೧೦ ಚಕ್ರಗಳ ಟಿಪ್ಪರ್ ಇಲ್ಲಿನ ಸಂಚಾರಕ್ಕೆ ನಿಷೇಧವಿದ್ದರೂ, ಎಗ್ಗಿಲ್ಲದೆ ಸಾಗುತ್ತಿವೆ. ರಸ್ತೆ ಮಾಡಿದ ಗುತ್ತಿಗೆದಾರರಿಗೆ ೫ ವರ್ಷಗಳ ನಿರ್ವಹಣೆ ಮಾಡಬೇಕಿದ್ದರೂ, ನಿರ್ವಹಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಾಲೆಯ ಬಳಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆಗೆ ಉಬ್ಬು ನಿರ್ಮಿಸಿರುವುದರಿಂದ ವಾಹನಗಳ ಹಾಗೂ ಜನರ ಸಂಚಾರಕ್ಕೆ ತೊಡಕಾಗಿದೆ. ಈ ಬಗ್ಗೆ ಗಮನ ಹರಿಸಿ ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಈ ರಸ್ತೆಯನ್ನು ದುರಸ್ತಿಗೊಳಿಸಲು ಸಂಬAಧಿಸಿದ ಇಲಾಖೆಗೆ ಸೂಚನೆ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.