ಚೆಟ್ಟಳ್ಳಿ, ಡಿ. ೧೦: ಅತೀಸೂಕ್ಷö್ಮತೆಯ ಹಾಗೂ ಏಕಾಗ್ರತೆಯಲ್ಲಿ ಕಲ್ಲಿನ ಕೆತ್ತನೆಯ ಮೂಲಕ ಕಾವೇರಿ ಮಾತೆಗೆ ಜೀವತುಂಬುವ ಕಾರ್ಯ ಕೊಡಗಿನ ಚೆಟ್ಟಳ್ಳಿ ಸಮೀಪದ ಕಂಡಕರೆಯ ಯುವ ಕಲೆಗಾರ ಅನೀಶ್ನ ಕೈಚಳಕದಲ್ಲಿ ಮೂಡುತ್ತಿದೆ.
ವಿವಿಧ ಕಲೆಗಳಂತೆ ಕೆತ್ತನೆಯ ಕಲೆಯಲ್ಲೂ ವಿಶೇಷತೆ ಇದೆ. ಕೊಡಗಿನಲ್ಲಿ ಮರದ ಕೆತ್ತನೆಯ ಕಲೆಗಾರರು ಬೆರಳೆಣಿಕೆಯಲ್ಲಿದ್ದರೂ ಕಲ್ಲಿನ ಕೆತ್ತನೆಗಾರರು ತೀರಾ ಅಪರೂಪ. ಮರದ ಹಾಗೂ ಕಲ್ಲಿನ ನಾಜೂಕು ಕೆತ್ತನೆಯ ಮೂಲಕ ಜೀವಕಳೆ ತುಂಬುವ ಕಲೆಯನ್ನು ಕರಗತಮಾಡಿಕೊಂಡಿರುವ ಅನೀಶ್, ಮರದ ವಿವಿಧ ಕೆತ್ತನೆಗಳ ಜೊತೆ ಕಲ್ಲಿನ ಕೆತ್ತನೆಯನ್ನು ಮಾಡುತ್ತಿದ್ದಾರೆ. ಕಲ್ಲಿನಲ್ಲಿ ಭಗವತಿ, ಭದ್ರಕಾಳಿ, ಚಾಮುಂಡಿ, ನಾಗ, ಶಿವಲಿಂಗ. ಶನೀಶ್ವರ, ನಂದಿ, ಗಣಪತಿ, ಕಲ್ಲಿನ ಆನೆಯ ಚೆಟ್ಟಳ್ಳಿ, ಡಿ. ೧೦: ಅತೀಸೂಕ್ಷö್ಮತೆಯ ಹಾಗೂ ಏಕಾಗ್ರತೆಯಲ್ಲಿ ಕಲ್ಲಿನ ಕೆತ್ತನೆಯ ಮೂಲಕ ಕಾವೇರಿ ಮಾತೆಗೆ ಜೀವತುಂಬುವ ಕಾರ್ಯ ಕೊಡಗಿನ ಚೆಟ್ಟಳ್ಳಿ ಸಮೀಪದ ಕಂಡಕರೆಯ ಯುವ ಕಲೆಗಾರ ಅನೀಶ್ನ ಕೈಚಳಕದಲ್ಲಿ ಮೂಡುತ್ತಿದೆ.
ವಿವಿಧ ಕಲೆಗಳಂತೆ ಕೆತ್ತನೆಯ ಕಲೆಯಲ್ಲೂ ವಿಶೇಷತೆ ಇದೆ. ಕೊಡಗಿನಲ್ಲಿ ಮರದ ಕೆತ್ತನೆಯ ಕಲೆಗಾರರು ಬೆರಳೆಣಿಕೆಯಲ್ಲಿದ್ದರೂ ಕಲ್ಲಿನ ಕೆತ್ತನೆಗಾರರು ತೀರಾ ಅಪರೂಪ. ಮರದ ಹಾಗೂ ಕಲ್ಲಿನ ನಾಜೂಕು ಕೆತ್ತನೆಯ ಮೂಲಕ ಜೀವಕಳೆ ತುಂಬುವ ಕಲೆಯನ್ನು ಕರಗತಮಾಡಿಕೊಂಡಿರುವ ಅನೀಶ್, ಮರದ ವಿವಿಧ ಕೆತ್ತನೆಗಳ ಜೊತೆ ಕಲ್ಲಿನ ಕೆತ್ತನೆಯನ್ನು ಮಾಡುತ್ತಿದ್ದಾರೆ. ಕಲ್ಲಿನಲ್ಲಿ ಭಗವತಿ, ಭದ್ರಕಾಳಿ, ಚಾಮುಂಡಿ, ನಾಗ, ಶಿವಲಿಂಗ. ಶನೀಶ್ವರ, ನಂದಿ, ಗಣಪತಿ, ಕಲ್ಲಿನ ಆನೆಯ ಜೊತೆಗೆ ಗುರುಕಾರೋಣನ ರೂಪದ ಕೆತ್ತನೆಯನ್ನು ಮಾಡಿದ್ದಾರೆ.
ಕೊಡಗಿನ ಹಲವೆಡೆ ಕಾವೇರಿ ಮಾತೆಯ ಪ್ರತಿಮೆ ಕಂಡು ಬಂದರೂ ಕೆಲವೊಂದು ಸಿಮೆಂಟ್ ಮಿಶ್ರಣದೊಂದಿಗೆ ಮಾಡಿದರೆ ಮತ್ತೆ ಕೆಲವೆಡೆ ಬೇರೆಡೆಗಳಿಂದ ಮಾಡಿಸಿ ತಂದು ಪ್ರತಿಷ್ಠಾಪಿಸಲಾಗಿದೆ. ಕೊಡಗಿನಲ್ಲಿರುವ ಕೆತ್ತನೆಯ ಕಲೆಗಾರ ಅನೀಶ್ರ ಕಲ್ಲಿನ ಕೆತ್ತನೆಗೆ ಬಲು ಬೇಡಿಕೆ ಇದ್ದು, ಇವರ ಕೆತ್ತನೆಯ ದೇವರ ಮೂರ್ತಿಗಳು ವಿವಿಧ ಪೂಜಾ ಕೈಂಕರ್ಯಗಳ ಮೂಲಕ ದೇವಾಲಯಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿವೆ. ಇದೀಗ ಇವರ ಕೈಚಳಕದಲ್ಲಿ ಕಾವೇರಿ ಮಾತೆಯ ರೂಪ ಗಮನಸೆಳೆಯಲಿದೆ.
- ಪುತ್ತರಿರ ಕರುಣ್ ಕಾಳಯ್ಯ