ಮಾಲ್ದಾರೆ ವ್ಯಾಪ್ತಿಯಲ್ಲಿ ಅನಧಿಕೃತ ಲೇಔಟ್‌ಗಳ ನಿರ್ಮಾಣ

ಮಡಿಕೇರಿ, ಡಿ. ೯: ಮಾಲ್ದಾರೆ ವ್ಯಾಪ್ತಿಯಲ್ಲಿ ಅನಧಿಕೃತ ಲೇಔಟ್‌ಗಳ ನಿರ್ಮಾಣವಾಗುತ್ತಿದೆ ಎಂದು ಪಂಚಾಯ್ತಿ ಆಡಳಿತ ಮಂಡಳಿ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಎಂ.ಇ. ಹನೀಫ್, ಮಾಲ್ದಾರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ಭೂ ಪರಿವರ್ತನೆಗಳಿಲ್ಲದೆ ಅನಧಿಕೃತ ಲೇಔಟ್‌ಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಇಂತಹ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ನಿರ್ಮಿಸಲು ಮುಂದಾಗುವವರಿಗೆ ಪಂಚಾಯ್ತಿಯಿAದ ಮೂಲ ಸೌಲಭ್ಯ ಒದಗಿಸಬೇಕಾದ ಸಂಕಷ್ಟ ಎದುರಾಗಿದೆ ಎಂದರು.

ಲೇಔಟ್‌ಗಳನ್ನು ನಿರ್ಮಿಸುವವರು ಸಂಬAಧಪಟ್ಟ ಜಾಗದ ‘ಭೂ ಪರಿವರ್ತನೆ’ ಮಾಡಿ, ಲೇಔಟ್‌ಗಳಿಗೆ ಸಂಬAಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಪ್ರತಿ ಲೇಔಟ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಆದರೆ ಇದ್ಯಾವುದನ್ನೂ ಮಾಡದೆ ಖರೀದಿಸಿದ ಕೃಷಿ ಭೂಮಿಯಲ್ಲಿ ಸೆಂಟ್ಸ್ ಲೆಕ್ಕಾಚಾರದಲ್ಲಿ ಅನಧಿಕೃತವಾಗಿ ನಿವೇಶನಗಳನ್ನು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ಅನಧಿಕೃತವಾದ ಇಂತಹ ಲೇಔಟ್‌ಗಳ ನಿರ್ಮಾಣವಾದಲ್ಲಿ, ಅಲ್ಲಿನ ಮನೆಗಳಿಗೆ ಮೂಲ ಸೌಲಭ್ಯ ಒದಗಿಸಲು ಮಾಲ್ದಾರೆ ಗ್ರಾಪಂಗೆ ಅಗತ್ಯ ಆರ್ಥಿಕ ಮೂಲಗಳು ಲೇಔಟ್‌ಗಳನ್ನು ನಿರ್ಮಿಸುವವರು ಸಂಬAಧಪಟ್ಟ ಜಾಗದ ‘ಭೂ ಪರಿವರ್ತನೆ’ ಮಾಡಿ, ಲೇಔಟ್‌ಗಳಿಗೆ ಸಂಬAಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಪ್ರತಿ ಲೇಔಟ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಆದರೆ ಇದ್ಯಾವುದನ್ನೂ ಮಾಡದೆ ಖರೀದಿಸಿದ ಕೃಷಿ ಭೂಮಿಯಲ್ಲಿ ಸೆಂಟ್ಸ್ ಲೆಕ್ಕಾಚಾರದಲ್ಲಿ ಅನಧಿಕೃತವಾಗಿ ನಿವೇಶನಗಳನ್ನು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ಅನಧಿಕೃತವಾದ ಇಂತಹ ಲೇಔಟ್‌ಗಳ ನಿರ್ಮಾಣವಾದಲ್ಲಿ, ಅಲ್ಲಿನ ಮನೆಗಳಿಗೆ ಮೂಲ ಸೌಲಭ್ಯ ಒದಗಿಸಲು ಮಾಲ್ದಾರೆ ಗ್ರಾಪಂಗೆ ಅಗತ್ಯ ಆರ್ಥಿಕ ಮೂಲಗಳು ನಿರ್ಮಾಣ ಮುಗಿಯಬೇಕು ಎನ್ನುವಷ್ಟರಲ್ಲೇ ಜಾಗದ ಸಮೀಪದ ವ್ಯಕ್ತಿಯೊಬ್ಬರು ಜಾಗಕ್ಕೆ ಸಂಬAಧಿಸಿದAತೆ ಪಂಚಾಯ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಕಾಮಗಾರಿ ಸ್ಥಗಿತವಾಗಿದೆ. ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಒದಗಿಸಿರುವ ಜಾಗಕ್ಕೆ ಸಂಬAಧಿಸಿದAತೆ ಆರ್‌ಟಿಸಿಯನ್ನು ಹಿಂದೆ ಪಂಚಾಯ್ತಿಗೆ ನೀಡಲಾಗಿದೆ. ಹೀಗಿದ್ದರೂ ಸಮಸ್ಯೆ ಉದ್ಭವಿಸಿದ್ದು, ಇದನ್ನು ಸಂಬAಧಿಸಿದ ಇಲಾಖೆ ಇತ್ಯರ್ಥಪಡಿಸಿಕೊಡಬೇಕು. ಇಲ್ಲವೆ ಪರ್ಯಾಯ ಜಾಗ ಒದಗಿಸಬೇಕೆಂದು ಒತ್ತಾಯಿಸಿದರು.

ಉಪಾಧ್ಯಕ್ಷ ಜಿ.ವಿ. ಕುಂಞಣ್ಣ ಮಾತನಾಡಿ, ೨೦೧೭ರಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಒಂದು ಏಕರೆ ಜಾಗವನ್ನು ಸ್ಮಶಾನಕ್ಕೆಂದು ನೀಡಲಾಗಿತ್ತು ಆದರೆ ಇದುವರೆಗೂ ಆ ಜಾಗದ ಹದ್ದು ಬಸ್ತನ್ನು ಕಂದಾಯ ಇಲಾಖೆ ಗುರುತಿಸಿಕೊಟ್ಟಿಲ್ಲ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾಲ್ದಾರೆ ಗ್ರಾಪಂ ಅಧ್ಯಕ್ಷೆ ಮಾಲತಿ ಸಿ.ಎನ್., ಸದಸ್ಯರುಗಳಾದ ಎಂ. ಮೊಹಮ್ಮದಾಲಿ ಮತ್ತು ಪಿ.ವೈ. ಇಸ್ಮಾಯಿಲ್ ಉಪಸ್ಥಿತರಿದ್ದರು.