ಮಡಿಕೇರಿ, ಡಿ. ೧೦: ಭತ್ತದ ಬೆಳೆಯ ಕುರಿತಾಗಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಕೃಷಿ ಇಲಾಖೆ, ಮಡಿಕೇರಿ ಸಹಯೋಗದಲ್ಲಿ ಮದೆನಾಡು ಗ್ರಾಮದ ರೈತರಿಗೆ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಸಲಾಯಿತು. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಕೆ.ಟಿ. ಗುರುಮೂರ್ತಿ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಭತ್ತದ ತಳಿಗಳಾದ Iಇಖಿ೨೦೭೯೭ ಮತ್ತು ತುಂಗಾದ ಮಡಿಕೇರಿ, ಡಿ. ೧೦: ಭತ್ತದ ಬೆಳೆಯ ಕುರಿತಾಗಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಕೃಷಿ ಇಲಾಖೆ, ಮಡಿಕೇರಿ ಸಹಯೋಗದಲ್ಲಿ ಮದೆನಾಡು ಗ್ರಾಮದ ರೈತರಿಗೆ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಸಲಾಯಿತು. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಕೆ.ಟಿ. ಗುರುಮೂರ್ತಿ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಭತ್ತದ ತಳಿಗಳಾದ Iಇಖಿ೨೦೭೯೭ ಮತ್ತು ತುಂಗಾದ ಅನುಕೂಲಕರ ಅಂಶಗಳ ಬಗ್ಗೆ ಹಾಗೂ ಕೃಷಿ ನಿರ್ವಹಣೆ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಕೃಷಿ ಅಧಿಕಾರಿ ಡಾ. ಸ್ವರ್ಣ ರೈತರಿಗೆ ಲಭ್ಯವಿರುವ ಕೃಷಿ ಇಲಾಖೆಯಲ್ಲಿನ ವಿವಿಧ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು. ಕೃಷಿಕ ಸಿ.ಬಿ. ಭೋಜಪ್ಪ ಈ ಸಂದರ್ಭದಲ್ಲಿ ಕೃಷಿಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊAಡರು. ಈ ಕ್ಷೇತ್ರೋತ್ಸವದಲ್ಲಿ ೩೦ಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕ್ಷೇತ್ರೋತ್ಸವ ವನ್ನು ಯಶಸ್ವಿ ಗೊಳಿಸಿದರು.

ಡಾ. ವರದರಾಜ್ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.