ಮಡಿಕೇರಿ, ಡಿ. ೧೦: ದೇವರಪುರದಲ್ಲಿ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ರೂ. ೫೦ ಲಕ್ಷ ದೋಚಿದ ಪ್ರಕರಣಕ್ಕೆ ಸಂಬAಧಿಸಿದAತೆ ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಬಿರುಸುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ೩ ಡಿವೈಎಸ್ಪಿ, ೭ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ಈಗಾಗಲೇ ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಐಜಿಪಿ ಕೂಡ ಪರಿಶೀಲಿಸಿ ಕೆಲವೊಂದು ಸೂಚನೆ ನೀಡಿದ್ದಾರೆ. ರೂ. ೫೦ ಲಕ್ಷ ವಹಿವಾಟು, ೭೫೦ ಗ್ರಾಂ ಚಿನ್ನದ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ಈ ಹಿನ್ನೆಲೆ ಆದಾಯ ತೆರಿಗೆ ಹಾಗೂ ಜಿಎಸ್ಟಿ ಇಲಾಖೆಯ ಸಹಾಯವನ್ನು ಪಡೆಯಲಾಗುತ್ತದೆ ಎಂದರು.
ಚಿನ್ನ ಹಾಗೂ ಹಣದ ಬಗ್ಗೆ ಸಮರ್ಪಕ ದಾಖಲಾತಿ ನೀಡದಿದ್ದಲ್ಲಿ ದೂರುದಾರ ಶಂಜ್ಜಾದ್ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಲಾಗುವುದು. ಇಷ್ಟು ದೊಡ್ಡ ಮೊತ್ತವನ್ನು ಕೊಂಡೊಯ್ಯುವುದರ ಹಿಂದೆ ಅನಧಿಕೃತ ಕೆಲಸದ ಅನುಮಾನವೂ ಇದೆ. ಈ ಬಗ್ಗೆಯೂ ತನಿಖೆ ಆಗಲಿದೆ. ಚಿನ್ನವನ್ನು ಮೈಸೂರಿಗೆ ಮಾರಾಟ ಮಾಡಲು ಸಲಹೆ ನೀಡಿದ ಸತೀಶ್, ಜೊತೆಗಿದ್ದ ಅಫ್ನು ಹಾಗೂ ಆಭರಣ ಖರೀದಿಸಿ ಹಣ ನೀಡಿದ ವ್ಯಾಪಾರಿಯ ವಿಚಾರಣೆ ನಡೆಯಲಿದ್ದು, ಕೇರಳಕ್ಕೂ ಒಂದು ತಂಡ ತೆರಳಿದೆ. ಕೃತ್ಯವೆಸಗಿದ ದರೋಡೆಕೋರರನ್ನು ಪತ್ತೆಹಚ್ಚಲಾಗುವುದು. ಪೂರಕ ಸಾಕ್ಷಾö್ಯಧಾರಗಳನ್ನು ಕಲೆಹಾಕಲಾಗುತ್ತಿದೆ ಎಂದರು.