ಪೊನ್ನಂಪೇಟೆ, ಡಿ. ೧೦: ವರ್ಷಂಪ್ರತಿ ನಡೆಸಲಾಗುತ್ತಿರುವ ವೀರಾಜಪೇಟೆ ಸಮೀಪದ ಗುಂಡಿಕೆರೆ ಮಖಾಂ ಉರೂಸ್ ಕಾರ್ಯಕ್ರಮವನ್ನು ಮುಂದಿನ ಮೇ ತಿಂಗಳ ೫ರಿಂದ ೭ರವರೆಗೆ ನಡೆಯಲಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ನಡೆಯುವ ಗುಂಡಿಕೆರೆ ಉರೂಸ್ ಅನ್ನು ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಗುಂಡಿಕೆರೆ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.