ಶ್ರೀಮಂಗಲ, ಡಿ. ೧೦: ಪೊನ್ನಂಪೇಟೆ ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಗುಂಪುಗುAಪಾಗಿ ಮುಖ್ಯ ರಸ್ತೆಯಲ್ಲಿ ಪರಸ್ಪರ ಕಚ್ಚಾಡುತ್ತಾ ಓಡಾಡುತ್ತಿದ್ದು, ಶಾಲಾ ಮಕ್ಕಳು-ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಎಲ್ಲೆಂದರಲ್ಲಿ ಬೀದಿ ನಾಯಿಗಳು ಗುಂಪಾಗಿ ಸಂಚರಿಸುತ್ತಿದ್ದು, ಶಾಲಾ ಮಕ್ಕಳು, ಸಾರ್ವಜನಿಕರಿಗೆ ಕಚ್ಚುವ ಆತಂಕ ಉಂಟಾಗಿದೆ. ಬೀದಿನಾಯಿಗಳಿಗೆ ವಾರಿಸುದಾರರು ಇಲ್ಲದಿರುವುದರಿಂದ ರೇಬಿಸ್ ನಿರೋಧಕ ಚುಚ್ಚು ಮದ್ದು ಆಗಿರುವ ಸಾಧ್ಯತೆ ಇಲ್ಲ.

ಬೀದಿನಾಯಿಗಳು ಪರಸ್ಪರ ಆಕ್ರಮಣಕಾರಿಯಾಗಿ ಜನರ ನಡುವೆ, ಬಸ್ ನಿಲ್ದಾಣ, ವ್ಯಾಪಾರ ಮಳಿಗೆ, ಆಟೋ ನಿಲ್ದಾಣಗಳಲ್ಲಿ ಸಂಚರಿಸುತ್ತಿದ್ದು, ಕಚ್ಚಾಡುವ ವೇಳೆ ಸಾರ್ವಜನಿಕರು-ಶಾಲಾ ಮಕ್ಕಳ ಮೇಲೆ ಬೀಳುವ ಅಪಾಯದ ಆತಂಕ ವ್ಯಕ್ತವಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಈ ಮೂಲಕ ಸಾರ್ವಜನಿಕರಿಗೆ ಉಂಟಾಗುವ ಅಪಾಯ ತಪ್ಪಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

-ಹರೀಶ್ ಮಾದಪ್ಪ