ಪಾಲಿಬೆಟ್ಟ, ಡಿ. ೧೦: ಕೂರ್ಗ್ ವೆಲ್ನೆಸ್ ಫೌಂಡೇಶನ್ ಹಾಗೂ ಬಾಲಿವುಡ್ ನಟ ಮಿಲಿಂಡ್ ಸೋಮನ್ ಅವರ ಸಹಯೋಗದಲ್ಲಿ ೭ನೇ ಆವೃತ್ತಿಯ ಬರಿಗಾಲಿನ ಮ್ಯಾರಥಾನ್ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ನಡೆಯಿತು.
ಮ್ಯಾರಥಾನ್ನಲ್ಲಿ ಯುಎಸ್ಎ, ನೆದರ್ಲ್ಯಾಂಡ್, ಐರ್ಲೆಂಡ್, ಸಿಂಗಾಪುರ್, ಮಲೇಷ್ಯಾ ರಾಷ್ಟçಗಳು ಹಾಗೂ ಕೇರಳ, ತಮಿಳುನಾಡು, ದೆಹಲಿ, ಮುಂಬೈ, ಕೋಲ್ಕತಾ ರಾಜ್ಯಗಳು ಹಾಗೂ ಜಿಲ್ಲೆಯಿಂದ ಸೇರಿ ೨೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಾಡು ಪ್ರಾಣಿಗಳ ಭಯದ ನಡುವೆಯೂ ಅರಣ್ಯ ಇಲಾಖೆ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಿಬ್ಬಂದಿಗಳ ಸಹಕಾರ, ರಕ್ಷಣೆಯೊಂದಿಗೆ ಪಾಲಿಬೆಟ್ಟ, ಹೊಸಳ್ಳಿ, ಅಬ್ಬೂರು, ಚೆನ್ನಂಗಿ, ಚನ್ನಯ್ಯನಕೋಟೆ ಸುತ್ತಮುತ್ತಲ ಗ್ರಾಮಗಳ ರಸ್ತೆಗಳಲ್ಲಿ ಬರಿಗಾಲಿನ ಓಟದಲ್ಲಿ ಪಾಲ್ಗೊಂಡು ಸ್ಪರ್ಧಾಳುಗಳು ಗುರಿ ಮುಟ್ಟಿದರು.
ಟಾಟಾ ಸಂಸ್ಥೆಯ ಆಟದ ಮೈದಾನದಲ್ಲಿ ಖ್ಯಾತ ನಟ, ನಿರ್ಮಾಪಕ ಮಿಲಿಂಡ್ ಸೋಮನ್ ಬರಿಗಾಲಿನ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿ, ಭಾರತದ ಏಕೈಕ ಬರಿಗಾಲಿನ ಮ್ಯಾರಥನ್ಗೆ ವ್ಯಾಪಕ ಸ್ಪಂದನ ವ್ಯಕ್ತವಾಗುತ್ತಿದ್ದು ದೇಶದ ನಾನಾ ಭಾಗಗಳ ನೂರಾರು ಮಂದಿ ಪಾಲ್ಗೊಳ್ಳುವ ಮೂಲಕ ಪರಿಸರ, ಆರೋಗ್ಯ ಕಾಳಜಿಯ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಆರೋಗ್ಯವAತ ಸಮಾಜ ನಿರ್ಮಾಣ ಮಾಡಲು ಮ್ಯಾರಥಾನ್ ಸಹಕಾರಿಯಾಗಿದ್ದು ನಡಿಗೆ, ವ್ಯಾಯಾಮದ ಮೂಲಕ ಆರೋಗ್ಯ ವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು. ಪ್ರಕೃತಿ ಸೌಂದರ್ಯ ದಿಂದ ಕೂಡಿರುವ ಕೊಡಗು ಜಿಲ್ಲೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಜಿಲ್ಲೆಯ ಪರಿಸರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೂರ್ಗ್ ವೆಲ್ನೆಸ್ ಫೌಂಡೇ ಶನ್ ಸ್ಥಾಪಕಿ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಮಾತನಾಡಿ, ವಿಶ್ವದ ಏಕೈಕ ಬರಿಗಾಲಿನ ಮ್ಯಾರಥಾನ್ ಇದಾಗಿದ್ದು ಆರೋಗ್ಯ ಹಾಗೂ ಪರಿಸರ ಕಾಳಜಿಯನ್ನು ಮುಂದಿಟ್ಟುಕೊAಡು ೨೦೧೪ ರಲ್ಲಿ ಸ್ಥಾಪಿಸಿದ ಕೂರ್ಗ್ ವೆಲ್ನೆಸ್ ಫೌಂಡೇಶನ್ ವನ್ಯಜೀವಿ ಪರಿಸರ ಸಂರಕ್ಷಣೆ ಆರೋಗ್ಯ ಕಾಳಜಿಯೊಂದಿಗೆ ಸಂಕಷ್ಟದಲ್ಲಿರು ವವರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದೆ. ದೇಶದ ನಾನಾ ಭಾಗಗಳಿಂದ ಸಾವಿರಾರು ಮಂದಿ ಮ್ಯಾರಥಾನಿನಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ಕಾಳಜಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಉದ್ಯಮಿ ಮುನೀರ್ ಮಾತ ನಾಡಿ, ಸುಮಾರು ೪ ವರ್ಷಗಳಿಂದ ನಾನು ಬರಿಗಾಲು ಮ್ಯಾರಥಾನ್ನಲ್ಲಿ ಭಾಗವಹಿಸುತ್ತಿದ್ದು ಸಂಘಟಕರು ಉತ್ತಮ ರೀತಿಯಲ್ಲಿ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ. ಪರಿಸರ ರಕ್ಷಣೆಗೆ ಯಾವುದೇ ರೀತಿಯ ಪ್ಲಾಸ್ಟಿಕ್ ಬಳಸದೆ ತೆಂಗಿನಕಾಯಿಯ ಚಿಪ್ಪಿನಲ್ಲಿ ಬೆಲ್ಲದ ಕಾಫಿ ಹಾಗೂ ನೀರನ್ನು ನೀಡುತ್ತಿದ್ದಾರೆ ಎಂದರು.
ಸ್ಪರ್ಧೆಯ ವಿಜೇತರು
೪೨ ಕಿ.ಮೀ. ಬರಿಗಾಲು ಮ್ಯಾರ ಥಾನ್ ಸ್ಪರ್ಧೆಯ ಪುರುಷರ ವಿಭಾಗ ದಲ್ಲಿ ಪ್ರಥಮ ಬಹುಮಾನವನ್ನು ವೀರಾಜಪೇಟೆಯ ಗೌತಮ್ ಶೆಟ್ಟಿ ಪಡೆದು ಮೂರನೇ ಬಾರಿ ಚಾಂಪಿ ಯನ್ ಪಟ್ಟ ಉಳಿಸಿಕೊಂಡಿತು. ದ್ವಿತೀಯ ಬಹುಮಾನ ಬೆಂಗಳೂರಿನ ಬೊಬ್ಬಯ್, ತೃತೀಯ ಬಹುಮಾನ ಮೈಸೂರಿನ ಧನು ಪ್ರಕಾಶ್ ಪಡೆದರು. ಮಹಿಳೆಯರ ವಿಭಾಗದಲ್ಲಿ ಪಾಲಿಬೆಟ್ಟ ಟಾಟಾ ಸಂಸ್ಥೆಯ ನಿಶಾ ಪ್ರಥಮ, ಯುಎಸ್ಎಯಿಂದ ಆಗಮಿಸಿದ್ದ ಬುಟ್ಟಿಯಂಡ ಜಾಜಿ ದ್ವಿತೀಯ ಬಹುಮಾನ ಪಡೆದರು.
೨೧ ಕಿಲೋಮೀಟರ್ ಪುರುಷರ ವಿಭಾಗದಲ್ಲಿ ಪ್ರಥಮ ನಿತಿನ್, ದ್ವಿತೀಯ ವಿನಯ್ ಕುಮಾರ್, ತೃತೀಯ ಜಗದೀಶ್ ಪಡೆದು ಕೊಂಡರು. ೨೧ ಕಿಲೋ ಮೀಟರ್ ಮಹಿಳಾ ವಿಭಾಗ ದಲ್ಲಿ ಪ್ರಥಮ ವಿಜಯ, ದ್ವಿತೀಯ ಪಲ್ಲವಿ, ತೃತಿಯ ಬಹುಮಾನವನ್ನು ದಿವ್ಯ ತಮ್ಮದಾಗಿ ಸಿಕೊಂಡರು. ೧೦ ಕಿ.ಮೀ ಪುರುಷರ ಓಟದಲ್ಲಿ ಪ್ರಥಮ ಜಗದೀಶ್, ದ್ವಿತೀಯ ಗಣೇಶ್, ತೃತೀಯ ವಿಷ್ಣು ಹಾಗೂ ೧೦ ಕಿ.ಮೀ ಮಹಿಳೆ ಯರ ವಿಭಾಗದಲ್ಲಿ ಪ್ರಥಮ ಅನುಪಮ ರಾವ್, ದ್ವಿತೀಯ ಮೀರಾ, ಕುಂಕುA ನಾಣಯ್ಯ ತೃತೀಯ ಸ್ಥಾನ ಪಡೆದರು.
ಐದು ಕಿಲೋಮೀಟರ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಸ್ಟೇಜ್ಮಾನ್ ಪ್ರಥಮ, ಮೆರ್ಲಿನ್ ದ್ವಿತೀಯ, ಶಾಜಿ ತೃತೀಯ ಹಾಗೂ ಐದು ಕಿಲೋ ಮೀಟರ್ ಮಹಿಳಾ ವಿಭಾಗದಲ್ಲಿ ಚೋಂದಮ್ಮ ಪ್ರಥಮ, ಶಿವಾನಿ ದ್ವಿತೀಯ, ಪ್ರತೀಕ್ಷ ತೃತೀಯ ಬಹು ಮಾನ ಪಡೆದುಕೊಂಡರು. ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗಳು ಮ್ಯಾರಥಾನ್ನಲ್ಲಿ ಪಾಲ್ಗೊಂಡ ನಂತರ ವಾಲಗಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕೂರ್ಗ್ ವೆಲ್ನೆಸ್ ಫೌಂಡೇಶನ್ನ ನೆಲ್ಲಮಕ್ಕಡ ಸಮೃತ್, ಅಯ್ಯಪ್ಪ, ವಿಕಾಸ್ ಹಾಗೂ ಚೆಶೈರ್ ಹೋಮ್ನ ಮುಖ್ಯ ಶಿಕ್ಷಕ ಶಿವರಾಜ್ ಮತ್ತಿತರರು ಇದ್ದರು.
- ಪುತ್ತಂ ಪ್ರದೀಪ್