ಕೂಡಿಗೆ ಗ್ರಾ.ಪಂ. ಸಾಮಾನ್ಯ ಸಭೆ

ಕಣಿವೆ, ಡಿ. ೯: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಂಟು ಮಂದಿ ವಾಟರ್ ಮ್ಯಾನ್‌ಗಳಿಗೆ ಮೂರು ತಿಂಗಳಿAದ ವೇತನ ನೀಡದೇ ಸತಾಯಿಸುತ್ತಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ವೇತನ ಬಿಡುಗಡೆಗೊಳಿಸದ ಕ್ರಮದ ವಿರುದ್ಧ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೂಡಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರೂ ಸೇರಿದಂತೆ ಸದಸ್ಯರು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಕಳೆದ ಎರಡೂವರೆ ವರ್ಷಗಳಿಂದ ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿಯಿಂದ ಹಿಂದುಳಿದು ಅಧೋಗತಿಗೆ ಸಾಗಲು ಇಓ ಕಾರಣ ಎಂದು ಸದಸ್ಯ ಟಿ.ಪಿ. ಹಮೀದ್, ರವಿ, ಜಯಶೀಲಾ ಪ್ರಸಂಗ ನಡೆಯಿತು.

ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೂಡಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರೂ ಸೇರಿದಂತೆ ಸದಸ್ಯರು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಕಳೆದ ಎರಡೂವರೆ ವರ್ಷಗಳಿಂದ ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿಯಿಂದ ಹಿಂದುಳಿದು ಅಧೋಗತಿಗೆ ಸಾಗಲು ಇಓ ಕಾರಣ ಎಂದು ಸದಸ್ಯ ಟಿ.ಪಿ. ಹಮೀದ್, ರವಿ, ಜಯಶೀಲಾ ಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪಂಚಾಯಿತಿಯಲ್ಲಿ ಪಿಡಿಓ ಕಚೇರಿಯಲ್ಲಿ ಇರದ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಭೆಯಲ್ಲಿ ನೇರವಾಗಿ ಆರೋಪ ಮಾಡಿದ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ, ಪಂಚಾಯಿತಿಯ ಅಮಾಯಕರು ಮತ್ತು ಬಡವರು ತಮ್ಮ ಕೆಲಸಗಳಿ ಗೆಂದು ನೀಡುವ ಅರ್ಜಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.

ಸೀಗೆಹೊಸೂರಿನ ಪರಿಶಿಷ್ಟ ಜಾತಿಯ ಗಂಗಮ್ಮ ಎಂಬವರು ತಮ್ಮ ಪತಿ ಸಾವನ್ನಪ್ಪಿದ ಮರಣ ನಿಧಿಯ ಅರ್ಜಿ ನೀಡಿದರೂ ಕೂಡ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸಿಲ್ಲ.

ಹೀಗೆಯೇ ಇನ್ನೂ ಅನೇಕ ಮಂದಿ ದೂರದ ಊರುಗಳಿಂದ ದುಪ್ಪಟ್ಟು ಹಣ ವ್ಯಯಿಸಿ ಪಂಚಾಯಿತಿಗೆ ಅಲೆಯುವುದು ತಪ್ಪಬೇಕು ಎಂದು ಜಯಶ್ರೀ ಹೇಳಿದರು. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿತ ವಿಷಯಗಳನ್ನು ಸರಿಯಾಗಿ ಬರೆದುಕೊಳ್ಳದೇ ಕನ್ನಡದ ಅಕ್ಷರಗಳನ್ನು ತಪ್ಪಾಗಿ ಬರೆಯುತ್ತಿರುವ ಬಗ್ಗೆ ಜಯಶ್ರೀ ಪಿಡಿಓರನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯರಾದ ಮೋಹಿನಿ ತಮ್ಮಣ್ಣೇಗೌಡ, ಲಕ್ಷಿö್ಮ, ವಾಣಿ, ರವಿ, ಅನಂತು, ಪಂಚಾಯಿತಿ ಕಾರ್ಯದರ್ಶಿ ಪುನೀತ್ ಇದ್ದರು.