ಸುಂಟಿಕೊಪ್ಪ, ಡಿ.೯: ಒತ್ತುವರಿ ಯಾಗಿದ್ದ ಜಾಗವನ್ನು ಅಧಿಕಾರಿಗಳು ತೆರವುಗೊಳಿಸಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದೆ. ಕುಶಾಲನಗರ ತಾಲೂಕು ತಹಶೀಲ್ದಾರ್ ಅವರ ಆದೇಶದಂತೆ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದ ಸರ್ವೆ ನಂ.೩೫ ರ ೦.೪೪ ಎಕರೆ, ಸರ್ವೆ ನಂ ೧೨೪ ರ ೦.೩೬ ಎಕರೆ ಹಾಗೂ
(ಮೊದಲ ಪುಟದಿಂದ) ಸರ್ವೆ ನಂ ೧೫೪ ರ ೧.೦೪ ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆಗಳನ್ನು ತಾಲೂಕು ಭೂ ಮಾಪಕರು ಅಳತೆ ಮಾಡಿ ನಕ್ಷೆ ತಯಾರಿಸಿ ಒತ್ತುವರಿದಾರರಿಂದ ಜಾಗ ತೆರವುಗೊಳಿಸಿ ಅಭಿವೃದ್ಧಿಪಡಿಸುವ ಸಲುವಾಗಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಹೆಚ್.ಪಿ. ರವೀಶ್ ಅವರಿಗೆ ಸುಂಟಿಕೊಪ್ಪ ಕಂದಾಯ ಅಧಿಕಾರಿಗಳು ಹಸ್ತಾಂತರಿಸಿದರು.
ಇದೇ ವೇಳೆ ಕೊಡಗರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರತ, ಸದಸ್ಯರಾದ ಆರ್. ಸುನಿತ್, ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕ ಎಂ.ಹೆಚ್. ಪ್ರಶಾಂತ್, ಬಿ.ಎನ್. ಜಯಂತ್, ಸರ್ವೇಯರ್ ಜಗನ್ನಾಥ್, ಸಿಬ್ಬಂದಿಗಳಾದ ಅಣ್ಣಪ್ಪ, ಡಿ.ಎಸ್. ಧನಂಜಯ, ಮಂಜುನಾಥ್, ಸುನೀಲ್, ಒತ್ತುವರಿದಾರರುಗಳಾದ ಸುಭಾಷ್ ಪೈ, ಕಾವೇರಪ್ಪ, ಎನ್.ಟಿ. ಅಮಿತ್ ಇದ್ದರು.