ಮಡಿಕೇರಿ, ಡಿ. ೮: ಇಲ್ಲಿನ ಲಿಟಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ಯಶ್ವಿತ್ನಿಂದ ಮಕ್ಕಳ ದಿನಾಚರಣೆ ಬಗ್ಗೆ ಭಾಷಣದೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ ಮಾತನಾಡಿ; ಮಕ್ಕಳ ಕಲಿಕೆ ಹಾಗೂ ಮಕ್ಕಳಲ್ಲಿರಬೇಕಾದ ಒಳ್ಳೆಯ ನಡವಳಿಕೆ ಬಗ್ಗೆ ತಿಳಿ ಹೇಳಿದರು. ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ; ಈಗಿನ ಮಕ್ಕಳಲ್ಲಿ ದುಶ್ಚಟಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿಸಿದರು.
ಪುಟಾಣಿ ಮಕ್ಕಳು ಚಾಚಾ ನೆಹರು ಬಗ್ಗೆ ಅಭಿನಯ ಗೀತೆ ಹಾಡಿದರು. ನಾಲ್ಕನೇ ತರಗತಿ ಮಕ್ಕಳು ಬಾಲ ಕಾರ್ಮಿಕರ ಬಗ್ಗೆ ಜಾಗೃತಿ ಮೂಡಿಸುವ ನಾಟಕ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಸುನಿತಾ, ಆಡಳಿತ ಮಂಡಳಿಯ ಪರ್ಲಕೋಟಿ ಪ್ರೀತು, ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ ಇದ್ದರು. ಇದೇ ಸಂದರ್ಭ ಜಾನಕಿ ಬೆಳ್ಯಪ್ಪ ಹಾಗೂ ರಾಣಿ ಮಾಚಯ್ಯ ಅವರುಗಳನ್ನು ಸನ್ಮಾನ ಮಾಡಲಾಯಿತು. ವಿದ್ಯಾರ್ಥಿ ಸಾನ್ವಿಕ್ ಸ್ವಾಗತಿಸಿದರೆ, ಪವಿನ್ ವಂದಿಸಿದರು.