ಕೂಡಿಗೆ, ಡಿ. ೯: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಪುರುಷೋತ್ತಮ ಹಾಕಿ ಇಂಡಿಯಾ ಜೂನಿಯರ್ ಮೆನ್ ಅಕಾಡೆಮಿ ಚಾಂಪಿಯನ್ ಶಿಪ್ ೨೦೨೩ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. ರಾಷ್ಟಿçÃಯ ಮಟ್ಟದ ಹಾಕಿ ಕ್ರೀಡಾಕೂಟವು ತಮಿಳುನಾಡಿನಲ್ಲಿ ನಡೆಯಲಿದೆ. ಪುರುಷೋತ್ತಮ ಹುಬ್ಬಳ್ಳಿ ಹಾಕಿ ಅಕಾಡೆಮಿ ತಂಡದಲ್ಲಿ ಸ್ಥಾನ ಪಡೆದು, ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ತರಬೇತಿಯನ್ನು ಕ್ರೀಡಾ ಶಾಲೆಯ ಹಾಕಿ ತರಬೇತಿದಾರ ವೆಂಕಟೇಶ್ ನೀಡಿದ್ದಾರೆ.