ಗೋಣಿಕೊಪ್ಪ, ಡಿ. ೯: ಮಕ್ಕಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಮಹತ್ವ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಕ್ಯಾಲ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಕಲಾರ್ಪಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಕ್ಕಳ ಪ್ರತಿಭೆಗೆ ಸೂಕ್ತ ಬೆಂಬಲ ಪಾಲಕರಿಂದ ದೊರೆಯಬೇಕಿದೆ. ಇದರಿಂದ ಉತ್ತಮ ಪ್ರಜೆಯಾಗಿ ರೂಪಿಸಬಹುದು ಎಂದರು.

ವಿದ್ಯಾರ್ಥಿಗಳು ಸಂಸ್ಕೃತಿ ಬಿಂಬಿಸುವ ಕಲಾ ಪ್ರದರ್ಶನ ನೀಡಿದರು. ನೃತ್ಯ, ಕಿರು ನಾಟಕ, ನಾದಪ್ರಿಯ, ವೇದಪ್ರಿಯ, ನಟರಾಜ ಕಲೆಗಳು ಮೂಡಿ ಬಂತು. ದೀಪಾಲಂಕಾರದ ಮೂಲಕ ವಿದ್ಯಾರ್ಥಿಗಳು ವಿಶೇಷತೆ ಮೂಡಿಸಿದರು. ಶಾಸ್ತಿçÃಯ, ಜನಪದ, ಲಘು ಸಂಗೀತ, ವಾದ್ಯಗೋಷ್ಠಿ ಪ್ರಸ್ತುತ ಪಡಿಸಿದರು. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ವಾನಿಸಲಾಯಿತು. ಶಾಲಾ ಸಂಸ್ಥಾಪಕ ದತ್ತ ಕರುಂಬಯ್ಯ, ನಿರ್ದೇಶಕಿ ಅಶ್ವಿನಿ ನಾಚಪ್ಪ, ಪ್ರಾಂಶುಪಾಲ ಗೌರಮ್ಮ ನಂಜಪ್ಪ ಇದ್ದರು.