ಕರಿಕೆ, ಡಿ. ೯: ಇಲ್ಲಿಗೆ ಸಮೀಪದ ಪಟ್ಟಿಘಾಟ್ ಮೀಸಲು ಅರಣ್ಯ ದಂಚಿನ ಪಚ್ಚೆಪಿಲಾವು ಎಂಬಲ್ಲಿ ಕಾಡಾನೆ ಹಿಂಡು ಗ್ರಾಮದ ಒಳಗೆ ಲಗ್ಗೆ ಇಟ್ಟು ಬೆಳೆ ನಷ್ಟ ಮಾಡಿರುವ ಘಟನೆ ನಡೆದಿದೆ. ಚೆತ್ತುಕಾಯ ಪಚ್ಚೆಪಿಲಾವು ನಿವಾಸಿ ಹೆಚ್.ಎಂ. ನಂಜAಡ ಎಂಬವರ ತೋಟಕ್ಕೆ ತಡರಾತ್ರಿ ನಾಲ್ಕು ಕಾಡಾನೆಗಳ ಗುಂಪು ದಾಳಿ ಮಾಡಿ ಸಾವಿರಾರು ರೂಪಾಯಿ ಮೌಲ್ಯ ದ ಅಡಿಕೆ, ಬಾಳೆ ಫಸಲು ತಿಂದು ಹಾನಿ ಮಾಡಿದ್ದು, ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.