ಸೋಮವಾರಪೇಟೆ, ಡಿ. ೯: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮದ ವಾರ್ಡ್ ಸಭೆ ತಾ. ೧೮ ಪೂರ್ವಾಹ್ನ ೧೦.೩೦ ಕ್ಕೆ ಸದಸ್ಯ ಪ್ರವೀಣ್ ಅಧ್ಯಕ್ಷತೆಯಲ್ಲಿ ತಣ್ಣೀರುಹಳ್ಳ ಸಮುದಾಯ ಭವನದಲ್ಲಿ ನಡೆಯಲಿದೆ.

ನೇಗಳ್ಳೆ-ಕರ್ಕಳ್ಳಿ ಗ್ರಾಮದ ವಾರ್ಡ್ ಸಭೆ ಅಪರಾಹ್ನ ೨ ಗಂಟೆಗೆ ಸದಸ್ಯ ರಾಮ್‌ದೇವ್ ಅಧ್ಯಕ್ಷತೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಗಳ್ಳೆ ಕರ್ಕಳ್ಳಿಯಲ್ಲಿ ನಡೆಯಲಿದೆ. ಯಲಕನೂರು ಗ್ರಾಮದ ವಾರ್ಡ್ ಸಭೆ ತಾ. ೧೯ ರಂದು ಪೂರ್ವಾಹ್ನ ೧೦.೩೦ಕ್ಕೆ ಸದಸ್ಯೆ ಸುಮಿ ಅಧ್ಯಕ್ಷತೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕನೂರು ಮತ್ತು ನೇರುಗಳಲೆ ಗ್ರಾಮದ ವಾರ್ಡ್ ಸಭೆ ಅಪರಾಹ್ನ ೨ ಗಂಟೆಗೆ ಸದಸ್ಯ ಅಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ನೇರುಗಳಲೆ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಆರ್. ವಿನೋದ್ ತಿಳಿಸಿದ್ದಾರೆ.