ಮಡಿಕೇರಿ, ಡಿ. ೯: ಮಡಿಕೇರಿಯ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಂಘಟನಾ ಪ್ರವಾಸದ ಸಭೆ ನಡೆಯಿತು.
ದ್ವಿತೀಯ ಬಾರಿಗೆ ಮಡಿಕೇರಿಗೆ ಆಗಮಿಸಿದ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಅವರನ್ನು ಪಾದಪೂಜೆ ಹಾಗೂ ಪೂರ್ಣಕುಂಭ ಕಲಶದೊಂದಿಗೆ ಆರತಿ ಮಾಡಿ ಗೌರವಪೂರ್ವಕವಾಗಿ ಸ್ವಾಗತ ಮಾಡಲಾಯಿತು.
ಸಂಘಟನಾ ಪ್ರವಾಸದ ಜವಾಬ್ದಾರಿಯನ್ನು ಹೊತ್ತಂತಹ ರಾಜ್ಯಾಧ್ಯಕ್ಷ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಕಲ್ಬುರ್ಗಿ, ಕಾರ್ಯದರ್ಶಿ ಪ್ರೊ. ಧನಪಾಲ್, ಕೋಶಾಧಿಕಾರಿ ಪರಮೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಹಾಗೂ ಶ್ರೀ ಮಠದ ಟ್ರಸ್ಟ್ನ ಮತ್ತು ಹೇಮತುಂಗ ಪತ್ರಿಕೆಯ ಸಂಪಾದಕ ತಿಮ್ಮಶೆಟ್ಟಿ ಹಾಗೂ ಸಂಘಟನಾ ಕಾರ್ಯದರ್ಶಿ ಕೊಳ್ಳೆಗಾಲದ ಮೋಹನ್ ಆಗಮಿಸಿದ್ದರು.
ಅಧ್ಯಕ್ಷತೆಯನ್ನು ಮಡಿಕೇರಿ ದೇವಾಂಗ ಸಂಘದ ಅಧ್ಯಕ್ಷ ಗಜಾನನ ವಹಿಸಿಕೊಂಡು ದೇವಾಂಗ ಸಂಘದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಧನ್‌ಪಾಲ್ ರಾಜ್ಯ ಸಂಘದ ಹಲವಾರು ವಿಚಾರಗಳನ್ನು ಸಭೆಗೆ ತಿಳಿಸಿದರು. ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿ, ರಾಜ್ಯದೆಲ್ಲೆಡೆ ಸದಸ್ಯತನದ ಚಳುವಳಿಯನ್ನು ಹಮ್ಮಿಕೊಂಡು ಕಾರ್ಯಪ್ರವರ್ತರಾಗಬೇಕು ಹಾಗೂ ಹಲವಾರು ಘಟಕಗಳನ್ನು ರಚನೆ ಮಾಡಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ರಾಜ್ಯ ದೇವಾಂಗ ಸಂಘಕ್ಕೆ ಮಾಹಿತಿ ಕೊಡಬೇಕೆಂದು ತಿಳಿಸಿದರು.
ತಿಮ್ಮಶೆಟ್ಟಿ ಅವರು ಹಂಪೆಯಲ್ಲಿ ತಾ. ೨೫ ರಂದು ನಡೆಯುವ ಉತ್ಸವದ ಬಗ್ಗೆ ಸಭೆಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭ ನೂತನವಾಗಿ ಕೊಡಗು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರನ್ನಾಗಿ, ಮಡಿಕೇರಿ ದೇವಾಂಗ ಸಂಘದ ಕಾರ್ಯದರ್ಶಿ ಡಿ.ವಿ. ಜಗದೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಕುಶಾಲನಗರದ ಚಂದ್ರಶೇಖರ ಅವರನ್ನು ಆಯ್ಕೆಮಾಡಿ ಜವಾಬ್ದಾರಿಯನ್ನು ವಹಿಸಲಾಯಿತು.
ವೇದಿಕೆಯಲ್ಲಿ ಕುಶಾಲನಗರ ಅಧ್ಯಕ್ಷ ರಾಜೇಶ್ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ಪದ್ಮಾ ಮಹೇಶ್ ಉಪಸ್ಥಿತರಿದ್ದರು. ಮಹಿಳಾ ಸಮಾಜದ ಸದಸ್ಯರಾದ ಭಾರತಿ ಸುಬ್ಬು, ಲಕ್ಷಿö್ಮÃ ಮೋಹನ್, ನಂದಿನಿ ಗಣೇಶ್, ಭಾರತಿ ರಮೇಶ್, ಜಯಶ್ರೀ ಗವಿ ಪ್ರಾರ್ಥಿಸಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಭಾರತಿ ರಮೇಶ್ ಸ್ವಾಗತಿಸಿ, ಕುಶಾಲನಗರದ ಅಧ್ಯಕ್ಷ ರಾಜೇಶ್ ವಂದಿಸಿದರು. ಡಿ.ವಿ. ಜಗದೀಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಹಾಗೂ ಕುಶಾಲನಗರದ ಸಂಘದ ಪದಾಧಿಕಾರಿಗಳು, ಮಹಿಳಾ ಸಮಾಜದ ಪದಾಧಿಕಾರಿಗಳು, ಕುಲಬಾಂಧವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.