ಮಡಿಕೇರಿ, ಡಿ. ೯: ಮೊಗೇರ ಸಮಾಜದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವದರೊಂದಿಗೆ ಕ್ರೀಡಾ ಸ್ಫೂರ್ತಿ ಮೆರೆಯಬೇಕೆಂದು ಅತಿಥಿ ಗಣ್ಯರು ಕರೆ ನೀಡಿದರು.

ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ, ಕೊಡಗು ಮೊಗೇರ ಫುಟ್ಬಾಲ್ ಕ್ಲಬ್ ಸಹಯೋಗದೊಂದಿಗೆ ಏರ್ಪಡಿಸಲಾಗಿರುವ ಪ್ರಥಮ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜದ ಗೌರವ ಸ¯ಹೆಗಾರ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ. ರವಿ ಮಾತನಾಡಿ; ಮೊಗೇರ ಸಮಾಜ ದವರಿಗೆ ಫುಟ್ಬಾಲ್ ಪಂದ್ಯಾವಳಿ ಆಯೋಜನೆ ಮಾಡಬೇಕೆಂಬ ಆಲೋಚನೆ ಬಹಳ ವರ್ಷಗಳಿಂದ ಇದ್ದಿತು, ಆದರೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಕ್ಲಬ್ ಮೂಲಕ ಆಯೋಜನೆ ಮಾಡಿರುವದು ಶ್ಲಾಘನೀಯ. ಮೊಗೇರ ಸಮಾಜದಲ್ಲಿ ರಾಜ್ಯ, ರಾಷ್ಟçಮಟ್ಟದ ಆಟಗಾರರಿ ರುವದು ಹೆಮ್ಮೆಯ ವಿಚಾರ. ಅವರುಗಳನ್ನೆಲ್ಲ ಒಂದೇ ವೇದಿಕೆಯಡಿ ತರಬೇಕಿದೆ. ಮುಂದಿನ ಮೇ ತಿಂಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಿದ್ದು, ಅಲ್ಲಿಯೂ ಫುಟ್ಬಾಲ್‌ಗೆ ಅವಕಾಶ ನೀಡ ಲಾಗುವದು. ಸಮಾಜ ಬಾಂಧವರು ಜನಾಂಗದ ಸಂಸ್ಕೃತಿ, ಆಚಾರ ವಿಚಾರ ಗಳನ್ನು ಉಳಿಸಿ ಬೆಳೆಸಿ ಕೊಳ್ಳುವದ ರೊಂದಿಗೆ ಕ್ರೀಡಾಕೂಟ ಹಮ್ಮಿಕೊಳ್ಳಬೇಕು.

(ಮೊದಲ ಪುಟದಿಂದ) ಕ್ರೀಡಾಕೂಟದ ಮೂಲಕವೇ ಎಲ್ಲ ಜನಾಂಗದ ಸಂಘಟನೆ ಆಗುತ್ತಿದ್ದು, ಮೊಗೇರ ಸಮಾಜದ ಸಂಘಟನೆ ಕೂಡ ಆ ಮೂಲಕವೇ ಆಗಿದೆ, ಅದನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ಕರೆ ನೀಡಿದರು.

ಎಲ್ಲರೂ ಬಾಗಿಯಾಗಬೇಕು

ಮತ್ತೋರ್ವ ಅತಿಥಿ, ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ; ವರ್ಷಂಪ್ರತಿ ವಿವಿಧ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿಕೊಂಡು ಸಂಘಟನಾತ್ಮಕವಾಗಿ ಮುಂದೆ ಸಾಗುತ್ತಿರುವ ಮೊಗೇರ ಸಮಾಜದವರು ಇನ್ನೂ ಒಂದು ಹೆಜ್ಜೆ ಮುಂದೆ ಇರಿಸಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆ ಮಾಡಿರುವದು ಶ್ಲಾಘನೀಯ ಕಾರ್ಯ. ಎಲ್ಲೆಡೆ ಕ್ರಿಕೆಟ್‌ಗೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ಫುಟ್ಬಾಲ್ ಪಂದ್ಯಾಟ ನಡೆಸುತ್ತಿರುವದರಿಂದ ಇನ್ನಷ್ಟು ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ಈ ಕ್ರೀಡೆಯಿಂದ ದೈಹಿಕವಾಗಿ ಸದೃಢರಾಗುವದ ರೊಂದಿಗೆ ಬುದ್ಧಿ ಕೂಡ ಚುರುಕಾಗುತ್ತದೆ ಎಂದು ಹೇಳಿದರು. ಇಂತಹ ಕ್ರೀಡಾಕೂಟಗಳು ನಡೆದಾಗ ಕ್ರೀಡಾಪಟುಗಳು ಮಾತ್ರವಲ್ಲದೆ ಸಮಾಜದವರು ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಹಾಗಾದಾಗ ಪರಸ್ಪರ ಪರಿಚಯದೊಂದಿಗೆ ಸಂಘಟನೆ ಬಲಗೊಳ್ಳಲಿದೆ. ಸಂಸ್ಕೃತಿ, ಆಚಾರ- ವಿಚಾರಗಳ ವಿನಿಮಯವೂ ಆಗಲಿದೆ. ಎಂದಿಗೂ ಅವರವರ ಸಂಸ್ಕೃತಿ, ಭಾಷೆಯನ್ನು ಮರೆಯಬಾರದೆಂದು ಹೇಳಿದರು.

ಗ್ರಾಮೀಣ ಕ್ರೀಡೆ ಕಾಣುತ್ತಿಲ್ಲ

ಸಮಾರಂಭ ಉದ್ಘಾಟನೆ ಮಾಡಿದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ದನ ಮರಗೋಡು ಮಾತನಾಡಿ; ಸಮಾಜದ ಸಂಘಟನೆ ಆಗಬೇಕಾದರೆ ಇಂತಹ ಕ್ರೀಡಾಕೂಟಗಳು ಅತ್ಯವಶ್ಯ. ಇದೀಗ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಗೋಲಿ ಮುಂತಾದ ಆಟಗಳು ಕಣ್ಮರೆಯಾಗಿವೆ. ಈ ನಡುವೆ ಮೊಗೇರ ಸಮಾಜದ ವತಿಯಿಂದ ಜಿಲ್ಲೆಯಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆ ಮಾಡಿರುವದು ವಿಶೇಷವಾಗಿದೆ, ಈ ಕ್ರೀಡೆಯಿಂದ ವ್ಯಾಯಮದೊಂದಿಗೆ ಆರೋಗ್ಯ ವೃದ್ಧಿಯಾಗಲಿದೆ ಎಂದು ಹೇಳಿದರು.

ನಾಲ್ಕು ‘ಎಸ್’ ನೆನಪಿರಲಿ

ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಕ್ರಿಸ್ಟೋಫರ್ ಮಾತನಾಡಿ, ಕ್ರಿಡಾಪಟುಗಳು ಯಶಸ್ಸು ಗಳಿಸಬೇಕಾದರೆ ‘ಸ್ಪೀಡ್, ಸ್ಕಿಲ್, ಸ್ಟೆಮಿನ, ಸ್ಟೆçಂತ್’ ಈ ನಾಲ್ಕು ಎಸ್‌ಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ಮೊಗೇರ ಸಮಾಜದಲ್ಲಿ ಇಷ್ಟೊಂದು ಆಟಗಾರರಿರುವದು ಹೆಮ್ಮೆಯ ವಿಷಯ, ಆಟಗಾರರು ಯಾವದಾದರೂ ಕ್ಲಬ್‌ನೊಂದಿಗೆ ನೋಂದಣಿ ಮಾಡಿಕೊಂಡು ಲೀಗ್ ಆಡಿದರೆ ಮಾತ್ರ ಗುರುತಿಸಿಕೊಳ್ಳಲು ಸಾಧ್ಯ. ಆ ಮೂಲಕ ಜಿಲ್ಲೆ, ರಾಜ್ಯ, ರಾಷ್ಟçಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.

ರಾಜ್ಯ ಮಟ್ಟದ ಪಂದ್ಯಾವಳಿ

ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಮೊಗೇರ ಫುಟ್ಬಾಲ್ ಕ್ಲಬ್‌ನ ಅಧ್ಯಕ್ಷ ಎಂ.ಎA.ಅಶೋಕ ಮಾತನಾಡಿ, ಎಲ್ಲರೂ ಯಾವದೇ ಗೊಂದಲ ಮಾಡಿಕೊಳ್ಳದೆ ಸಾವಧಾನದಿಂದ, ಕ್ರೀಡಾಸ್ಪೂರ್ತಿಯಿಂದ ಆಟವಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜನೆ ಮಾಡುವ ಉದ್ದೇಶವಿದ್ದು, ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು. ವೇದಿಕೆಯಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರು, ಮೊಗೇರ ಸಮಾಜದ ಹಿರಿಯರಾದ ಪೊಡಿಯ, ಸದಸ್ಯ ಚಂದ್ರ ಇದ್ದರು.

ಚಿಂತನ ಪ್ರಾರ್ಥಿಸಿದರೆ, ಆಯೋಜಕರಾಗಿರುವ ರಮೇಶ್ ಪಿ.ಸಿ. ಸ್ವಾಗತಿಸಿದರು. ವಿವೇಕ್ ಮೊಗೇರ ನಿರೂಪಿಸಿ, ವಂದಿಸಿದರು.